Advertisement

ಅಟಲ್‌ ಟಿಂಕರಿಂಗ್‌ ಲ್ಯಾಬ್‌: ಡ್ಯಾನ್ಸಿಂಗ್‌ ರೋಬೋಟ್‌ ಚಮತ್ಕಾರ !

10:54 PM Feb 08, 2020 | Sriram |

ತೆಕ್ಕಟ್ಟೆ: ವಿದ್ಯಾರ್ಥಿಗಳಲ್ಲಿ ಅಡಗಿ ರುವ ಸೃಜನಶೀಲತೆ, ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಯಲ್ಲಿ ವೈಜ್ಞಾನಿಕ ಸಂಶೋಧನಾ ಮನೋಭಾವ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಿಂದ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸರಕಾರಿ ಪ.ಪೂ. ಕಾಲೇಜಿನಲ್ಲಿ ಅಟಲ್‌ ಟಿಂಕರಿಂಗ್‌ಲ್ಯಾಬ್‌ ಆರಂಭವಾಗಿದ್ದು, ಹೊಸ ಪೀಳಿಗೆಯ ಆವಿಷ್ಕಾರ, ಸರ್ವತೋ ಮುಖ ಅಭಿವೃದ್ಧಿಯ ಆಕರ್ಷಕ ಕೇಂದ್ರ ಬಿಂದುವಾಗಿದೆ.

Advertisement

ಏನಿದು ಅಟಲ್‌ ಟಿಂಕರಿಂಗ್‌ ಲ್ಯಾಬ್‌
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಲೋಚನಾ ಕ್ರಮ ಅವರಲ್ಲಿನ ಕೌಶಲಾಭಿ ವೃದ್ದಿಗೊಳಿಸುವ ನಿಟ್ಟಿನಿಂದ ಮುಂದುವರಿದ ಜಗತ್ತಿನಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಸಂವೇದನಾಶೀಲ ಆಧುನಿಕ ತಂತ್ರಜ್ಞಾನ (ಟಚ್‌ ಸೆನ್ಸಾರ್‌ ಟೆಕ್ನಾಲಜಿ)ಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳು ತ್ತಿದ್ದಾರೆ. ತಾಂತ್ರಿಕ ವಾತಾವರಣ ನಿರ್ಮಿಸುವ ನಿಟ್ಟಿನಿಂದ ಲ್ಯಾಬ್‌ನ ಗೋಡೆಯ ಮೇಲೆ ಅದಕ್ಕೆ ಪೂರಕ ಮಾಹಿತಿ ಆಧಾರಿತ ಪೋಸ್ಟರ್‌ ಬಿತ್ತರಿಸಲಾಗಿದೆ. ತಂತ್ರಜ್ಞಾನದ ಮಾದರಿಯ ಮೂಲ ಸ್ವರೂಪವನ್ನು ಅಧ್ಯಯನಗೈಯುವ ನಿಟ್ಟಿನಿಂದ ದೃಶ್ಯ ಶ್ರಾವ್ಯಗಳ ( ಪ್ರಾಜೆಕ್ಟರ್‌) ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ವನ್ನು ಅನುಭವಿ ತರಬೇತಿದಾರರು ನಿರ್ವಹಿಸುತ್ತಿ ದ್ದಾರೆ. ವಿವಿಧ ವಿನ್ಯಾಸದ ವಿಜ್ಞಾನ ಮಾದರಿಯನ್ನು ಪ್ರದರ್ಶನ, ಅವುಗಳ ಮೂಲಸ್ವರೂಪದ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ಡ್ಯಾನ್ಸಿಂಗ್‌ ರೋಬೊಟ್‌ ಆಕರ್ಷಣೆ
ಅಟಲ್‌ ಟಿಂಕರಿಂಗ್‌ ಲ್ಯಾಬ್‌ನಲ್ಲಿ ತ್ರಿಡಿ ಪ್ರಿಂಟಿಂಗ್‌ ಮೆಶಿನ್‌, ಆರ್‌ಎಫ್‌ ಐಡಿ ಕಾರ್ಡ್‌ ಬಳಕೆ , ಸೋಲಾರ್‌ ದಾರಿಯಲ್ಲಿ ಸೆನ್ಸಾರ್‌ ಬಳಸಿ ವಿದ್ಯುತ್‌ ಮಿತ ಬಳಕೆ, ಟೆಲಿಸ್ಕೋಪ್‌, ಲೈನ್‌ ಫಾಲೋವರ್‌, ಗೃಹೋಪಯೋಗಿ ವಾಟರ್‌ ಲೆವೆಲ್‌ ಇಂಡಿಕೇಟರ್‌, ರಸ್ತೆ ಸುರಕ್ಷತೆಗಾಗಿ ಲೈನ್‌ ಫಾಲೋವರ್‌ ಟಚ್‌ ಸೆನ್ಸಾರ್‌ ಟೆಕ್ನಾಲಜಿ ಮಾದರಿಗಳು ವಿದ್ಯಾರ್ಥಿಗಳಿಂದ ಪ್ರದರ್ಶನ ಗೊಂಡಿವೆ. ಸುಧಾರಿತ ಮೊಬೈಲ್‌ ಆ್ಯಪ್‌ನ ಮೂಲಕ ಬ್ಲೂಟೂತ್‌ ಸಹಾಯ ದಿಂದ ರೋಬೋಟ್‌ ನಿಯಂತ್ರಿಸಿ ವಿವಿಧ ಆಯಾಮಗಳಲ್ಲಿ ವ್ಯಾಯಾಮ ಸಹಿತ ಡಾನ್ಸ್‌ನ ಚಮತ್ಕಾರಗಳು ನೆರೆದವರನ್ನು ಆಕರ್ಷಿಸಿತು.

ಸ್ಪರ್ಧಾ ಮನೋಭಾವ ಬೆಳೆಸಲು ಸಹಕಾರಿ
ಮಕ್ಕಳ ಆಲೋಚನ ಕ್ರಮವನ್ನು ಹೆಚ್ಚಿಸುವ ಜತೆಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಫರ್ಧಿಸುವ ಮನೋಭಾವ ಬೆಳೆಸುವಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಸಹಕಾರಿ. ಪರಿಸರದ ಶಾಲಾ ವಿದ್ಯಾರ್ಥಿಗಳಿಗೂ ಕೂಡ ಬಳಕೆ ಮಾಡಿಕೊಳ್ಳಲು ಅವಕಾಶವಿದೆ.
-ಸುಜಾತಾ, ಪ್ರಾಂಶುಪಾಲರು, ತೆಕ್ಕಟ್ಟೆ ಸರಕಾರಿ ಪ.ಪೂ. ಕಾಲೇಜು.

ಆಸಕ್ತಿಗೆ ತಾಂತ್ರಿಕ ವಾತಾವರಣ ನಿರ್ಮಾಣ
ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ತಾಂತ್ರಿಕ ವಾತಾವರಣ ನಿರ್ಮಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಗುರುತಿಸಿ ಎಳವೆಯಲ್ಲಿಯೇ ಕಾರ್ಯಗತಗೊಳಿಸುವ ಮಹತ್ವದ ಕಾರ್ಯ ಈ ಲ್ಯಾಬ್‌ನಿಂದ ಸಹಾಯಕ ವಾಗುವುದು .
-ಗೌತಮ್‌, ಅಟಲ್‌ ಟಿಂಕರಿಂಗ್‌ ಲ್ಯಾಬ್‌ನ ತಂತ್ರಜ್ಞರು.

Advertisement
Advertisement

Udayavani is now on Telegram. Click here to join our channel and stay updated with the latest news.

Next