Advertisement

ಅಟಲ್‌ ಪಿಂಚಣಿ ಯೋಜನೆ: ಕೆವಿಜಿಗೆ ಪ್ರಶಸ್ತಿ

05:59 PM May 14, 2022 | Team Udayavani |

ಧಾರವಾಡ: ಕೆನರಾ ಬ್ಯಾಂಕ್‌ ಪ್ರಾಯೋಜಿತ ಪ್ರಮುಖ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಒಂದಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಅಟಲ್‌ ಪಿಂಚಣಿ ಯೋಜನೆ ನೋಂದಣಿಯಡಿ ತೋರಿದ ಅತ್ಯುತ್ತಮ ಸಾಧನೆಗಾಗಿ ಕೇಂದ್ರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡುವ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಆರು ಪ್ರಶಸ್ತಿಗಳನ್ನು ಪಡೆದಿದೆ.

Advertisement

ಚೆನ್ನೈಯಲ್ಲಿ ಶುಕ್ರವಾರ ನಡೆದ ಶೃಂಗಸಭೆಯಲ್ಲಿ ಬ್ಯಾಂಕ್‌ ಅಧ್ಯಕ್ಷ ಪಿ ಗೋಪಿಕೃಷ್ಣ ಅವರು ಪಿಂಚಣಿ ನಿಧಿ ಪ್ರಾಧಿಕಾರದ ಅಧ್ಯಕ್ಷ ಸುಪ್ರತಿಮ್‌ ಬಂಡೋಪಾಧ್ಯಾಯ ಅವರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಪಿ.ಗೋಪಿಕೃಷ್ಣ, ಅಟಲ್‌ ಪಿಂಚಣಿ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷಗಳ ನಂತರ ಪೂರ್ವ ನಿರ್ಧರಿತ ಪಿಂಚಣಿ ಪಡೆಯಲು ಅತ್ಯಂತ ಸುರಕ್ಷಿತ ಯೋಜನೆಯಾಗಿದೆ. ಇಲ್ಲಿಯವರೆಗೆ ಬ್ಯಾಂಕ್‌ 2,64,817 (ಸಂಚಿತ) ಖಾತೆಗಳನ್ನು ದಾಖಲಿಸಿಕೊಂಡಿದ್ದು, ಕಳೆದ ಹಣಕಾಸು ವರ್ಷವೊಂದರಲ್ಲೇ (2021-2022ರ ಅವಧಿಯಲ್ಲಿ) ಬ್ಯಾಂಕ್‌ 39,000 ಖಾತೆಗಳ ಗುರಿಗೆ ಬದಲಾಗಿ 58,603 ಖಾತೆಗಳನ್ನು ಮಾಡಿಸಿ ಹೊಸ ದಾಖಲೆ ಬರೆದಿದೆ ಎಂದರು.

ಕೇಂದ್ರ ಸರ್ಕಾರ ಪ್ರಾರಂಭಿಸಿದ ಎಲ್ಲ ಮೂರು ಸಾಮಾಜಿಕ ಭದ್ರತಾ ಯೋಜನೆಗಳ (ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನ್‌ ಜ್ಯೋತಿ ಮತ್ತು ಅಟಲ್‌ ಪಿಂಚಣಿ ಯೋಜನೆ) ಅನುಷ್ಠಾನದಲ್ಲಿ ತಮ್ಮ ಬ್ಯಾಂಕ್‌ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಿಬ್ಬಂದಿ ವರ್ಗದ ಪಾತ್ರ ಗಣನೀಯವಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 9 ಜಿಲ್ಲಾ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 90 ಲಕ್ಷ ಗ್ರಾಹಕರ ನೆಲೆಯೊಂದಿಗೆ 31,000 ಕೋಟಿ ವಹಿವಾಟು ನಡೆಸುತ್ತಿದೆ ಎಂದರು. ಪಿಂಚಣಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎ.ಜಿ. ದಾಸ್‌, ಪ್ರಾಧಿಕಾರದ ಪೂರ್ಣಾವಧಿ ಸದಸ್ಯ ದೀಪಕ ಮೊಹಂತಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next