ಭುವನೇಶ್ವರ: ಪಕ್ಷದ ಸಿದ್ಧಾಂತಗಳು ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ರಾಜಕಾರಣಿಗಳು ವೈಯಕ್ತಿಕ ಆತ್ಮೀಯತೆಯನ್ನು ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ.
ಇದಕ್ಕೊಂದು ನಿದರ್ಶನವೆಂಬಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೆಂದ್ರ ಸರಕಾರದ ಕಟು ಟೀಕಾಕಾರ್ತಿಯಾಗಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎದುರು ಬದುರು ಕುಳಿತು ಒಂದೇ ಟೇಬಲ್ಲಿನಲ್ಲಿ ಊಟ ಮಾಡಿದ್ದು ಭಾರೀ ಸುದ್ದಿಯಾಗಿದೆ.
ಇದು ಸಾಕಾರಗೊಂಡಿರುವುದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮನೆಯಲ್ಲಿ. ಪಟ್ನಾಯಕ್ ಜೊತೆಯಲ್ಲಿ ಅಮಿತ್ ಶಾ, ಮಮತಾ ಬ್ಯಾನರ್ಜಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರುಗಳಿದ್ದರು.
ಈಸ್ಟರ್ನ್ ಝೋನಲ್ ಕೌನ್ಸಿಲ್ ನ 24ನೇ ಸಭೆಯಲ್ಲಿ ಭಾಗವಹಿಸಲೆಂದು ಈ ನಾಯಕರು ಒಡಿಸ್ಸಾಕ್ಕೆ ಆಗಮಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಸಚಿವ ರಾಮೇಶ್ವರ್ ಓರನ್ ಅವರು ಈ ಭೋಜನ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.