ಲುಂಬಿನಿ: ಭಾರತ ಮತ್ತು ನೇಪಾಲದ ಸ್ನೇಹ ಹಿಮಾಲಯದಷ್ಟು ಗಾಢ ಮತ್ತು ಗಟ್ಟಿ. ಪ್ರಸ್ತುತದ ಜಾಗತಿಕ ವಿದ್ಯಮಾನಗಳಲ್ಲಿ ನೋಡುವುದಾದರೆ ಉಭಯ ದೇಶಗಳ ಸಂಬಂಧದಿಂದಾಗಿ ಇಡೀ ಮನುಕುಲಕ್ಕೇ ಒಳಿತಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗೌತಮ ಬುದ್ಧನ ಜನ್ಮದಿನದಂದೇ ನೇಪಾಲ ಪ್ರಧಾನಿ ಶೇರ್ ಬಹದ್ದೂರ್ ದೇಬಾ ಅವರ ಆಹ್ವಾನದ ಮೇರೆಗೆ ಬುದ್ಧನ ಜನ್ಮಸ್ಥಳ ಲುಂಬಿನಿಗೆ ತೆರಳಿದ್ದ ಮೋದಿ, ಹಿಮಾಲಯದಷ್ಟೇ ಸದೃಢವಾಗಿರುವ ನಮ್ಮ ಸಂಬಂಧವನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಮೂಲಕ ಚೀನಕ್ಕೆ ಟಾಂಗ್ ನೀಡಿದರು.
2020ರಲ್ಲಿ ಭಾರತ ಮತ್ತು ನೇಪಾಲದ ನಡುವೆ ಆದ ಗಡಿ ವಿವಾದದ ಬಳಿಕ ಮೋದಿ ಅವರು ಮೊದಲ ಬಾರಿ ನೇಪಾಲ ಪ್ರವಾಸ ಕೈಗೊಂಡಿದ್ದಾರೆ. ತನ್ನ ಭೇಟಿ ಅಂಗವಾಗಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ಹಿಂದಿನಿಂದಲೂ ಭಾರತ ಮತ್ತು ನೇಪಾಲ ದೇಶಗಳು ಸ್ನೇಹತ್ವ
ವನ್ನು ಗಟ್ಟಿ ಮಾಡುತ್ತಾ ಬಂದಿವೆ. ನಾವು ಸಮಾನ ಪರಂಪರೆ, ಸಂಸ್ಕೃತಿ, ನಂಬಿಕೆ ಮತ್ತು ಪ್ರೀತಿಯನ್ನು ಹೊಂದಿದ್ದೇವೆ. ಇದುವೇ ನಮ್ಮ ಅತೀ ದೊಡ್ಡ ಆಸ್ತಿ. ನಮ್ಮ ಎರಡೂ ರಾಷ್ಟ್ರಗಳು ಭಗವಾನ್ ಬುದ್ಧನ ನಂಬಿಕೆ
Related Articles
ಯತ್ತ ನಡೆಯುತ್ತಿವೆ. ಆತನಿಂದಾಗಿಯೇ ನಮ್ಮನ್ನು ಒಂದಾಗುವಂತೆ ಮತ್ತು ಒಂದೇ ಕುಟುಂಬದಂತೆ ಬಾಳಲು ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಗುಣಮಟ್ಟ ಶಿಕ್ಷಣಕ್ಕೆ ಕಲಿಕಾ ಚೇತರಿಕೆ: ಸಿಎಂ
ಸಾರಾನಾಥ್, ಬೋಧ್ ಗಯಾ, ಖುಷಿನಗರಗಳು ಭಾರತದಲ್ಲಿದ್ದರೆ, ಲುಂಬಿನಿ ನೇಪಾಲದಲ್ಲಿದೆ. ಈ ಪವಿತ್ರ ಸ್ಥಳಗಳು ಪರಂಪರೆ ಮತ್ತು ಮೌಲ್ಯಗಳು ಹಂಚಿಕೊಂಡಿರುವ ಸಂಕೇತಗಳಾಗಿವೆ. ರಾಮಾಯಣದ ಸೀತೆಯ ಜನ್ಮಸ್ಥಳ ಜನಕ್‌ಪುರ. ಹೀಗಾಗಿ ನಮ್ಮ ರಾಮ ಕೂಡ ನೇಪಾಲವಿಲ್ಲದೆ ಪರಿಪೂರ್ಣನಾಗಲಾರ. ಈಗ ಭಾರತದಲ್ಲಿ ಅತ್ಯದ್ಭುತ ರಾಮಮಂದಿರ ನಿರ್ಮಿಸಲಾಗುತ್ತಿದ್ದು, ಇದರಿಂದ ನೇಪಾಲದ ಜನರೂ ಭಾರತೀಯರಂತೆಯೇ ಸಂತಸಗೊಳ್ಳುತ್ತಾರೆ ಎಂದರು.