Advertisement

ನೈಜೀರಿಯಾದ ಚರ್ಚ್‌ನಲ್ಲಿ ಭೀಕರ ಗುಂಡಿನ ದಾಳಿ : ಕನಿಷ್ಠ 50 ಜನರ ಸಾವು

03:42 PM Jun 06, 2022 | Team Udayavani |

ಅಬುಜಾ: ನೈಜೀರಿಯಾದ ಒಂಡೋ ರಾಜ್ಯದ ಕ್ಯಾಥೋಲಿಕ್ ಚರ್ಚ್‌ನ ಮೇಲೆ ಭಾನುವಾರ ಸಾಮೂಹಿಕ ಪ್ರಾರ್ಥನೆ ವೇಳೆ ದಾಳಿ ನಡೆಸಲಾಗಿದ್ದು ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

Advertisement

ನೈರುತ್ಯ ನೈಜೀರಿಯಾದಲ್ಲಿ ರಕ್ತಸಿಕ್ತ ದಾಳಿ ನಡೆದಿದ್ದು, ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರು ದಾಳಿಯನ್ನು ಬಲವಾಗಿ ಖಂಡಿಸಿ, ಹೇಯ ಕೃತ್ಯ ಎಂದಿದ್ದಾರೆ.

ದಾಳಿಕೋರರ ಗುರುತು ಮತ್ತು ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ. ಬಂದೂಕುಧಾರಿಗಳು ಚರ್ಚ್ ನಲ್ಲಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ ಮತ್ತು ಚರ್ಚ್‌ನಲ್ಲಿ ಸ್ಫೋಟಕಗಳನ್ನು ಸ್ಫೋಟಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಕೊಲ್ಲಲ್ಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next