Advertisement

ಕೊಳಚೆ ನೀರು, ತ್ಯಾಜ್ಯದ ಪರಿಣಾಮ ಲೆಬನಾನ್ ಸರೋವರದಲ್ಲಿ ಲಕ್ಷಾಂತರ ಮೀನುಗಳ ಸಾವು!

09:22 AM May 01, 2021 | Team Udayavani |

ಲೆಬನಾನ್: ಲೆಬನಾನ್ ನ ಲಿಟಾನಿ ನದಿಯ ಸರೋವರದಲ್ಲಿ ಸುಮಾರು 40 ಟನ್ ಗಳಷ್ಟು ಮೀನುಗಳು ಸಾವನ್ನಪ್ಪಿದ್ದು, ನದಿಯ ದಂಡೆ ಬಳಿ ರಾಶಿ,ರಾಶಿ ಮೀನುಗಳು ಕೊಳೆತ ಪರಿಣಾಮ ಸಮೀಪದ ಹಳ್ಳಿಗಳಿಗೆ ವಾಸನೆ ಆವರಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಕಷ್ಟವನ್ನುಇನ್ನು ದೇವರೇ ಕಾಪಾಡಬೇಕು: ಎಚ್ ಡಿಕೆ

ಲೆಬನಾನ್ ನ ಲಿಟಾನಿಯ ಅತೀ ಉದ್ದದ ಖ್ವಾರೌನ್ ಸರೋವರದಲ್ಲಿ ಸತ್ತು ಹೋಗಿರುವ ಮೀನುಗಳನ್ನು ಸ್ವಯಂಸೇವಕರು ಸಂಗ್ರಹಿಸಿ ಬೇರೆಡೆಗೆ ರವಾನಿಸುತ್ತಿದ್ದಾರೆ. ವರ್ಷಗಳ ಹಿಂದೆಯೇ ಕೊಳಚೆನೀರು ಮತ್ತು ತ್ಯಾಜ್ಯದಿಂದಾಗಿ ನೀರಿನ ಮಾಲಿನ್ಯದ ಬಗ್ಗೆ ಪರಿಸರವಾದಿಗಳು ಎಚ್ಚರಿಸಿದ್ದರು ಎಂದು ವರದಿ ಹೇಳಿದೆ.

ಸತ್ತುಹೋಗಿರುವ ಲಕ್ಷಾಂತರ ಮೀನುಗಳ ಸಮೀಪ ಕಸದ ರಾಶಿ ಹರಿಯುತ್ತಿದ್ದು, ಮತ್ತೊಂದೆಡೆ ನೊಣಗಳ ಹಿಂಡು ಹರಡಿಕೊಂಡಿದೆ. ಅಲ್ಲದೇ ಸಾವಿರಾರು ಮೀನುಗಳು ಕೊಳಚೆ ನೀರಿನಲ್ಲಿಯೇ ಕೊಳೆತು ಹೋಗಿರುವುದಾಗಿ ವರದಿ ತಿಳಿಸಿದೆ.

ಈ ಘಟನೆ ಹಲವಾರು ದಿನಗಳ ಹಿಂದೆಯೇ ನಡೆದಿರುವುದಾಗಿ ಸ್ಥಳೀಯ ಕಾರ್ಯಕರ್ತ ಅಹ್ಮದ್ ಅಸ್ಕರ್ ತಿಳಿಸಿದ್ದು, ಆರಂಭದಲ್ಲಿ ಮೀನುಗಳು ನದಿಯಲ್ಲಿ ತೇಲಲು ಶುರುವಾಗಿತ್ತು. ನಂತರ ಇದರ ಪ್ರಮಾಣ ಅತ್ಯಧಿಕವಾಗಿರುವುದಾಗಿ ತಿಳಿಸಿದ್ದಾರೆ.

Advertisement

ಕೆಲವೇ ದಿನಗಳಲ್ಲಿ ಸುಮಾರು 40 ಟನ್ ಗಳಷ್ಟು ಮೀನುಗಳು ಸಾವನ್ನಪ್ಪಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೀನುಗಳು ಸತ್ತಿರುವುದನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಅಸ್ಕರ್ ಮತ್ತು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next