Advertisement

Moscow; ರಷ್ಯಾದಲ್ಲಿ ಉಗ್ರರ ಅಟ್ಟಹಾಸ: ಕನಿಷ್ಠ 40 ಮಂದಿ ಬಲಿ

01:18 AM Mar 23, 2024 | Team Udayavani |

ಮಾಸ್ಕೋ: ಮಾಸ್ಕೋದ ಹೊರವಲಯದಲ್ಲಿರುವ ದೊಡ್ಡ ಕನ್ಸರ್ಟ್ ಹಾಲ್‌ನಲ್ಲಿ ಶುಕ್ರವಾರ ಬಂದೂಕುಧಾರಿಗಳು ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿದ ಕಾರಣ ಕನಿಷ್ಠ 40 ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದು ಎಂದು ವರದಿಯಾಗಿದೆ. ಕನ್ಸರ್ಟ್ ಹಾಲ್ ದಾಳಿಯಿ ವೀಡಿಯೋಗಳು ಹೊರಹೊಮ್ಮುತ್ತಿದ್ದಂತೆ ಕ್ರೋಕಸ್ ಸಿಟಿ ಹಾಲ್ನಲ್ಲಿ ಭಾರೀ ಬೆಂಕಿ ಮತ್ತು ದಟ್ಟ ಹೊಗೆಯನ್ನು ಫೋಟೋಗಳು ತೋರಿಸಿವೆ.

ಗಾಬರಿಗೊಂಡ ಜನರು ಪ್ರಾಣಾಪಾಯದಿಂದ ಓಡಿಹೋಗುತ್ತಿದ್ದ ವೇಳೆ ಕನಿಷ್ಠ ನಾಲ್ವರು ಬಂದೂಕುಧಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ವೀಡಿಯೋವೊಂದರಲ್ಲಿ, ರೈಫಲ್‌ಗಳನ್ನು ಹಿಡಿದಿದ್ದ ಮೂವರು ಉಗ್ರರು ಕನ್ಸರ್ಟ್ ಹಾಲ್‌ನ ಲಾಬಿಯಲ್ಲಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇತರ ವೀಡಿಯೋಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬರುವುದರಿಂದ ಸ್ಫೋಟಗಳು ಸಂಭವಿಸಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next