Advertisement

ಕೋವಿಡ್ ಸ್ವ ಪರೀಕ್ಷೆ ಮಾಡಿಕೊಳ್ಳುವ ಕಿಟ್ ಗಳು 3-4 ದಿನಗಳಲ್ಲಿ ಲಭ್ಯ.? : ಐಸಿಎಂಆರ್

07:13 PM May 20, 2021 | Team Udayavani |

ನವ ದೆಹಲಿ : ಮುಂದಿನ ಮೂರು ನಾಲ್ಕು ದಿನಗಳಲ್ಲಿ ಮನೆಯಲ್ಲಿಯೇ ಕೋವಿಡ್ 19 ಪರೀಕ್ಷೆ ಮಾಡುವ ಕಿಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ತಿಳಿಸಿದೆ.

Advertisement

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಐಸಿಎಂಆರ್ ನ ನಿರ್ದೇಶಕ ಡಾ. ಬಲರಾಮ್ ಭಾರ್ಗವ್, ಕೋವಿಡ್ ಸ್ವ ಪರೀಕ್ಷೆಯ ಫಲಿತಾಂಶಗಳನ್ನು ಮೊಬೈಲ್ ಅಪ್ಲಿಕೇಶನ್‌ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ತಲುಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಕೇರಳ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಪಿಣರಾಯಿ

ಸ್ವ ಕೋವಿಡ್ ಪರೀಕ್ಷೆ ಮಾಡುವ ಹಂತಗಳ : ಹಂತ 1 ಎಂದರೆ ನೀವು ಪರೀಕ್ಷಾ ಕಿಟ್ ಅನ್ನು ಖರೀದಿಸಬೇಕು, ಹಂತ 2 – ಮೊಬೈಲ್ ಅಪ್ಲಿಕೇಶನ್ ಡೌನ್‌ ಲೋಡ್ ಮಾಡಿ. ಹಂತ 3- ಮನೆಯಲ್ಲಿ ಪರೀಕ್ಷೆಯನ್ನು ನಡೆಸಿ. ಹಂತ 4 – ಮೊಬೈಲ್ ಇಮೇಜ್ ಕ್ಲಿಕ್ ಮಾಡಿ ಮತ್ತು ಅಪ್‌ ಲೋಡ್ ಮಾಡಿ. ಪರೀಕ್ಷಾ ಫಲಿತಾಂಶವನ್ನು ನೀಡಲಾಗುವುದು “ಎಂದು ವಿವರಿಸಿದ್ದಾರೆ.

ಕೋವಿಡ್ ಸೋಂಕಿತರ ಗೌಪ್ಯತರಯನ್ನು  ಕಾಪಾಡುವ ದೃಷ್ಟಿಯಿಂದ ಈ ಪ್ರಯತ್ನವನ್ನು ಮಾಡಲಾಗುತ್ತಿದೆ. ಡೇಟಾವನ್ನು ಸುರಕ್ಷಿತ ಸರ್ವರ್‌ ನಲ್ಲಿ ಸಂಗ್ರಹಿಸಲಾಗುತ್ತದೆ. ಇದು ಐಸಿಎಂಆರ್ ಡೇಟಾಬೇಸ್‌ ನೊಂದಿಗೆ ಸಂಪರ್ಕ ಹೊಂದಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಕೋವಿಡ್ ಸ್ವ ಪರಿಕ್ಷಾ ಕಿಟ್ ಗಳು ಲಭ್ಯವಿರಬೇಕು ಎಂದು ಅವರು ಹೇಳಿದ್ದಾರೆ.

Advertisement

ಇನ್ನು, ಪುಣೆಯ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಕೋವಿಡ್ ಸ್ವ ಪರೀಕ್ಷಾ ಕಿಟ್‌ ಗಳಿಗೆ ಇಂಡಿಯನ್ ಕೌನ್ಸಿಲ್ ನಿಂದ ಅನುಮೋದನೆಯನ್ನು ಪಡೆದುಕೊಂಡಿದೆ.

ಪುಣೆಯ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಕೋವಿಡ್ ಸ್ವ ಪರೀಕ್ಷಾ ಕಿಟ್‌ ಗಳನ್ನು ಇಂದು ಬಿಡುಗಡೆಗೊಳಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಇನ್ನು,  ದೇಶಾದ್ಯಂತ ಮೇ 18 ಮತ್ತು 19 ರಂದು 20 ಲಕ್ಷಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರ ಹೊರತಾಗಿಯೂ, ಕೋವಿಡ್ ಹೊಸ ಪ್ರಕರಣಗಳ ಸಂಕ್ಯೆ ಗಣನೀಯವಾಗಿ ಇಳಿಕೆಯಾಗಿದ್ದು. ಕಳೆದ ಒಂದು ವಾರದಲ್ಲಿ ಕೋವಿಡ್ ಹೊಸ ಸೋಂಕಿನ ಪ್ರಮಾಣ ಶೇಕಡಾ 13 ಕ್ಕೆ  ಇಳಿದಿದೆ. ಇನ್ನು,ಈ ತಿಂಗಳ ಅಂತ್ಯದ ವೇಳೆಗೆ ದಿನಕ್ಕೆ 25 ಲಕ್ಷ ಪರೀಕ್ಷೆಗಳು ಮತ್ತು ಜೂನ್ ಅಂತ್ಯದ ವೇಳೆಗೆ 45 ಲಕ್ಷ ಪರೀಕ್ಷೆಗಳನ್ನು ಮಾಡುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಸೋಂಕಿತ ಸೀನುವಾಗ ಹೊರಬರುವ ಏರೋಸಾಲ್ 10 ಮೀಟರ್ ದೂರ ಹೋಗಬಹುದು : ಕೇಂದ್ರ 

Advertisement

Udayavani is now on Telegram. Click here to join our channel and stay updated with the latest news.

Next