Advertisement

ಅಫ್ಘಾನ್‌ಗೆ ಜಗತ್ತಿನ ನೆರವು ಬೇಕು; ಜಿ-20 ರಾಷ್ಟ್ರಗಳಿಗೆ ಪಿಎಂ ಮೋದಿ ಸಲಹೆ

02:25 AM Oct 13, 2021 | Team Udayavani |

ಹೊಸದಿಲ್ಲಿ: “ಅಫ್ಘಾನಿಸ್ಥಾನವನ್ನು ಭಯೋ­ತ್ಪಾದನೆಯ ಮೂಲ ಕೇಂದ್ರ­ವನ್ನಾಗಿ ಪರಿವರ್ತನೆಯಾಗುವುದನ್ನು ತಡೆಯಿರಿ’- ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

Advertisement

ಅಫ್ಘಾನಿಸ್ಥಾನ ವಿಚಾರಕ್ಕೆ ಸಂಬಂಧಿಸಿ­ದಂತೆ ಜಿ-20 ರಾಷ್ಟ್ರಗಳ ಒಕ್ಕೂಟ ಆಯೋಜಿಸಿದ್ದ ವಚ್ಯುವಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಆ ದೇಶದಲ್ಲಿ ಮಾನವೀಯ ಮತ್ತು ಬದುಕಲು ಅಗತ್ಯವಾಗಿರುವ ಯೋಜನೆಗಳು ಅತ್ಯಂತ ತುರ್ತಾಗಿ ಬೇಕಾಗಿವೆ ಎಂದು ಹೇಳಿದ್ದಾರೆ.

ಆ ದೇಶದಲ್ಲಿ ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗಾಗಲೇ ಕೈಗೊಂಡ ನಿರ್ಣಯ ಅನುಷ್ಠಾನ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಆ ದೇಶ ಮುಂದಿನ ದಿನಗಳಲ್ಲಿ ಉಗ್ರ­ವಾದದತ್ತ ಪ್ರಚೋದನೆ, ಭಯೋ­­­ತ್ಪಾದನೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಸಿಗುವ ಕೇಂದ್ರ ಆಗ­ಬಾರದು. ಪ್ರಾದೇಶಿಕವಾಗಿ ಅಥವಾ ಜಗತ್ತನ್ನು ಕೇಂದ್ರೀಕರಿಸಿ ಉಗ್ರ ಚಟು­ವಟಿಕೆಗಳಿಗೆ ಅಲ್ಲಿ ಪ್ರೋತ್ಸಾಹ ಸಿಗಲೇ­ಬಾರದು ಎಂದು ಪ್ರಧಾನಿ ಮೋದಿ ಜಿ-20 ರಾಷ್ಟ್ರಗಳಿಗೆ ಒತ್ತಾಯ ಮಾಡಿ­ದರು ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಉಪಚುನಾವಣೆ ಹಿನ್ನೆಲೆ : ಕಾಂಗ್ರೆಸ್ ಕಾರ್ಯಕರ್ತನಿಂದ ಬಿಜೆಪಿ ಯುವ ಕಾರ್ಯಕರ್ತರನ ಮೇಲೆ ಹಲ್ಲೆ

Advertisement

ತಡೆ ಅಗತ್ಯ: ದಕ್ಷಿಣ ಏಷ್ಯಾ ಪ್ರದೇಶ­ದಲ್ಲಿ ಮಾದಕ ವಸ್ತುಗಳ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ತಡೆಯೂ ಅಗತ್ಯವಾಗಿದೆ ಎಂದರು ಪ್ರಧಾನಿ ಮೋದಿ.

ಎಲ್ಲರನ್ನು ಒಳಗೊಂಡ ಸರಕಾರ: ಸದ್ಯ ತಾಲಿಬಾನ್‌ ವಶದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಮಹಿಳೆಯರು, ಅಲ್ಪಸಂಖ್ಯಾಕರು ಸೇರಿದಂತೆ ಎಲ್ಲರ­ನ್ನೂ ಒಳಗೊಂಡ ಸರಕಾರ ರಚನೆ­ಯಾಗಬೇಕು. ಆಗ ಮಾತ್ರ ಅಲ್ಲಿ ಸುಸ್ಥಿರವಾಗಿರುವ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಉಪವಾಸದಿಂದ ಕಂಗೆಡುತ್ತಿರುವ ಅಫ್ಘಾನ್‌ನ ಪ್ರತಿಯೊಬ್ಬ ನಾಗರಿಕನಿ­ಗಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೃದಯ ಮಿಡಿಯುತ್ತಿದೆ. ಹೀಗಾಗಿ, ಅ.30ರಂದು ಭಾರತದ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನವಾಗಬೇಕು ಎಂದಿದ್ದಾರೆ.

ಇಟಲಿ ಅಧ್ಯಕ್ಷತೆಯಲ್ಲಿ ಜಿ-20 ರಾಷ್ಟ್ರಗಳ ಒಕ್ಕೂಟ ಅಫ್ಘಾನಿಸ್ಥಾನದಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಯೋಜ­ನೆಗಳನ್ನು ಜಾರಿ ಮಾಡಲು ಮುಂದಾ­ಗಬೇಕು ಎಂದರು. ಭಾರತ ಮತ್ತು ಅಫ್ಘಾನಿಸ್ಥಾನದ ನಡುವೆ ಐತಿಹಾಸಿಕ ಕಾಲದಿಂದಲೂ ಅತ್ಯುತ್ತಮ ಬಾಂಧವ್ಯ ಇತ್ತು ಎಂಬ ಅಂಶವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next