Advertisement

ಇಲ್ಲಿ ನಿತ್ಯ ಬೆಳಗ್ಗೆ ರಾಷ್ಟ್ರಗೀತೆ ಮೊಳಗುತ್ತೆ!

06:44 PM Aug 11, 2022 | Team Udayavani |

ಹೈದರಾಬಾದ್‌: ಈ ಹಳ್ಳಿಯಲ್ಲಿ ಬೆಳಗ್ಗೆ ಸರಿಯಾಗಿ ಎಂಟೂವರೆ ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಹಳ್ಳಿಯಲ್ಲಾಗಲೀ, ಹಳ್ಳೆಯಾಚೆಗಿನ ಹೊಲಗದ್ದೆಗಳಲ್ಲಿ ಕಾರ್ಯನಿರತರಾಗಿರುವ ಜನ, ವಾಹನ ಚಲಾಯಿಸುತ್ತಿರುವ ಜನ, ತಮ್ಮ ಕೆಲಸಗಳನ್ನು ಬದಿಗಿಟ್ಟು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತಾರೆ.

Advertisement

ತೆಲಂಗಾಣದ ನಲಗೊಂಡ ಜಿಲ್ಲೆಯ ತಿಪ್ಪರ್ತಿ ಎಂಬ ಗ್ರಾಮದಲ್ಲಿ ಇಂಥದ್ದೊಂದು ವಿಶೇಷ ಇದೇ ಜ. 27ರಿಂದ ಚಾಲ್ತಿಯಲ್ಲಿದೆ. “ಜನಗಣಮನ ಉತ್ಸವ’ ಎಂಬ ಸಮಿತಿ ವತಿಯಿಂದ ಇದನ್ನು ನಿತ್ಯವೂ ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರತಿದಿನ ಬೆ. 8.10ಕ್ಕೆ ದೇಶಭಕ್ತಿ ಗೀತೆಗಳ ಪ್ರಸಾರ ಶುರು ಮಾಡಲಾಗುತ್ತದೆ. ಆ ಮೂಲಕ, ಜನರಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಮಾನಸಿಕವಾಗಿ ಅಣಿಗೊಳಿಸಲಾಗುತ್ತದೆ. 8.29ಕ್ಕೆ ಸರಿಯಾಗಿ ರಾಷ್ಟ್ರಗೀತೆಯನ್ನು ಬಗ್ಗೆ ಜನರಿಗೆ ಸಂದೇಶ ರವಾನೆಯಾಗುತ್ತದೆ. ಆನಂತರ, 8.30ಕ್ಕೆ ಸರಿಯಾಗಿ ರಾಷ್ಟ್ರಗೀತಿ ಆರಂಭವಾಗುತ್ತದೆ. ಈ ಪರಿಪಾಠವನ್ನು ನಿತ್ಯವೂ ರೂಢಿಸಿಕೊಂಡು ಬಂದಿದ್ದೇವೆ ಎಂದು ಜನಗಣಮನ ಉತ್ಸವ ಸಮಿತಿಯ ಅಧ್ಯಕ್ಷ ಕಾರ್ನಾಟಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next