Advertisement

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:07 AM Jul 15, 2022 | Team Udayavani |

ಮೇಷ:

Advertisement

ಕರ್ತವ್ಯ ನಿಷ್ಠೆ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಜನಮನ್ನಣೆ. ಉತ್ತಮ ಧನಾರ್ಜನೆ. ಸ್ಪರ್ಧೆಗಳಲ್ಲಿ ಜಯ. ಗುರುಹಿರಿಯರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ .

ವೃಷಭ:

ಉತ್ತಮ ವಾಕ್‌ಚತುರತೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಿನ ಧನ ಸಂಪತ್ತು ವೃದ್ಧಿ. ಪಾಲುದಾರರೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಮನೆಯಲ್ಲಿ ಸಂಭ್ರಮ ಪರಿಸ್ಥಿತಿ.

ಮಿಥುನ:

Advertisement

ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ. ವಿದ್ಯಾರ್ಜನೆಯಲ್ಲಿಯೂ ಮಕ್ಕಳಲ್ಲಿಯೂ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದಲೂ ಬುದ್ಧಿವಂತಿಕೆಯಿಂದಲೂ ಗೌರವ ಸ್ಥಾನ ಪ್ರಾಪ್ತಿ. ದಾಂಪತ್ಯ ತೃಪ್ತಿಕರ. ಮನೆಯ ನಿಮಿತ್ತ ಹೆಚ್ಚಿದ ಜವಾಬ್ದಾರಿ.

ಕರ್ಕ:

ಕಾರ್ಯ ಸಾಧಿಸಿದ್ದರಿಂದ ಮನಸ್ಸಿನಲ್ಲಿ ಸಂತೋಷ. ಗುರುಹಿರಿಯರಲ್ಲಿ ಸಮಾನಾದ ತಾಳ್ಮೆ ಅಗತ್ಯ. ನಿರೀಕ್ಷಿಸಿದಂತೆ ಧನವೃದ್ಧಿ. ದೂರದ ಮಿತ್ರರ ಸಹಾಯ ಹಾಗೂ ಅವರಿಗಾಗಿ ಧನ ವ್ಯಯ ಸಂಭವ. ಮಕ್ಕಳಿಂದ ಸಂತೋಷ.

ಸಿಂಹ:

ಆರೋಗ್ಯ ವೃದ್ಧಿ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಲಾಭ. ಆಸ್ತಿ ಭೂಮಿ ಕಟ್ಟಡಗಳ ಬಗ್ಗೆ ಬದಲಾವಣೆ ಸಂಭವ. ಸನ್ಮಾರ್ಗದ ಸಂಪತ್ತಿಗೆ ಆದ್ಯತೆ ನೀಡಿ.

ಕನ್ಯಾ:

ಹೆಚ್ಚಿದ ದೈಹಿಕ ಶ್ರಮ ಜವಾಬ್ದಾರಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಮನಃ ಸಂತೋಷ- ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಗುರುಹಿರಿಯರಿಂದ ತೃಪ್ತಿ.

ತುಲಾ:

ಆಸ್ತಿ ವಿಚಾರದಲ್ಲಿ ತಲ್ಲೀನತೆ ಹಾಗೂ ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರ ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ದಾಂಪತ್ಯ ಸುಖ ಮಧ್ಯಮ.

ವೃಶ್ಚಿಕ:

ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತೆಯಿಂದ ಕೀರ್ತಿ ಆದೀತು. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ.

ಧನು:

ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯದಲ್ಲಿ ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರೊÂàನ್ಮುಖರಾಗಿ. ನಿಷ್ಠುರ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಲಾಭ ಸಂಭವ.

ಮಕರ:

ಆರೋಗ್ಯದಲ್ಲಿ ವೃದ್ಧಿ. ಪರಊರ ಮಿತ್ರರ ಭೇಟಿ. ದೂರದ ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಪಾಲುದಾರಿಕಾ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ. ಮೇಲಧಿಕಾರಿಗಳ ಗಣ್ಯರ ಮಾರ್ಗದರ್ಶನ ಸಹಾಯ ಅನುಭವವಾದೀತು.

ಕುಂಭ:

ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಅತ್ಯುತ್ತಮ ಧನಾರ್ಜನೆ. ಉತ್ತಮ ವಾಕ್‌ಚತುರತೆ ಮನೋರಂಜನೆಯಿಂದ ಕೂಡಿದ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ. ದೂರದ ವ್ಯವಹಾರದಲ್ಲಿ ಅಭಿವೃದ್ಧಿ.

ಮೀನ:

ಧಾರ್ಮಿಕ ಕಾರ್ಯಗಳ ನೇತೃತ್ವ. ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃ ಸಂತೋಷ ಜನಮನ್ನಣೆ. ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ. ಸಾಂಸಾರಿಕ ಸುಖ ತೃಪ್ತಿದಾಯಕ. ಗುರುಹಿರಿಯರ ಆರೋಗ್ಯ ಸುದೃಢ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next