Advertisement

ಭಾನುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

07:27 AM Feb 13, 2022 | Team Udayavani |

ಮೇಷ:

Advertisement

ದೇವತಾನುಗ್ರಹದಿಂದ ಗೃಹದಲ್ಲಿ ಸಂತಸದ ವಾತಾವರಣ. ನೂತನ ಬಂಧು – ಮಿತ್ರರ ಸಮಾಗಮ. ಅಧ್ಯಯನ ಪ್ರವೃತ್ತಿಯವರಿಗೆ ಹೆಚ್ಚಿದ ಶ್ರಮ. ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿಯಿಂದ ಅಭಿವೃದ್ಧಿ ಅವಿವಾಹಿತರಿಗೆ ವಿವಾಹ ಯೋಗ.

ವೃಷಭ:
ವಿದೇಶ ಮೂಲದಿಂದ ಧನಾಗಮನ ದೂರದ ವ್ಯವಹಾರಗಳಲ್ಲಿ ಪ್ರಗತಿ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಪ್ರಗತಿ. ಧಾರ್ಮಿಕ ಕಾರ್ಯದಲ್ಲಿ ಧನವ್ಯಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ. ದಂಪತಿಗಳಲ್ಲಿ ಹೊಸ ಕಾರ್ಯಗಳಲ್ಲಿ ಅಭಿವೃದ್ಧಿ
ಮಿಥುನ:
ವಿದ್ಯಾರ್ಜನೆಯಲ್ಲಿ ತಲ್ಲೀನತೆ ಗುರು ಹಿರಿಯರ ಸಹಕಾರ ಪ್ರೋತ್ಸಾಹದಿಂದ ಸ್ಥಾನ ಗೌರವಾದಿ ವೃದ್ಧಿ. ನಿರಂತರ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ಸುಖ ತೃಪ್ತಿದಾಯಕ. ಮಕ್ಕಳಿಂದ ಸಂತೋಷ. ನೂತನ ಮಿತ್ರರ ಸಮಾಗಮ
ಕಟಕ:
ಗೃಹೋಪಕರಣ ವಸ್ತುಗಳಿಗಾಗಿ ಧನವ್ಯಯ ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ
ಸಿಂಹ:
ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲಿ ಪರಿಶ್ರಮದಿಂದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆಯ ನಡೆಯಿಂದ ಸಫ‌ಲತೆ. ಗೃಹೋದಯೋಗಿ ವಸ್ತುಗಳ ಸಂಗ್ರಹ. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ
ಕನ್ಯಾ:
ಆರೋಗ್ಯ ಗಮನಿಸಿ. ಅತಿಯಾದ ದೇಹಾಯಾಸವಿರುವ ಪ್ರವೃತ್ತಿ ಸಲ್ಲದು ಸಲ್ಲದು. ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ವೃದ್ಧಿ. ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಶ್ರಮದಿಂದ ಸಫ‌ಲತೆ
ತುಲಾ:
ಉತ್ತಮ ಆರೋಗ್ಯ. ಸ್ಥಿತಿಗತಿಗಳ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ದೀರ್ಘ‌ ಪ್ರಯಾಣ ಸಂಭವ. ಮಕ್ಕಳಿಂದ ಸಂತೋಷ. ಹಣಕಾಸಿನ ವಿಚಾರದಲ್ಲಿ ಮಧ್ಯಮ ಪ್ರಗತಿ. ಮಿತ್ರರ ಸಹಾಯ ಲಭ್ಯ. ಗುರುಹಿರಿಯರ ಮಾರ್ಗದರ್ಶನದ ಲಾಭ
ವೃಶ್ಚಿಕ:
ದೀರ್ಘ‌ ಪ್ರಯಾಣದಲ್ಲಿ ವಿಳಂಬ ತೋರೀತು. ಉದ್ಯೋಗ ವ್ಯವಹಾರಗಳಲ್ಲಿ ಪರರಿಗೆ ಉಪಕಾರ ಮಾಡುವಾಗ ತಿಳಿದು ನಿರ್ಣಯಿಸಿ. ಗೃಹ ವಾಹನ ಆಸ್ತಿ ಖರ್ಚು ತೋರೀತು. ಬಂಧು ಮಿತ್ರರಿಂದ ಮಧ್ಯಮಸುಖ. ಅವಿವಾಹಿತರಿಗೆ ವಿವಾಹ ಯೋಗ ಸಂಭವ
ಧನು:
ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ. ತಾಳ್ಮೆ ಸಹನೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಸುಮ್ಮನೆ ಬೇರೆಯವರ ವಿಚಾರದಲ್ಲಿ ಭಾಗವಹಿಸದಿರಿ. ಹಣಕಾಸಿನ ವಿಚಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ ದೊರಕಿದ ತೃಪ್ತಿ. ಮಕ್ಕಳಿಂದ ಸಂತೋಷ
ಮಕರ:
ಅತಿಯಾದ ನಿಷ್ಠೆ ಶ್ರಮ ವಹಿಸಿ ದೇಹಾರೋಗ್ಯ ಗಮನಿಸಿ. ಒಳ್ಳೆ ಹೆಸರು ಸಂಪಾದಿಸುವ ಸಮಯ. ದಾಂಪತ್ಯದಲ್ಲಿ ಚರ್ಚೆ ಸಂಭವ. ಮಕ್ಕಳಿಂದ ಸಂತೋಷ ವೃದ್ಧಿ. ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ
ಕುಂಭ:
ಆರೋಗ್ಯ ವೃದ್ಧಿ. ಅಧ್ಯಯನದಲ್ಲಿ ತಲ್ಲಿನತೆ. ಸಂದಭೋìಚಿತ ಉಪಾಯ, ಪ್ರತಿಭೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಅಧಿಕ ವಿಚಾರದಲ್ಲಿ ಗಣನೀಯ ಪ್ರಗತಿ. ಉತ್ತಮ ವಾಕ್‌ಚತುರತೆ. ಗೃಹದಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ
ಮೀನ:
ಆರೋಗ್ಯದಲ್ಲಿ ಸುಧಾರಣೆ ಉದ್ಯೋಗ ವ್ಯವಹಾರಗಳಲ್ಲಿ ಪೈಪೋಟಿ ತೋರೀತು. ದೈರ್ಯ ಶೌರ್ಯದಿಂದ ಪ್ರಗತಿ. ಅಧಿಕ ವಿಚಾರದಲ್ಲಿ ಗಣನೀಯ ಪ್ರಗತಿ. ಉತ್ತಮ ವಾಕ್‌ಚತುರತೆ. ಗೃಹದಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ
Advertisement

Udayavani is now on Telegram. Click here to join our channel and stay updated with the latest news.

Next