Advertisement

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:01 AM Sep 08, 2022 | Team Udayavani |

ಮೇಷ:

Advertisement

ಗುರುಹಿರಿಯರಲ್ಲಿ ಬೇಸರ ಬೇಡ. ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ಉತ್ತಮ ಅವಕಾಶ. ಪ್ರಯಾಣದಿಂದ ಸುಖ. ಧನ ಲಾಭ. ಮನೆಯಲ್ಲಿ ಸಂತಸದ ವಾತಾವರಣ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ಆರ್ಥಿಕ ವಿಚಾರಗಳಲ್ಲಿ ಆಸಕ್ತಿ.

ವೃಷಭ:

ವಿದ್ಯಾರ್ಥಿಗಳಿಗೆ ಅನುಕೂಲಕರ. ಮಾತಿನಲ್ಲಿ ಎಚ್ಚರ ವಹಿಸಿ. ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಧೈರ್ಯದಿಂದ ಕಾರ್ಯ ಸಿದ್ಧಿ. ಧನಾಗಮನಕ್ಕೆ ಕೊರತೆ ಇರದು. ಆರ್ಥಿಕ ಸುದೃಢತೆ. ಉತ್ತಮ ವಾಕ್‌ ಚತುರತೆಯಿಂದ ಜನಮನ್ನಣೆ. ಸ್ತ್ರೀಪುರುಷರ ಪರಸ್ಪರ ಪ್ರೋತ್ಸಾಹದಿಂದ ನೆಮ್ಮದಿ.

ಮಿಥುನ:

Advertisement

ಚಟುವಟಿಕೆಯಿಂದ ಕೂಡಿದ ದಿನ. ಸಾಮಾಜಿಕ ಜನಪರ ಕಾರ್ಯದಲ್ಲಿ ತೊಡಗುವುದರಿಂದ ಗೌರವ. ಸುಖ ಸಂತೋಷ ಸಿದ್ಧಿ. ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ. ಸಾಲಗಾರರ ಬಲೆಗೆ ಸಿಲುಕದಿರಿ.

ಕರ್ಕ:

ಆರೋಗ್ಯ ವಿಚಾರದಲ್ಲಿ ಉದಾಸೀನತೆ ಬೇಡ. ತಾಳ್ಮೆ ಕಳೆದುಕೊಳ್ಳದೇ ನೇರ ಸಾಮಾಜಿಕ ಜನಪರ ವ್ಯವಹಾರ ಕೆಲಸ ಕಾರ್ಯಗಳಿಂದ ಗೌರವ ಪ್ರಾಪ್ತಿ. ಆಲಸ್ಯ ತೋರದಿರಿ. ಗುರುಹಿರಿಯರ ಬಗ್ಗೆ ಚಿಂತೆ ಕಾಡೀತು. ಸತ್ಕರ್ಮಕ್ಕೆ ಧನವ್ಯಯ. ಆರೋಗ್ಯದ ಬಗ್ಗೆ ಗಮನಿಸಿ.

ಸಿಂಹ:

ತೀಕ್ಷ್ಣ ನುಡಿ ನಡೆಯಿಂದ ದಿನಚರಿ ಆರಂಭಿಸಬೇಡಿ. ತಾಳ್ಮೆ ಇರಲಿ. ಕೋರ್ಟು ರಾಜಕೀಯ ಕ್ಷೇತ್ರದಲ್ಲಿ ಅನುಕೂಲ. ಚಿಕ್ಕ ಪ್ರಯಾಣದಿಂದ ಸಂತಸ. ಉದ್ಯೋಗದಲ್ಲಿ ಧನಾಗಮನದಲ್ಲಿ ವೃದ್ಧಿ. ಮಕ್ಕಳಿಂದ ಸುಖ ಸತೋಷ ವೃದ್ಧಿ. ಆರೋಗ್ಯ ಸುಧಾರಣೆ. ಗುರುಹಿರಿಯರ ಮಾರ್ಗದರ್ಶನ.

ಕನ್ಯಾ:

ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಅನಿರೀಕ್ಷಿತ ಸ್ಥಾನ ಗೌರವದ ಸುಖ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಹಿರಿಯರ ಆರೋಗ್ಯ ವಿಚಾರದಲ್ಲಿ ಗಮನವಿರಲಿ. ಸಣ್ಣ ಪ್ರಯಾಣದಿಂದ ಲಾಭ. ಗುರು ಹಿರಿಯರ ಸಹಕಾರ. ಸುದೃಢ ಆರೋಗ್ಯ.

ತುಲಾ:

ದೇವತಾ ಕಾರ್ಯಗಳಲ್ಲಿ ತತ್ಪರತೆ. ಭಾಗ್ಯ ವೃದ್ಧಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಕೀರ್ತಿ ಸ್ಥಾನ ಸುಖಾದಿ ಪ್ರಾಪ್ತಿ. ಸಾಂಸಾರಿಕ ಸುಖ ವೃದ್ಧಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ನೂತನ ಬಂಧುಮಿತ್ರರ ಸಹಕಾರ. ಆರೋಗ್ಯ ಗಮನಿಸಿ.ಸಂಶೋದನಾತ್ಮಕ ಕಾರ್ಯಗಳಲ್ಲಿ ಆಸಕ್ತಿ.

ವೃಶ್ಚಿಕ:

ಗುರು ಹಿರಿಯರೊಂದಿಗೆ ಅತ್ಯುತ್ತಮ ಮಾರ್ಗದರ್ಶನದ ಸಲಹೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ. ಪ್ರಯಾಣ ಉದ್ಯೋಗ ಧನ ಸಂಪಾದನೆ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ. ಬಹು ಐಶ್ವರ್ಯ ಸಿಗುವ ಸಂಭವ. ರಾಜಕೀಯ ಸರಕಾರೀ ಕಾರ್ಯಗಳಲ್ಲಿ ಮುನ್ನಡೆ.

ಧನು:

ವಿಚಾರ ವಿನಿಮಯದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರ್ಥಿಕ ಹಿಡಿತವಿರಲಿ. ಸಣ್ಣ ಪ್ರಯಾಣದಿಂದ ಲಾಭ, ಸಂತೋಷ. ನಿರಂತರ ಧನಾರ್ಜನೆ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಹೆಚ್ಚಿದ ಸ್ಥಾನಮಾನ.

ಮಕರ:

ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಶ್ರಮವಿದ್ದರೂ ಅಂತಿಮವಾಗಿ ಗುರಿ ಸಾಧಿಸುವಿರಿ.ಬಂಧುಮಿತ್ರರ ಆಗಮನದಿಂದ ಗೃಹದಲ್ಲಿ ಸಂತಸದ ವಾತಾವರಣ.

ಕುಂಭ:

ಅನಿರೀಕ್ಷಿತ ಪ್ರಯಾಣ. ದೂರದ ವ್ಯವಹಾರದಲ್ಲಿ ಪ್ರಗತಿ. ಧನಾಗಮಕ್ಕೆ ಕೊರತೆ ಇರದು. ಮಿತ್ರರಲ್ಲಿ ನಿಷ್ಠುರ ಬೇಡ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡದಿರಿ. ದೂರದ ವ್ಯವಹಾರದಲ್ಲಿ ಹೆಚ್ಚಿದ ವರಮಾನ. ಪಾಲುದಾರಿಕಾ ಕ್ಷೇತ್ರದಲ್ಲಿ ಗೌರವ ವೃದ್ಧಿ.

ಮೀನ:

ವಿದ್ಯಾರ್ಥಿಗಳು ಆತುರದ ನಿರ್ಧಾರ ಮಾಡದಿರಿ. ಆರೋಗ್ಯದ ಕಡೆಗೆ ಗಮನ ಹರಿಸಿ. ಮಾನಸಿಕ ಗೊಂದಲಕ್ಕೆ ಅವಕಾಶ ನೀಡಬೇಡಿ. ವಿಶ್ರಾಂತಿಯಿಂದ ದಿನ ಕಳೆಯಿರಿ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next