ಮೇಷ:
ಆರೋಗ್ಯ ಗಮನಿಸಿ. ಎಲ್ಲಾ ವಿಚಾರಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಹಲವಾರು ಸ್ಪರ್ಧಿಗಳು ಎದುರಾದಾರು. ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ತೋರುವುದರಿಂದ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ. ಸತ್ಕಾರ್ಯಕ್ಕೆ ಧನ ವ್ಯಯ.
ವೃಷಭ:
ಸರಿಯಾದ ನಿಯಮ ಪಾಲಿಸುವು ದರಿಂದ ದೇಹಾರೋಗ್ಯ ಉತ್ತಮ. ದೀರ್ಘ ಸಂಚಾರ ಸಂಭವ. ಪರರ ವಿಚಾರದಲ್ಲಿ ಹಸ್ತಕ್ಷೇಪ ಮಾಡ ದಿರಿ. ಗೃಹ ವಾಹನಾದಿ ಸುಖ. ಮಕ್ಕಳಿಂದ ಸಂತೋಷ ವೃದ್ಧಿ. ಗುರು ಹಿರಿಯರ ಸಹಾಯ ಸಹಕಾರ ಪ್ರಾಪ್ತಿ.
Related Articles
ಮಿಥುನ:
ಕೆಲಸ ಕಾರ್ಯಗಳಲ್ಲಿ ಚುರುಕುತನ, ನೈಪುಣ್ಯತೆ ಉದಾರ ಮನೋಭಾವ ದೈರ್ಯ ಉತ್ಸಾಹ ತೋರೀತು. ಅಭಿವೃದ್ಧಿದಾಯಕ ಬದಲಾವಣೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೀರ್ಘ ಪ್ರಯಾಣ ಅವಕಾಶ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ
ಕರ್ಕ:
ಹಿರಿಯರಿಂದ ಸುಖ. ಸ್ಥಾನ ಸುಖಕ್ಕಾಗಿ ಹೆಚ್ಚಿದ ಪರಿಶ್ರಮ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಬದಲಾವಣೆ. ದಾಂಪತ್ಯ ಸುಖ ಮಧ್ಯಮ. ಗೃಹ ಆಸ್ತಿ ವಿಚಾರದಲ್ಲಿ ಪ್ರಗತಿದಾಯಕ ಮುನ್ನಡೆ. ಉತ್ತಮ ಆರೋಗ್ಯ ಭಾಗ್ಯ.
ಸಿಂಹ:
ಆರೋಗ್ಯ ವೃದ್ಧಿ. ನಿರೀಕ್ಷಿತ ಧನಲಾಭ ಪ್ರಾಪ್ತಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಗುರು ಹಿರಿಯರೊಂದಿಗೆ ಭಿನ್ನಾ ಭಿಪ್ರಾಯಕ್ಕೆ ಅವಕಾಶ ಕಲ್ಪಿಸದಿರಿ. ಆಸ್ತಿ ವಿಚಾರಗಳಲ್ಲಿ ಸಾಮಾನ್ಯ ಫಲ. ಅಧ್ಯಯನ ಶೀಲರಿಗೆ ಅನುಕೂಲ.
ಕನ್ಯಾ:
ಆರೋಗ್ಯ ಗಮನಿಸಿ ದೀರ್ಘ ಸಂಚಾರ ಸಂಭವ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಹಣಕಾಸಿನ ವಿಚಾರದಲ್ಲಿ ಕಟ್ಟಿ ಹಾಕಿದ ಪರಿಸ್ಥಿತಿ ಸಂಭವ. ಸಹೋದ್ಯೋಗಿಗಳು, ಪಾಲುದಾರರ ಸಹಕಾರದಿಂದ ಉದ್ಯೋಗ, ವ್ಯವಹಾರಗಳಲ್ಲಿ ಉತ್ತಮ ಸಾಧನೆ.
ತುಲಾ:
ದೀರ್ಘ ಪ್ರಯಾಣ ಸಂಭವ. ನಷ್ಟ ದ್ರವ್ಯಗಳಿಗೆ ಪ್ರಯತ್ನಿಸಿದರೆ ಸಿಗುವ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವ ಕಾಲ. ದಾಂಪತ್ಯ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಾಗಮನ ಹಾಗೂ ಅಭಿವೃದ್ಧಿ.
ವೃಶ್ಚಿಕ:
ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು. ಆರೋಗ, ಸಾಂಸಾರಿಕ ಸುಖ, ಮಕ್ಕಳ ವಿಚಾರದಲ್ಲಿ ಸಂತಸದ ಸಮಯ. ಉದ್ಯೋಗ ವ್ಯವಹಾರಾದಿಗಳಲ್ಲಿ ಉನ್ನತ ಅಭಿವೃದ್ಧಿ ಇತ್ಯಾದಿ ಶುಭ ಫಲಗಳು.
ಧನು:
ಆರೋಗ್ಯ ಅಭಿವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ. ಭೂಮಿವ್ಯವಹಾರಗಳಲ್ಲಿ ನಿರೀಕ್ಷಿತ ಸಫಲತೆ. ನಿರಂತರ ಧನಾರ್ಜನೆ. ಕುಟುಂಬಿಕರ ಸಹಕಾರ ಲಭ್ಯ. ಧಾರ್ಮಿಕ ವಿಚಾರಗಳಲ್ಲಿ ಸಕ್ರೀಯತೆ. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ .
ಮಕರ:
ಆರೋಗ್ಯ ಸ್ಥಿರ. ದಾಂಪತ್ಯದಲ್ಲಿ ಪರಸ್ಪರ ಸಹಕಾರ, ಪ್ರೋತ್ಸಾಹ. ಪಾಲುದಾರಿಕಾ ಕ್ಷೇತ್ರದಲ್ಲಿ ವ್ಯವಹಾರಗಲ್ಲಿ ಗೌರವದಿಂದ ಕೂಡಿದ ಸ್ಥಾನ ಪ್ರಾಪ್ತಿ. ಗುರುಹಿರಿಯರಿಂದ ಮಾರ್ಗದರ್ಶನ ಸಹಕಾರ. ಧನಾರ್ಜನೆಗೆ ಸರಿಯಾಗಿ ಖರ್ಚು.
ಕುಂಭ:
ದೈಹಿಕ ಆರೋಗ್ಯ ಮಧ್ಯಮ. ಮಾನಸಿಕವಾಗಿ ಬಲಿಷ್ಠತೆಯಿಂದ ಸದೃಢ. ಉದ್ಯೋಗ, ವ್ಯವಹಾರಸ್ಥರಿಗೆ ಪ್ರಯಾಣ ಸಂಭವ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಅವಿವಾಹಿತರಿಗೆ ಸರಿಯಾದ ಸಂಬಂಧ ಒದಗುವ ಕಾಲ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ.
ಮೀನ:
ಉತ್ತಮ ದೈಹಿಕ ಮಾನಸಿಕ ಕ್ಷಮತೆ. ಕೆಲಸ ಕಾರ್ಯಗಳಲ್ಲಿ ತತ್ಪರತೆ. ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಸುಧಾರಣೆ. ಮಾತಿ ನಲ್ಲಿ ತಾಳ್ಮೆ ಸಹನೆ ಅಗತ್ಯ. ದಾಂಪತ್ಯ ಸುಖ ತೃಪ್ತಿದಾಯಕ. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಸರಿಯಾದ ಫಲ. ಉದ್ಯೋಗರಂಗದಲ್ಲಿ ವಿಫುಲ ಅವಕಾಶ ಲಭ್ಯ.