Advertisement

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:06 AM Jul 04, 2022 | Team Udayavani |

ಮೇಷ:

Advertisement

ಕರ್ತವ್ಯ ನಿಷ್ಠೆ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಜನಮನ್ನಣೆ. ಉತ್ತಮ ಧನಾರ್ಜನೆ. ಸ್ಪರ್ದೆಗಳಲ್ಲಿ ಜಯ. ಗುರುಹಿರಿಯರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ.

ವೃಷಭ:

ಉತ್ತಮ ವಾಕ್‌ಚತುರತೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಿನ ಧನಸಂಪತ್ತು ವೃದ್ಧಿ. ಪಾಲುದಾರರೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಮನೆಯಲ್ಲಿ ಸಂಭ್ರಮ ಪರಿಸ್ಥಿತಿ.

ಮಿಥುನ:

Advertisement

ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ. ವಿದ್ಯಾರ್ಜನೆಯಲ್ಲಿಯೂ ಮಕ್ಕಳಲ್ಲಿಯೂ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದಲೂ ಬುದ್ಧಿವಂತಿಕೆಯಿಂದಲೂ ಗೌರವ ಸ್ಥಾನ ಪ್ರಾಪ್ತಿ. ದಾಂಪತ್ಯ ತೃಪ್ತಿಕರ. ಮನೆಯ ನಿಮಿತ್ತ ಹೆಚ್ಚಿನ ಜವಾಬ್ದಾರಿ.

ಕರ್ಕ:

ಆರೋಗ್ಯ ಗಮನಿಸಿ. ನಿರ್ಲಕ್ಷ್ಯ ಮಾಡದಿರಿ. ತಾಳ್ಮೆಯಿಂದ ಕೆಲಸ ಕಾರ್ಯ ನಿರ್ವಹಿಸಿ. ಆರ್ಥಿಕ ವಿಚಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ಮಧ್ಯಮ. ಗುರುಹಿರಿಯರ ಸಹಕಾರ ಲಭ್ಯ. ವಿದ್ಯಾರ್ಥಿಗಳಿಗೆ ಅನುಕೂಲ ಪರಿಸ್ಥಿತಿ.

ಸಿಂಹ:

ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಹೆಚ್ಚಿದ ದೇಹಾಯಾಸ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದಾಂಪತ್ಯ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನಮಾನ.

ಕನ್ಯಾ:

ಸುದೃಢ ಆರೋಗ್ಯ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ವರಮಾನ. ಆಲೋಚಿಸಿದ ರೀತಿಯಲ್ಲಿ ಕೆಲಸ ಕಾರ್ಯಗಳು ಸಾಧಿಸಿದ್ದರಿಂದ ಮಾನಸಿಕ ತೃಪ್ತಿ. ಬಂಧುಮಿತ್ರರ ಸಹಕಾರ ಗೃಹದಲ್ಲಿ ಸಂತಸದ ವಾತಾವರಣ.

ತುಲಾ:

ಆರೋಗ್ಯ ಉತ್ತಮ. ನಿರಂತರ ಧನಾರ್ಜನೆ. ಪ್ರಯಾಣದಿಂದ ನಿರೀಕ್ಷಿತ ಕಾರ್ಯ ಸಫ‌ಲತೆ. ಉದ್ಯೋಗ ವ್ಯವಹಾರಗಳಲ್ಲಿ ಸಹಚರರೊಂದಿಗೆ ಸಮಾದಾನ ತಾಳ್ಮೆ ಅಗತ್ಯ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಸಂತಸ.

ವೃಶ್ಚಿಕ:

ಆರೋಗ್ಯ ಸುದೃಢ. ಸಾಂಸಾರಿಕ ಸಂತೋಷ ವೃದ್ಧಿ. ಪರಸ್ಪರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಪ್ರಗತಿ. ಮಕ್ಕಳ ವಿಚಾರದಲ್ಲಿ ಧನವ್ಯಯ. ಗುರುಹಿರಿಯರಿಂದ ಮಾನಸಿಕ ಸಂತೋಷ ವೃದ್ಧಿ ದೇವತಾ ಕಾರ್ಯಗಳಿಗೆ ಪ್ರಯಾಣ ಸಂಭವ.

ಧನು:

ಸುಸ್ಥಿರ ಆರೋಗ್ಯ. ಸರಿಯಾದ ನಿಯಮ ಶಿಸ್ತಿನಿಂದ ಕೂಡಿದ ಜೀವನ ಶೈಲಿ. ಸಾಂಸಾರಿಕ ಸುಖದಲ್ಲಿ ಹೆಚ್ಚಿದ ಸಂತೋಷ. ಗೃಹೋಪವಸ್ತುಗಳ ಸಂಗ್ರಹ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ನಾಯಕತ್ವಗುಣ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ .

ಮಕರ:

ಶಾರೀರಿಕ ಮಾನಸಿಕ ಆರೋಗ್ಯ ಸುದೃಢ. ಬಹುಜನರೊಂದಿಗೆ ಸಮಯ ವಿನಿಯೋಗಿಸುವ ಸಂದರ್ಭ. ಜನಮನ್ನಣೆ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಶಿಸ್ತು. ಮಕ್ಕಳ ಅಭಿವೃದ್ಧಿಗೆ ಗಮನ.

ಕುಂಭ:

ಉದಾಸೀನತೆ ಮಾಡದೆ ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಿರ ಪ್ರದರ್ಶನ. ಸ್ಥಾನಮಾನ ಗೌರವಾದಿ ವೃದ್ಧಿ. ಉತ್ತಮ ಧನ ಸಂಚಯನ. ಸಹೋದರಾದಿ ವರ್ಗದವರಿಂದ ಮಾನಸಿಕ ನೆಮ್ಮದಿ. ಧಾರ್ಮಿಕ ಚಟುವಟಿಕೆ‌ಗಳಲ್ಲಿ ಸಕ್ರೀಯ ನಡೆ.

ಮೀನ:

ವ್ಯವಹಾರ ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಆರೋಗ್ಯವನ್ನು ಕಡೆಗಣಿಸದಿರಿ. ವಿಪುಲ ಧನಸಂಪತ್ತು ವೃದ್ಧಿ. ಧಾರ್ಮಿಕ ಚಟುವಟಿಕೆಗಳಿಗೆ ಸತ್ಕರ್ಮಕ್ಕೆ ಧನವ್ಯಯ. ಸಂಶೋಧಕರಿಗೆ ಅಧ್ಯಯನ ಪ್ರವೃತ್ತರಿಗೆ ಮನ್ನಣೆ. ಸರಕಾರಿ ಸೌಲಭ್ಯ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next