ಮೇಷ:
ಅನಿರೀಕ್ಷಿತ ಧನಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದ ರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರದಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್ಚತುರತೆ. ಗುರುಹಿರಿಯರಿಂದ ಸಂತೋಷ.
ವೃಷಭ:
ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧು ಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.
Related Articles
ಮಿಥುನ:
ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ಥಿರತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ ಪಾಲು ದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ನಿಮಿತ್ತ ಶ್ರಮ.
ಕರ್ಕ:
ಸಣ್ಣ ಪ್ರಯಾಣ ಸಂಭವ. ನಿರೀಕ್ಷೆಗೂ ಮೀರಿದ ಧನಾಗಮನ. ಮನಃ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿ ಕಾರಯುತ ನಡೆಯಿಂದ ಸಫಲತೆ. ಬಂಧು ಮಿತ್ರರ ಸಹಾಯ ಸಹಕಾರ ಲಭ್ಯ.
ಸಿಂಹ:
ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯ ವೃದ್ಧಿಯಾದುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ.
ಕನ್ಯಾ:
ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಗುರು ಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮನಾಗಿ ಧನವ್ಯಯ ತೋರಿತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರ ದಲ್ಲಿ ಉತ್ತಮ ಬದಲಾವಣೆ ಸಂಭವ.
ತುಲಾ:
ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರುವ ಸಮಯ. ಆರೋಗ್ಯ ವೃದ್ಧಿ. ನೂತನ ಬಂಧು ಮಿತ್ರರ ಸಮಾಗಮ. ಹೆಚ್ಚಿದ ಸ್ಥಾನ ಗೌರವಾದಿ ಸುಖ. ನಿರಂತರ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರಿಂದಲೂ ಸಹಾಯ ಸಹಕಾರ.
ವೃಶ್ಚಿಕ:
ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ನಿರೀಕ್ಷಿತ ಗುರಿಸಾಧಿಸಿದ ತೃಪ್ತಿ ಸಮಾಧಾನ. ಪಾಲು ದಾರರಿಂದ ಸಹಕಾರ ಪ್ರೋತ್ಸಾಹ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಕಾಲ. ಅನಿರೀಕ್ಷಿತ ಧನಾಗಮನ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಸಂಪಾದನೆ .
ಧನು:
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡ ದಿರಿ. ಗುರುಹಿರಿಯರ ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಪ್ರಯಾಣ ಸಂಭವ.
ಮಕರ:
ಆರೋಗ್ಯ ಗಮನಿಸಿ. ಈ ದಿನ ಸಾಮಾನ್ಯ ಫಲದಾಯಕ. ಯಾವುದೇ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆ ಸಮಾಧಾನದಿಂದ ಸಮಯ ಕಳೆಯಿರಿ. ವಿಶ್ರಾಂತಿ ಪಡೆಯಿರಿ. ದೇವತಾ ಪ್ರಾರ್ಥನೆಯಿಂದ ಮಾನಿಸಿಕ ನೆಮ್ಮದಿ.
ಕುಂಭ:
ಆರೋಗ್ಯ ವೃದ್ಧಿ. ಮಕ್ಕಳ ನಿಮಿತ್ತ ಸಂತೋಷ ವೃದ್ಧಿ. ಹೆಚ್ಚಿದ ವರಮಾನ. ಬಂಧು ಮಿತ್ರರಿಂದಲೂ, ಉದ್ಯೋಗ ವ್ಯವಹಾರದಿಂದಲೂ ಅನಿರೀಕ್ಷಿತ ಪ್ರಗತಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ.
ಮೀನ:
ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಧನಾರ್ಜನೆಯಲ್ಲಿ ಮನ್ನಡೆ. ಆಸ್ತಿ ವಿಚಾರದಲ್ಲಿ ಪ್ರಗತಿಪರ ಬದಲಾವಣೆ ಸಂಭವ. ಮಕ್ಕಳಿಂದಲೂ ಸುವಾರ್ತೆ. ದಂಪತಿಗಳಲ್ಲಿ ಪರಸ್ಪರ ಸುಖವೃದ್ಧಿ