Advertisement

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:48 AM Jun 21, 2022 | Team Udayavani |

ಮೇಷ:

Advertisement

ದೇಹಾರೋಗ್ಯ ಉತ್ತಮ. ಉತ್ತಮ ಉತ್ಸಾಹಶೀಲತೆ. ಸರ್ವ ವಿಚಾರಗಳಲ್ಲಿ ಆಸಕ್ತಿ. ಪಶುಗಳಲ್ಲಿ ಮಮತೆ. ಕಾಡುಬೆಟ್ಟ ಪ್ರದೇಶಗಳ ಮೂಲಕ ಸಂಚಾರ. ಶತ್ರುಗಳಿಗೆ ಸಿಂಹ ಸ್ವಪ್ನ. ಗಣ್ಯರೊಂದಿಗೆ ಸಂಪರ್ಕ ಜನಮನ್ನಣೆ. ಕೀರ್ತಿ ಸಂಪಾದನೆ.

ವೃಷಭ:

ಅಧ್ಯಯನದಲ್ಲಿ ಆಸಕ್ತಿ. ಪಾಂಡಿತ್ಯ ವೃದ್ಧಿ. ಬಹುಗುಣಗಳ ಪ್ರದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಲೋಭತನ. ಬಂಧು ಮಿತ್ರರ ಸರ್ವ ವಿಧದ ಸಹಾಯ ಪ್ರೋತ್ಸಾಹ. ಆಸ್ತಿ ವಿಚಾರದಲ್ಲಿ ನಿಪುಣತೆ.

ಮಿಥುನ:

Advertisement

ಉತ್ತಮ ಆರೋಗ್ಯ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗಣ್ಯರಿಂದ ಸಮ್ಮಾನ. ವಾಕ್‌ ಚತುರತೆ ವಿಚಾರದಲ್ಲಿ ಪಾಂಡಿತ್ಯ ಪ್ರದರ್ಶನ. ಕ್ಷಮಾಗುಣ ಸರ್ವವಿಧದ ಯುಕ್ತಿಗಳನ್ನು ಒಳಗೊಂಡ ಕಾರ್ಯವೈಖರಿ. ಧನ ಸಂರಕ್ಷಣೆ. ಗುರುಹಿರಿಯರ ಸಲಹೆ.

ಕರ್ಕ:

ಸುದೃಢ ಆರೋಗ್ಯ. ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಏರಿಳಿತ. ದೂರದ ವ್ಯವಹಾರಗಳಲ್ಲಿ ಧನವೃದ್ಧಿ. ಬಂಧು ಮಿತ್ರರೊಂದಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಪರಿಶ್ರಮ ದಿಂದ ಗೌರವ. ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಸಿಂಹ:

ಆರೋಗ್ಯ ವೃದ್ಧಿ. ಸುಖ-ದುಖಃ ಸಹಿಷ್ಣುತೆ. ಪರರ ದ್ರವ್ಯಗಳಲ್ಲಿ ವ್ಯವಹರಿಸುವ ಅವಕಾಶ. ಬುದ್ಧಿವಂತಿಕೆಯಿಂದ ಉದ್ಯೋಗ ವ್ಯವಹಾರಗಳಲ್ಲಿ ತತ್ಪರಣೆ. ಹೆಚ್ಚಿದ ಧನಸಂಪಾದನೆ. ಎಲ್ಲರಿಂದಲೂ ಗೌರವ ಸಂಪಾದಿಸಲು ಪ್ರಯತ್ನ.

ಕನ್ಯಾ:

ಉತ್ತಮ ಆರೋಗ್ಯ. ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸದಾ ಸುಖೀಯಾಗಲು ಅಪೇಕ್ಷೆ. ಸಂದಭೋìಚಿತ ಉಪಾಯ ಪ್ರದರ್ಶನ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ

ತುಲಾ:

ಆರೋಗ್ಯದ ಬಗ್ಗೆ ಉದಾಸೀನತೆ ತೋರ ದಿರಿ. ಉದ್ಯೋಗ ವ್ಯವಹಾರಗಳಲ್ಲಿ ಚುರುಕತನ ಅತೀ ಬುದ್ಧಿವಂತಿಕೆ ಕಂಡೀತು. ಪಾರದರ್ಶಕತೆಗೆ ಆದ್ಯತೆ ನೀಡಿ. ರಾಜಕೀಯ ಕಾರ್ಯಗಳಲ್ಲಿ ಆಸಕ್ತಿ. ಆಸ್ತಿ ವಿಚಾರದಲ್ಲಿ ಗಣ್ಯರ ಸಹಕಾರ ಲಭಿಸೀತು. ಸಾಂಸಾರಿಕ ಸುಖ ವೃದ್ಧಿ.

ವೃಶ್ಚಿಕ:

ಸ್ಥಿರ, ಸುದೃಢ ಆರೋಗ್ಯ. ಸಮಾಜ ದಲ್ಲಿ ಗಣ್ಯರಿಂದ ಪುರಸ್ಕಾರ.ಅಧಿಕಾರಯುತ ಜೀವನ ಶೈಲಿ. ಹಿಡಿದ ಕಾರ್ಯ ಮುಗಿಸುವ ಛಲ. ನಿರಂತರ ಉದ್ಯಮಶೀಲತೆ. ಅನೇಕ ರೀತಿಯಲ್ಲಿ ಬಹು ಧನ ಸಂಪಾ ದನೆ. ಗೃಹದಲ್ಲಿ ಕಿರಿಕಿರಿ ತೋರಿ ಬಂದಾವು ತಾಳ್ಮೆ ವಹಿಸಿ.

ಧನು:

ಉತ್ತಮ ಆರೋಗ್ಯ. ಸಹೋದರರಿಂದ ಸಂತೋಷ. ಉದಾರತೆಯ ಕಾರ್ಯಪ್ರವೃತ್ತಿ ಯಿಂದ ಜನಮನ್ನಣೆ. ಕೀರ್ತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನಸಂಪತ್ತಿನ ವಿಚಾರದಲ್ಲಿ ಗಣನೀಯ ವೃದ್ಧಿ.

ಮಕರ:

ಆರೋಗ್ಯ ಗಮನಿಸಿ. ಆಸ್ತಿ ವಿಚಾರಗಳಲ್ಲಿ ತಾಳ್ಮೆಯ ನಡೆ ಅಗತ್ಯ. ಬಂಧುಗಳ ಜವಾ ಬ್ದಾರಿ ತೋರಿತು. ಹಣಕಾಸಿನ ವಿಚಾರದಲ್ಲಿ ನಿಧಾನಗ ತಿಯ ಪ್ರಗತಿ. ಸಹೋದ್ಯೋಗಿಗಳಿಂದ ಸಂತೋಷ ವೃದ್ಧಿ. ಮಕ್ಕಳ ವಿಚಾರದಲ್ಲಿ ಪ್ರಗತಿ.

ಕುಂಭ:

ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಉತ್ತಮ ಬದಲಾವಣೆ ಸಂಭವ. ನಿರೀಕ್ಷಿತ ಧನಾರ್ಜನೆ. ಆಸ್ತಿ ವಿಚಾರದಲ್ಲಿ ದುಡುಕು ನಿರ್ಧಾರದಿಂದ ನಷ್ಟ ಸಂಭವ. ಹಿರಿಯರಿಂದ ಸುಖ. ಧಾರ್ಮಿಕ ಚಟುವಟಿಕೆಗಳಿಂದ ನೆಮ್ಮದಿ.

ಮೀನ:

ಆರೋಗ್ಯ ವೃದ್ಧಿಯಾದರೂ ನಿರ್ಲಕ್ಷ್ಯ ತೋರದಿರಿ. ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಧನವ್ಯಯ. ಅನ್ಯರ ಸಹಾಯ ನಿರೀಕ್ಷಿಸದಿರಿ. ಪರಿಶ್ರಮಕ್ಕೆ ತಕ್ಕ ಸಂಪತ್ತು ವೃದ್ಧಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next