Advertisement

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:08 AM Jun 27, 2022 | Team Udayavani |

ಮೇಷ:

Advertisement

ಗುರುಹಿರಿಯರ ಆಶೀರ್ವಾದ ಸಹಕಾರ. ನಿರೀಕ್ಷಿತ ಸ್ಥಾನಮಾನ ಗೌರವ ಪ್ರಾಪ್ತಿ. ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳಿಂದ ಪ್ರೋತ್ಸಾಹ. ದಾಂಪತ್ಯ ತೃಪ್ತಿಕರ.

ವೃಷಭ:

ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಜನಮನ್ನಣೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಧನ ಲಾಭ. ದಾಂಪತ್ಯ ತೃಪ್ತಿಕರ. ಗುರುಹಿರಿಯರಿಂದ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

ಮಿಥುನ:

Advertisement

ದೀರ್ಘ‌ ಪ್ರಯಾಣ ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದಾಂಪತ್ಯ ಸುಖ ವೃದ್ಧಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ. ಗೃಹ ಆಸ್ತಿ ಚಿಂತೆ ಎದುರಾದೀತು. ಮಿತ್ರರಿಂದ ಸಾಮಾನ್ಯ ಪ್ರೋತ್ಸಾಹ.

ಕರ್ಕ:

ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಎದುರಾದೀತು. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಕಂಡುಬಂದಾವು. ದಾಂಪತ್ಯ ಸುಖ ಮಧ್ಯಮ. ಗುರುಹಿರಿಯರ ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ.

ಸಿಂಹ:

ದೂರ ಸಂಚಾರ ಸಂಭವ. ಪರಿಸ್ಥಿತಿಗೆ ಸರಿಯಾಗಿ ಕಾರ್ಯವೈಖರಿ. ಕೆಲವೊಮ್ಮೆ ಕುಚೇಷ್ಠೆ ನಡೆದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿಕರ.

ಕನ್ಯಾ:

ಆರೋಗ್ಯ ಗಮನಿಸಿ. ಅನಾವಶ್ಯಕ ಸ್ಪರ್ಧೆಗೆ ಆಸ್ಪದ ನೀಡದಿರಿ. ಬಂಧುಮಿತ್ರರಲ್ಲಿ ಸಂಯಮದ ನಡೆ ಅಗತ್ಯ. ದಾಂಪತ್ಯ ಸುಖ ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅವಕಾಶ. ನಿರೀಕ್ಷೆಗೂ ಮೀರಿದ ಧನಾಗಮ.

ತುಲಾ:

ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಾಯ ಲಾಭ. ಉತ್ತಮ ಗೌರವದಿಂದ ಕೂಡಿದ ಧನಾರ್ಜನೆ. ಜ್ಞಾನಕ್ಕೆ ಮನ್ನಣೆ. ಸಹೋದರರಿಗೆ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗ. ದೇವತಾಕಾರ್ಯಗಳಲ್ಲಿ ಗೊಂದಲವಿದ್ದರೂ ಸಫ‌ಲತೆ ಸಾಧಿಸಿದ ತೃಪ್ತಿ.

ವೃಶ್ಚಿಕ:

ಉದ್ಯೋಗ ನಿಮಿತ್ತ ಪ್ರಯಾಣ. ನಿರೀಕ್ಷಿತ ಸ್ಥಾನ ಸುಖ. ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ. ಗೃಹೋಪಯೋಗಿ ವಸ್ತು ಸಂಗ್ರಹ. ದಾಂಪತ್ಯದಲ್ಲಿ ತೃಪ್ತಿ. ಮಕ್ಕಳ ವಿಚಾರ ತಾಳ್ಮೆ ಅಗತ್ಯ. ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅಗತ್ಯ .

ಧನು:

ಧನಾರ್ಜನೆಗೆ ಸರಿಯಾದ ಖರ್ಚು. ಆರೋಗ್ಯದಲ್ಲಿ ಏರಿಳಿತದ ಸ್ಥಿತಿ. ಕಾರ್ಮಿಕ ವರ್ಗದವರಿಂದಲೂ ಸಹೋದರಾದಿ ವರ್ಗ ದವರಿಂದಲೂ ಸುಖ ಪ್ರಯಾಣ. ದೇವತಾ ಕಾರ್ಯಗಳಲ್ಲಿ ಅಡಚಣೆ ವಿಳಂಬ. ಸಾಂಸಾರಿಕ ಸುಖ ಉತ್ತಮ.

ಮಕರ:

ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ. ಆಹಾರೋದ್ಯಮದವರಿಗೆ ಅಭಿವೃದ್ಧಿ. ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಪ್ರಯಾಣ ಯೋಗ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಹಿರಿಯರ ಆರೋಗ್ಯ ಗಮನಿಸಿ.

ಕುಂಭ:

ಮಕ್ಕಳ ವಿಚಾರದಲ್ಲಿ ಸಂತೋಷ. ನಿರೀಕ್ಷಿತ ಧನಾಗಮ. ಸಹೋದರ ಸಮಾನರಿಗೆ ದೀರ್ಘ‌ ಪ್ರಯಾಣ ಸುಖ. ದಂಪತಿಗಳಿಗೆ ಉತ್ತಮ ಶುಭಫ‌ಲ. ಉದ್ಯೋಗ ವಿಚಾರದಲ್ಲಿ , ಪಾಲುದಾರಿಕಾ ವ್ಯವಹಾರದಲ್ಲಿ ಜವಾಬ್ದಾರಿ ವಹಿಸುವುದರಿಂದ ಅನುಕೂಲಕರ ವಾತಾವರಣ.

ಮೀನ:

ದೂರ ಪ್ರಯಾಣ. ಗೃಹೋಪ ವಸ್ತು ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಗೆ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾರ್ಜನೆ. ಗುರುಹಿರಿಯರ ಆರೋಗ್ಯ ವೃದ್ಧಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯದಿಂದ ಸಮಾದಾನ ತೃಪ್ತಿ.

Advertisement

Udayavani is now on Telegram. Click here to join our channel and stay updated with the latest news.

Next