Advertisement

ಸೋಮವಾರದ ರಾಶಿ ಫಲ, ಇಲ್ಲವೆ ನಿಮ್ಮ ಗ್ರಹಬಲ

07:08 AM Nov 21, 2022 | Team Udayavani |

ಮೇಷ: ಗೃಹೋಪಯೋಗಿ ವಸ್ತುಗಳ ಸಂಗ್ರಹ. ಹೆಚ್ಚಿದ ಜವಾಬ್ದಾರಿ. ಉತ್ತಮ ಹೂಡಿಕೆ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದ್ದರಿಂದ ಮನಃ ತೃಪ್ತಿ. ಗೌರವದಿಂದ ಒದಗಿದ ಆರ್ಥಿಕ ಲಾಭ. ಗುರುಹಿರಿಯರಿಂದ ಸರ್ವವಿಧದ ಮೆಚ್ಚುಗೆ. ಪ್ರೋತ್ಸಾಹ ಲಭ್ಯ.

Advertisement

ವೃಷಭ: ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ಗುರುಹಿರಿಯರೊಂದಿಗೆ ಉತ್ತಮ ಸಮಯ ವಿನಿಯೋಗ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಆದಾಯಕ್ಕೆ ಸರಿಯಾಗಿ ಖರ್ಚು ವೆಚ್ಚ ಸಂಭವ.

ಮಿಥುನ: ನಿರೀಕ್ಷಿಸಿದಂತೆ ಅಧಿಕ ಧನಲಾಭ. ಸ್ಥಾನ ಗೌರವಾದಿ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಸಾಹಸ ಪ್ರವೃತ್ತಿ ಸಂಭವ. ಆಳವಾದ ವಿದ್ಯೆ ಜ್ಞಾನ ಸಂಪಾದನೆಯಲ್ಲಿ ಹೆಚ್ಚಿದ ಪರಿಶ್ರಮ.

ಕಟಕ: ಕೆಲಸ ಕಾರ್ಯಗಳಲ್ಲಿ ಉದ್ಯೋಗ ದೂರದ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿಸಿದ ಸಫ‌ಲತೆ ಲಭಿಸಿದ್ದರಿಂದ ಮನ ಸಂತೋಷ. ಆರೋಗ್ಯ ಗಮನಿಸಿ. ಗುರುಹಿರಿಯರೊಂದಿಗೆ ಸದಾಚಾರದಿಂದ ವರ್ತಿಸುವುದರಿಂದ ಲಾಭ ಸಂಭವ.

ಸಿಂಹ: ದೂರ ಪ್ರಯಾಣ. ಆರೋಗ್ಯದಲ್ಲಿ ಉದಾಸೀನತೆ ಸಲ್ಲದು. ಗುರುಹಿರಿಯರೊಂದಿಗೆ ತಲ್ಲೀನತೆ. ಪಾರದರ್ಶಕತೆ ಅಗತ್ಯವಾಗಬಹುದು. ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ, ತಾಯಿ ಸಮಾನರಿಂದ ಮಿತ್ರರಿಂದಲೂ ಸಂದರ್ಭಕ್ಕೆ ಸರಿಯಾಗಿ ಸಹಾಯ.

Advertisement

ಕನ್ಯಾ: ಆರೋಗ್ಯ ಗಮನಿಸಿ. ಹಣಮಾಡದೇ ತಾಳ್ಮೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ ಕಂಡುಬಂದರೂ ಗಣನೀಯ ಅಭಿವೃದ್ಧಿ ಗೋಚರಿಸಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಮಕ್ಕಳಿಂದ ಸಂತೋಷ.

ತುಲಾ: ಸಣ್ಣ ಪ್ರಯಾಣ. ಸಹೋದ್ಯೋಗಿ ಗಳಿಂದಲೂ ಸಹೋದರ ಸಮಾನರಿಂದಲೂ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿಯಿಂದ ಪ್ರಗತಿ ಮಾನ್ಯತೆ ಲಭ್ಯ. ಅವಿವಾಹಿತರಿಗೆ ವಿವಾಹ ಭಾಗ್ಯ.

ವೃಶ್ಚಿಕ: ಆರೋಗ್ಯ ಸುದೃಢ. ಎಲ್ಲಾ ವಿಧದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಪ್ರಗತಿ. ಉತ್ತಮ ಧನ ಲಾಭ. ಯೋಗ್ಯ ನೆಂಟಸ್ತಿಕೆ ಕೂಡಿ ಬರುವುದು. ಧಾರ್ಮಿಕ ಆಚರಣೆಗಳಲ್ಲಿ ಅಡಚಣೆ ತೋರಿಬರುವುದು. ಗುರುಹಿರಿಯರ ಆರೋಗ್ಯ ಗಮನಿಸಿ.

ಧನು: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಜನ ಪ್ರಶಂಸೆ ಲಭಿಸುವುದು. ಮೇಲಧಿಕಾರಿಗಳ ಸಹಕಾರ. ಮಾರ್ಗದರ್ಶನ ಲಾಭ. ಹೂಡಿಕೆಗಳಲ್ಲಿ ಆಸಕ್ತಿ ಹಾಗೂ ಕ್ರಿಯಾಶೀಲತೆ ಸಂಭವ. ಉತ್ತಮ ಧನಾರ್ಜನೆ. ಮಕ್ಕಳಿಂದ ಸ್ಥಾನ ಗೌರವಕ್ಕಾಗಿ ಹೆಚ್ಚಿದ ಪರಿಶ್ರಮ.

ಮಕರ: ಕೆಲಸ ಕಾರ್ಯಗಳಲ್ಲಿ ನಿಷ್ಠೆ ಏಕಾಗ್ರತೆಯಿಂದ ಮೆಚ್ಚುಗೆ. ಸಂದಭೋìಚಿತವಾದ ಯೋಜನೆ ಯೋಚನೆಯಿಂದ ಸಫ‌ಲತೆ. ಹಣಕಾಸಿನ ವಿಚಾರದಲ್ಲಿ ಆಯವ್ಯಯ ಸಮಾನವಾಗಿರುವುದು. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ.

ಕುಂಭ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಉತ್ತಮ ಜವಾಬ್ದಾರಿಯುತ ವಾಕ್‌ ಚತುರತೆಯಿಂದ ಅಧಿಕ ಧನಾಗಮನ. ದೂರದ ಮಿತ್ರರ ಸಲಹೆ ಸಹಕಾರದಿಂದ ಅಧಿಕ ಉಳಿತಾಯ ಸಂಭವ.

ಮೀನ: ಗುರುಹಿರಿಯರ ಉತ್ತಮ ಮಾರ್ಗದರ್ಶನ ಲಾಭ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಧನಲಾಭ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಕಂಡುಬಂದರೂ ಜಯ ಸಾಧಿಸಿದ್ದರಿಂದ ಮನಃ ಸಮಾದಾನವಿರುವುದು. ಗೃಹೋಪಯೋಗಿ ವಸ್ತುಗಳ ಸಂಗ್ರಹ. ದಾಂಪತ್ಯ ಸುಖ ತೃಪ್ತಿ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next