Advertisement

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

07:21 AM Feb 21, 2022 | Team Udayavani |

ಮೇಷ:

Advertisement

ದೈಹಿಕ ಮಾನಸಿಕ ಸುಖ ವೃದ್ಧಿ. ಅಧಿಕ ಶ್ರಮದಿಂದ ಕೂಡಿದ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ದಾಂಪತ್ಯ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡವಿದ್ದರೂ ಕಾರ್ಯ ಸಾಧಿಸಿದ ತೃಪ್ತಿ.

ವೃಷಭ:

ಆರೋಗ್ಯ ವೃದ್ಧಿದಾಯಕ. ವ್ಯವಹಾರ ಉದ್ಯೋಗಗಳಲ್ಲಿ ಹೆಚ್ಚಿದ ಗಮನ. ನಿರೀಕ್ಷಿತ ಧನಾಗಮನ. ಮಕ್ಕಳ ವಿಚಾರದಲ್ಲಿ ಸಂತಸ. ಗುರು ಹಿರಿಯರಿಂದ ಪ್ರೋತ್ಸಾಹ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಸಮಯ.

ಮಿಥುನ:

Advertisement

ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣಗಳಿಗೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಇದ್ದರೂ ಧನಾರ್ಜನೆಗೆ ಅಧಿಕ ಶ್ರಮವಹಿಸಿ. ಮಕ್ಕಳ ವಿಚಾರದಲ್ಲಿ ಖುಷಿ. ದಾಂಪತ್ಯದಲ್ಲಿ ಪರಸ್ಪರ ಪ್ರೋತ್ಸಾಹ. ಹಿರಿಯರ ಆರೋಗ್ಯ ಉತ್ತಮ.

ಕಟಕ:

ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೀರ್ಘ‌ ಪ್ರಯಾಣಗಳಿಗೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ದಾಂಪತ್ಯ ಸುಖ ವೃದ್ಧಿ. ನಿರೀಕ್ಷಿತ ಧನ ಸಂಪತ್ತಿನ ಆಗಮನ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಹಿರಿಯರಿಂದ ಮಾರ್ಗದರ್ಶನ.

ಸಿಂಹ:

ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ವಿಚಾರದ ಬಗ್ಗೆ ಗಮನ ಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ನಿರಂತರ ಧನಾರ್ಜನೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ವಿದ್ಯಾರ್ಜನೆಗೆ ಸದಾವಕಾಶ.

ಕನ್ಯಾ:

ಆರೋಗ್ಯದ ಬಗ್ಗೆ ಗಮನವಿರಲಿ. ದೀರ್ಘ‌ ಪ್ರಯಾಣದಲ್ಲಿ ದೇಹಾಯಾಸ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ. ಧನಾಗಮ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆಗೊಳಗಾಗುವ ಸಂಭವ. ವಿದ್ಯಾರ್ಥಿಗಳಿಗೆ ಉತ್ತಮ. ಆಸ್ತಿ ವಿಚಾರಗಳಲ್ಲಿ ಪ್ರಗತಿ .

ತುಲಾ:

ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಾಯ ಲಾಭ. ಉತ್ತಮ ಗೌರವದಿಂದ ಕೂಡಿದ ಧನಾರ್ಜನೆ. ಜ್ಞಾನಕ್ಕೆ ಮನ್ನಣೆ. ಸಹೋದರರಿಗೆ ಅಭಿವೃದ್ಧಿ. ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗ. ದೇವತಾ ಕಾರ್ಯಗಳಲ್ಲಿ ಗೊಂದಲವಿದ್ದರೂ ಸಫ‌ಲತೆ.

ವೃಶ್ಚಿಕ:

ಉದ್ಯೋಗ ನಿಮಿತ್ತ ಪ್ರಯಾಣ ನಿರೀಕ್ಷಿತ ಸ್ಥಾನ ಸುಖ. ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ. ಗೃಹೋಪಯೋಗಿ ವಸ್ತು ಸಂಗ್ರಹ. ದಾಂಪತ್ಯದಲ್ಲಿ ತೃಪ್ತಿ. ಮಕ್ಕಳ ವಿಚಾರದಲ್ಲಿ ತಾಳ್ಮೆ ಅಗತ್ಯ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಆರೋಗ್ಯದ ಬಗ್ಗೆ ಗಮನಿಸಿ.

ಧನು:

ಧನಾರ್ಜನೆಗೆ ಸರಿಯಾಗಿ ಖರ್ಚು. ಆರೋಗ್ಯದಲ್ಲಿ ಏರಿಳಿತದ ಸ್ಥಿತಿ. ಕಾರ್ಮಿಕ ವರ್ಗದವರಿಂದ, ಸಹೋದರಾದಿ ವರ್ಗದಿಂದಲೂ ಸುಖ. ಪ್ರಯಾಣ, ದೇವತಾ ಕಾರ್ಯಗಳಲ್ಲಿ ಅಡಚಣೆ. ವಿದ್ಯಾರ್ಥಿಗಳು ಆತ್ಮವಿಮರ್ಶೆ ಮಾಡಿಕೊಳ್ಳದೇ ಅಧ್ಯಯನ ಮಾಡಿ ಸಾಧಿಸಿ.

ಮಕರ:

ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ. ಆಹಾರೋದ್ಯಮದವರಿಗೆ ಅಭಿವೃದ್ಧಿ. ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಪ್ರಯಾಣ ಯೋಗ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಹಿರಿಯರ ಆರೋಗ್ಯ ಗಮನಿಸಿ.

ಕುಂಭ:

ಮಕ್ಕಳ ವಿಚಾರದಲ್ಲಿ ಸಂತೋಷ. ನಿರೀಕ್ಷಿತ ಧನಾಗಮ. ಸಹೋದರ ಸಮಾನರಿಗೆ ದೀರ್ಘ‌ ಪ್ರಯಾಣ ಸುಖ. ದಂಪತಿಗಳಿಗೆ ಉತ್ತಮ ಶುಭ ಫ‌ಲ. ಉದ್ಯೋಗ ವಿಚಾರದಲ್ಲಿ , ಪಾಲುದಾರಿಕಾ ವ್ಯವಹಾರದಲ್ಲಿ ಜವಾಬ್ದಾರಿತನದಿಂದ ಅನುಕೂಲಕರ ವಾತಾವರಣ.

ಮೀನ:

ದೂರ ಪ್ರಯಾಣ. ಗೃಹೋಪ ವಸ್ತು ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾರ್ಜನೆ. ಮನಸ್ಸಿಗೆ ವಿಶೇಷ ಸಮಾಧಾನ ಪ್ರಾಪ್ತಿ. ದೇವತಾ ಕಾರ್ಯಗಳಿಂದ ದೇವ ಚಿಂತನೆಯಿಂದ ಒಳಿತಾಗಲಿದೆ. ಗುರು ಹಿರಿಯರ ಆರೋಗ್ಯ ಗಮನಿಸಿ.

Advertisement

Udayavani is now on Telegram. Click here to join our channel and stay updated with the latest news.

Next