ಸೌರವ್ಯೂಹದಲ್ಲಿ ಒಟ್ಟು 27 ನಕ್ಷತ್ರಗಳಿವೆ. ಅಶ್ವಿನಿಯಿಂದ ಆಶ್ಲೇಷ-9 ನಕ್ಷತ್ರಗಳು, ಮಘದಿಂದ ಜೇಷ್ಠ-9 ನಕ್ಷತ್ರಗಳು, ಮೂಲ ನಕ್ಷತ್ರದಿಂದ ರೇವತಿ-9 ನಕ್ಷತ್ರಗಳಿವೆ. ಮೊದಲಿನ 9ನಕ್ಷತ್ರಗಳು ಮೇಷದಿಂದ ಕರ್ಕಾಟಕ ರಾಶಿವರೆಗೆ ಮುಕ್ತಾಯವಾಗುತ್ತದೆ.
ಮೇಷ ರಾಶಿಯನ್ನು ಅಗ್ನಿತತ್ವ ರಾಶಿಯೆಂದೂ, ವೃಷಭ ರಾಶಿಯನ್ನು ಭೂ ತತ್ವ, ಮಿಥುನ ರಾಶಿಯನ್ನು ವಾಯು ತತ್ವ, ಕರ್ಕಾಟಕ ರಾಶಿಯನ್ನು ಜಲತತ್ವ ರಾಶಿ ಎಂದು ವಿಂಗಡಿಸಲಾಗಿದೆ. ಮೊದಲಿನ 9 ನಕ್ಷತ್ರಗಳಲ್ಲಿ ಕುಜ, ರವಿ, ಗುರುವಿನ ನಕ್ಷತ್ರಗಳಾದ ರವಿ, ಕೃತ್ತಿಕ, ಕುಜ, ಮೃಗಶಿರಾ, ಗುರು, ಪುನರ್ವಸು ನಕ್ಷತ್ರಗಳು ದ್ವಿರಾಶಿಗಳಲ್ಲಿ ಹಬ್ಬಿಕೊಂಡಿದೆ.
ಅಂದರೆ ಕೃತ್ತಿಕ ನಕ್ಷತ್ರದ ಮೊದಲ ಪಾದ ಮೇಷದಲ್ಲೂ, ಉಳಿದ 3 ಪಾದಗಳು ವೃಷಭದಲ್ಲೂ, ಹಾಗೆ ಮೃಗಶಿರ ನಕ್ಷತ್ರದ 2 ಪಾದ ವೃಷಭದಲ್ಲಿ, ಉಳಿದ ಎರಡು ಪಾದ ಮಿಥುನದಲ್ಲಿ, ಪುನರ್ವಸು ನಕ್ಷತ್ರದ 3 ಪಾದ ಮಿಥುನದಲ್ಲಿ, ಒಂದು ಪಾದ (ಚರಣ) ಕರ್ಕಾಟಕ ರಾಶಿಯಲ್ಲಿ ಇದೆ.
ಅದೇ ಪ್ರಕಾರ, ಮಘ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದ ತನಕ ಬರುವ ರವಿಯ ನಕ್ಷತ್ರಗಳಾದ ಉತ್ತರ, ಸಿಂಹರಾಶಿಯಲ್ಲಿ ಮೊದಲ ಪಾದ (ಚರಣ), ಉಳಿದ 3 ಪಾದಗಳು ಕನ್ಯಾ ರಾಶಿಯಲ್ಲೂ, ಕುಜನ ನಕ್ಷತ್ರವಾದ ಚಿತ್ರಾದ ಮೊದಲಿನ 2 ಪಾದ ಕನ್ಯಾ ರಾಶಿಯಲ್ಲಿ, ಉಳಿದ ಎರಡು ಚರಣ ತುಲಾ ರಾಶಿಯಲ್ಲಿ, ಗುರುವಿನ ನಕ್ಷತ್ರವಾದ ವಿಶಾಖದ ಮೊದಲಿನ 3 ಪಾದ ತುಲಾ ಮತ್ತು ಕೊನೆಯ ಒಂದು ಪಾದ ವೃಶ್ಚಿಕ ರಾಶಿಯಲ್ಲಿ ವಿಸ್ತಾರಗೊಂಡಿದೆ.
ಕೊನೆಯ ನಕ್ಷತ್ರದ ಗುಂಪುಗಳಾದ ಮೂಲ ನಕ್ಷತ್ರದಿಂದ, ರೇವತಿ ನಕ್ಷತ್ರದ ತನಕ ಬರುವ ರವಿಯ ನಕ್ಷತ್ರ ಉತ್ತರ ಆಶಾಢದ ಮೊದಲ ಪಾದ ಧನುವಿನಲ್ಲೂ, ಉಳಿದ 3 ಚರಣ ಮಕರ ರಾಶಿಯಲ್ಲಿ, ಕುಜನ ನಕ್ಷತ್ರ ಧನಿಷ್ಠದ ಮೊದಲ 2 ಪಾದ ಮಕರ, ಉಳಿದ 2 ಪಾದ ಕುಂಭದಲ್ಲೂ, ಗುರುವಿನ ನಕ್ಷತ್ರವಾದ ಪೂರ್ವಭಾದ್ರದ ಮೊದಲ 3 ಪಾದ ಕುಂಭದಲ್ಲೂ, ಕೊನೆಯ ಒಂದು ಪಾದ ಮೀನ ರಾಶಿಯಲ್ಲಿ ಹರಡಿಕೊಂಡಿದೆ.
ಈ ಕಾರಣದಿಂದ ರವಿ, ಕುಜ, ಗುರುವಿನ ನಕ್ಷತ್ರಗಳನ್ನು ದ್ವಿರಾಶಿ ನಕ್ಷತ್ರಗಳೆಂದು ಪರಿಗಣಿಸಲಾಗಿದೆ. ಈ ಮೊದಲು ವಿವರಿಸಿದಂತೆ ಕರ್ಕಾಟಕ ಜಲತತ್ವವನ್ನು ಹೊಂದಿದೆ. ನಂತರದ ಸಿಂಹ ರಾಶಿ ಅಗ್ನಿತತ್ವ ಹೊಂದಿದೆ. ವೃಶ್ಚಿಕ ರಾಶಿ ಜಲಜತ್ವ ಮತ್ತು ಧನು ಅಗ್ನಿ ತತ್ವವನ್ನೂ, ಮೀನ ಜಲತತ್ವ ಮತ್ತು ಮೇಷ ರಾಶಿಯು ಅಗ್ನಿ ತತ್ವವನ್ನು ಹೊಂದಿದೆ. ಅಗ್ನಿ ತತ್ವಗಳು ಮತ್ತು ಜಲತತ್ವಗಳು ವಿರುದ್ಧ ಗುಣಗಳನ್ನು ಹೊಂದಿದೆ.
ಜಲತತ್ವದಲ್ಲಿ ಬರುವ ಕೊನೆಯ ನಕ್ಷತ್ರಗಳಾದ ಆಶ್ಲೇಷ, ಜೇಷ್ಠ ಮತ್ತು ರೇವತಿ ಹಾಗೂ ಅಗ್ನಿತತ್ವದಲ್ಲಿ ಬರುವ ಮೊದಲ ನಕ್ಷತ್ರಗಳಾದ ಮಘ, ಮೂಲ ಮತ್ತು ರೇವತಿ ನಕ್ಷತ್ರಗಳನ್ನು ಗಂಡಾಂತರ ನಕ್ಷತ್ರಗಳೆಂದು ಹೇಳಲಾಗಿದೆ.
ರವೀಂದ್ರ ಐರೋಡಿ, ಸಾಸ್ತಾನ
ಜ್ಯೋತಿಷ್ಯ ವಿಶ್ಲೇಷಕರು