Advertisement

ನಿತ್ಯಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಸಂತಸದ ಸುದ್ದಿ, ಅಚ್ಚರಿಯ ಬೆಳವಣಿಗೆ !

07:29 AM Mar 17, 2021 | Team Udayavani |

ಮೇಷ: ಶುಭಕಾರ್ಯಗಳಿಗೆ ವಿಘ್ನ ಭೀತಿ ತಂದರೂ ಆತ್ಮವಿಶ್ವಾಸ ಹಾಗೂ ಪ್ರಯತ್ನಬಲದಿಂದ ಕಾರ್ಯಸಿದ್ಧಿಯಾಗಲಿದೆ. ಬ್ಯಾಂಕ್‌, ವಿತ್ತಖಾತೆಗೆ ಸಂಬಂಧಪಟ್ಟ ಕಾರ್ಯಗಳು ಸಫ‌ಲತೆಯನ್ನು ಪಡೆಯಲಿದೆ. ಮುನ್ನಡೆಯಿರಿ.

Advertisement

ವೃಷಭ: ಸಾಂಸಾರಿಕವಾಗಿ ಅನಗತ್ಯ ವಿವಾದವೊಂದು ಎದುರಾಗಲಿರುವ ಸಾಧ್ಯತೆ ಇರುತ್ತದೆ. ಕಿರು ಪ್ರಯಾಣದ ಅವಕಾಶದಿಂದ ಕಾರ್ಯಸಿದ್ಧಿಯಾಗಲಿದೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಬೇಕಾಗುತ್ತದೆ. ಉತ್ತಮ ಫ‌ಲಿತಾಂಶವಿದೆ.

ಮಿಥುನ: ಆತ್ಮೀಯರ ಅನಾರೋಗ್ಯ ನಿಮಿತ್ತ ಆಸ್ಪತ್ರೆ ಸಂದರ್ಶನದ ಸಿದ್ಧತೆ ಇರುತ್ತದೆ. ಹಂತಹಂತವಾಗಿ ಆರೋಗ್ಯವೃದ್ಧಿ ಇದೆ. ಧನಪ್ರಾಪ್ತಿ, ಭೂಸಂಪತ್ತಿನ ಅಭಿವೃದ್ಧಿ ಕಾರ್ಯ ಜಯ, ಲಾಭಾದಿಗಳು ಉಂಟಾಗುವವು. ಶುಭವಿದೆ.

ಕರ್ಕ: ಒಂದೆಡೆ ಅಧಿಕ ರೀತಿಯಲ್ಲಿ ಖರ್ಚುವೆಚ್ಚಗಳಾದರೂ ಇನ್ನೊಂದೆಡೆಯಿಂದ ಉತ್ತಮ ಧನಾಗಮನವಿರುತ್ತದೆ. ಯತ್ನಿಸಿದ ಕಾರ್ಯದಲ್ಲಿ ಯಶಸ್ಸು ಕಂಡುಬರುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ.

 ಸಿಂಹ: ರಾಜಕೀಯ ವರ್ಗದವರಿಗೆ ಅಧಿಕಾರದ ಉಳಿವಿಗಾಗಿ ಹೋರಾಟದ ಅನಿವಾರ್ಯತೆ ಕಂಡು ಬರಲಿದೆ. ವೃತ್ತಿರಂಗದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸಬೇಕಾದ ಸಂದಿಗ್ಧತೆ ಕಂಡುಬರುವುದು. ಕಿರುಸಂಚಾರವಿದೆ.

Advertisement

ಕನ್ಯಾ: ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವರಿಂದ ಕಿರುಕುಳವು ಕಂಡುಬರುವುದು. ದೈಹಿಕ ಶ್ರಮದ ಕಾರ್ಯ, ದುಡುಕು ವರ್ತನೆಯಿಂದ ಮುಖಭಂಗದ ಪ್ರಸಂಗವಿರುತ್ತದೆ. ಸಹೋದ್ಯೋಗಿಗಳೊಂದಿಗೆ ಪ್ರೀತಿಯಿಂದ ವ್ಯವಹರಿಸಿ.

ತುಲಾ: ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಮಕ್ಕಳಿಂದ ಕಿರಿಕಿರಿ ತಪ್ಪದು. ಆರ್ಥಿಕವಾಗಿ ಅನಿರೀಕ್ಷಿತವಾಗಿ ಒದಗಿ ಬರುವ ನೆರವು ನೆಮ್ಮದಿ ನೀಡಲಿದೆ. ಆಗಾಗ ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಕಂಡುಬಂದರೂ ಸುಧಾರಿಸಬಹುದು.

ವೃಶ್ಚಿಕ: ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭಿಸಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳಿಂದ ಸಂಭ್ರಮಿಸುವಂತಾದೀತು. ಆಪ್ತವಲಯದಲ್ಲಿ ಮಾನ್ಯತೆಯು ಲಭಿಸಲಿದೆ.

ಧನು: ಋಣ ಪರಿಹಾರಾರ್ಥ ಆರ್ಥಿಕ ಪ್ರಗತಿಪರ ಕಾರ್ಯಗಳ ಪ್ರಯತ್ನ ನಡೆಯಲಿದೆ. ಆತ್ಮೀಯರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಭೂ ವ್ಯವಹಾರ ಕೆಲವೊಂದು ಸರಕಾರಿ ಕೆಲಸಕಾರ್ಯಗಳು ನಡೆಯಲಿದೆ.

ಮಕರ: ಕೌಟುಂಬಿಕ ಪೀಡೆ, ಮನೋವ್ಯಾಕುಲತೆ, ಚಿಂತೆ, ಬಂಧುಮಿತ್ರರೊಂದಿಗೆ ಮಾತು, ಕಲಹ, ಭಿನ್ನಾಭಿಪ್ರಾಯ ಗಳಿಂದ ಅಹಿತಕರ ವಾತಾವರಣದಿಂದ ಕ್ಲೇಶ ತಂದೀತು. ಉದ್ಯೋಗ, ವ್ಯವಹಾರಲ್ಲಿಯೂ ಕಿರಿಕಿರಿ ಇರುವುದು.

ಕುಂಭ: ಹೊರಗಿನ ವ್ಯವಹಾರಗಳಲ್ಲಿ ಮುನ್ನಡೆ, ವಾಹನ ಸುಖ, ಕೆಲವೊಂದು ಕಾರ್ಯಗಳಲ್ಲಿ ಜಯಲಾಭಾದಿಗಳಿವೆ. ಆರ್ಥಿಕವಾಗಿ ಋಣಬಾಧೆ ಹಂತಹಂತವಾಗಿ ನಿವಾರಣೆ ಯಾಗುವುದು. ಉತ್ತಮ ಅಭಿವೃದ್ಧಿಗಾಗಿ ಕಾದು ನೋಡಿರಿ.

ಮೀನ: ನಿರುದ್ಯೋಗಿಗಳಿಗೆ ತಪ್ಪಿದ ಅವಕಾಶಗಳು ಪುನಃಹ ಲಭಿಸಲಿವೆ. ವೃತ್ತಿರಂಗದಲ್ಲಿ ಅಚ್ಚರಿಯ ಬೆಳವಣಿಗೆ  ಇರುತ್ತದೆ. ಆತ್ಮೀಯರ ಆಕಸ್ಮಿಕ ಮಿಲನದಿಂದ ಸಂತಸವಾದೀತು. ವಿಲಾಸ, ಜನಪ್ರಿಯತೆ ಇತ್ಯಾದಿಗಳಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next