ವಾಷಿಂಗ್ಟನ್: ಬರೋಬ್ಬರಿ 7 ವರ್ಷಗಳ ಬಾಹ್ಯಾಕಾಶ ಪಯಣದ ಬಳಿಕ ನಾಸಾದ ಕ್ಯಾಪ್ಸೂéಲ್‌ರವಿವಾರಕ್ಷುದ್ರಗ್ರಹದ ಅತಿದೊಡ್ಡ ಮಾದರಿಯನ್ನು ಹೊತ್ತು ಯಶಸ್ವಿಯಾಗಿ ಭೂಮಿಗೆ ಮರಳಿದೆ!
ಹೌದು, ಈವರೆಗೆ ಮನುಷ್ಯರ್ಯಾರೂ ಸಂಗ್ರಹಿಸದೇ ಇರುವಂಥ ಅತಿದೊಡ್ಡ ಸ್ಯಾಂಪಲ್ ಅನ್ನು ಈ ಕ್ಯಾಪ್ಸೂಲ್ ಹೊತ್ತುತಂದಿದ್ದು,ರವಿವಾರಅಮೆರಿಕದ ಉಟಾಹ್‌ನಲ್ಲಿನ ಮರಳುಗಾಡಿನಲ್ಲಿ ಇಳಿದಿದೆ. ಬಾಹ್ಯಾಕಾಶಕ್ಕೆ ತೆರಳಿದ್ದ ಒಸಿರಿಸ್-ರೆಕ್ಸ್ ನೌಕೆಯು ಭೂಮಿಗೆ ಇಳಿಯುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಈ ಪ್ರಕ್ರಿಯೆಯು ಜಗತ್ತಿನಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು.
ಮೊದಲಿಗೆ ಬಾಹ್ಯಾಕಾಶ ನೌಕೆಯು ಭೂಮಿಯಿಂದ 1 ಲಕ್ಷ ಕಿಲೋ ಮೀಟರ್ ದೂರದಿಂದ (63 ಸಾವಿರ ಮೈಲು) ಕ್ಷುದ್ರಗ್ರಹದ ಸ್ಯಾಂಪಲ್ ಅನ್ನು ಬಿಡುಗಡೆ ಮಾಡಿತು. ಇದಾದ 4 ಗಂಟೆಗಳ ನಂತರ ಈ ಕ್ಯಾಪ್ಸೂéಲ್ ಭೂಮಿಯತ್ತ ಆಗಮಿಸಿ, ಲ್ಯಾಂಡ್ ಆಗಿದೆ.
ಯಾವ ಕ್ಷುದ್ರಗ್ರಹ?: ಹೇರಳವಾಗಿ ಇಂಗಾಲವನ್ನು ಹೊಂದಿರುವಂಥ “ಬೆನ್ನು’ ಎಂಬ ಕ್ಷುದ್ರಗ್ರಹದ ಮಾದರಿಯನ್ನು ಕ್ಯಾಪ್ಸೂಲ್ ಹೊತ್ತುತಂದಿದೆ ಎಂದು ನಾಸಾ ವಿಜ್ಞಾನಿಗಳು ಊಹಿಸಿದ್ದಾರೆ. ಆದರೆ, ಸ್ಯಾಂಪಲ್ ಬಂದಿರುವ ಕಂಟೈನರ್ ಅನ್ನು ತೆರೆದ ಬಳಿಕವೇ ಒಳಗೇನಿದೆ ಎಂಬುದು ತಿಳಿದುಬರಲಿದೆ. ಬಳಿಕ, ಆ ಸ್ಯಾಂಪಲ್‌ಗಳ ಅಧ್ಯಯನ ಆರಂಭವಾಗಲಿದೆ.
ಈ ಹಿಂದೆ, ಇಂಥದ್ದೊಂದು ಪ್ರಯೋಗ ಮಾಡಿದ ಏಕೈಕ ದೇಶವೆಂದರೆ ಜಪಾನ್. ಅದು ಕೆಲವೊಂದು ಕ್ಷುದ್ರಗ್ರಹ ಯೋಜನೆಗಳನ್ನು ಹಮ್ಮಿಕೊಂಡು, ಒಂದು ಚಮಚದಷ್ಟು ಮಾದರಿಗಳನ್ನು ಭೂಮಿಗೆ ತರುವಲ್ಲಿ ಯಶಸ್ವಿಯಾಗಿತ್ತು.
250 ಗ್ರಾಂ ಧೂಳು ಸಂಗ್ರಹ
ಸುಮಾರು 500 ಮೀ. ವ್ಯಾಸವುಳ್ಳ ಬೆನ್ನು ಕ್ಷುದ್ರಗ್ರಹವು ಭಾರೀ ಪ್ರಮಾಣದಲ್ಲಿ ಇಂಗಾಲವನ್ನು ಹೊಂದಿದೆ. ಅದರ ಖನಿಜಗಳಲ್ಲಿ ನೀರಿನ ಕಣಗಳು ಇರಬಹುದು ಎನ್ನುವುದು ವಿಜ್ಞಾನಿಗಳ ಊಹೆ. 2016ರಲ್ಲಿ ನಾಸಾವು ಬೆನ್ನುವಿನತ್ತ ತನ್ನ ಕ್ಯಾಪ್ಸೂಲ್ ಅನ್ನು ಕಳುಹಿಸಿತ್ತು. 2020ರಲ್ಲಿ ಅದು ಕ್ಷುದ್ರಗ್ರಹವನ್ನು ತಲುಪಿತ್ತು. ಕ್ಷುದ್ರಗ್ರಹದ ಕಲ್ಲುಮಣ್ಣುಗಳಿರುವ ಮೇಲ್ಮೆ„ನಿಂದ 250 ಗ್ರಾಂ ಧೂಳನ್ನು ಸಂಗ್ರಹಿಸುವಲ್ಲಿ ಕ್ಯಾಪ್ಸೂéಲ್ ಯಶಸ್ವಿಯಾಗಿತ್ತು.
ಅನುಕೂಲವೇನು?
ನಮ್ಮ ಸೌರವ್ಯೂಹದ ರಚನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬಹುದು
ಭೂಮಿಯು ಮಾನವ ವಾಸಯೋಗ್ಯ ಆಗಿದ್ದು ಹೇಗೆ ಎಂಬ ಬಗ್ಗೆ ಗೊತ್ತಾಗಬಹುದು
ಭೂಮಿ ಗೆ ಅಪಾಯವನ್ನು ಉಂಟುಮಾಡುವಂಥ ಕ್ಷುದ್ರಗ್ರಹಗಳ ಪತ್ತೆಗೆ ನೆರವಾಗಬಹುದು