Advertisement

ಗುಡ್ಡೆಮನೆ ಅಷ್ಟಪವಿತ್ರ ನಾಗಮಂಡಲ: ಸಮಾಲೋಚನ  ಸಭೆ

03:08 PM Feb 23, 2017 | Team Udayavani |

ಬಂಟ್ವಾಳ : ಶಂಭೂರು ಗ್ರಾಮ ಗುಡ್ಡೆಮನೆ ಬಂಗೇರ ಕುಟುಂಬಸ್ಥರು ಮತ್ತು ಊರಿನ ಜನರ ಸಹಕಾರದಲ್ಲಿ ಎ. 19ರಂದು ನಡೆಸಲು ಉದ್ದೇಶಿಸಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪೂರ್ವಭಾವಿ ಸಮಾಲೋಚನ ಸಭೆಯು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರವಿವಾರ ನಡೆಯಿತು.

Advertisement

ಕಾರ್ಯಕ್ರಮದ ಯಶಸ್ಸಿನ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಯಿತು. ನಾಗಮಂಡಲ ನಡೆಸುವ ಶಾಸ್ತ್ರೀಯ ಕ್ರಮಗಳ ಕುರಿತು ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಮಂಗಳೂರಿನ ಮಹಾಬಲ ಪೂಜಾರಿ ಕಡಂಬೋಡಿ ಮಾತನಾಡಿ  ನಾಗಮಂಡಲೋತ್ಸವ ಮಾಡುವುದು ಪುಣ್ಯದ ಕೆಲಸ. ದೈವಾನುಗ್ರಹದಿಂದ ಮಾತ್ರ ಸಾಧನೆ ಆಗುವುದು ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಸಾಮಾಜಿಕ ಸೇವಾಕರ್ತ ಕೆ. ಸೇಸಪ್ಪ ಕೋಟ್ಯಾನ್‌, ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಎ. ಶಂಭೂರು, ನರಿಕೊಂಬು ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್‌, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಕೋಶಾಧಿಕಾರಿ ಕಮಲಾಕ್ಷ ಶಾಂತಿಲ, ಕುಟುಂಬದ ಹಿರಿಯರುಗಳಾದ ಸೇಸಪ್ಪ ಪೂಜಾರಿ, ಪೂವಪ್ಪ ಪೂಜಾರಿ ಆಚಾರಿಬೆಟ್ಟು, ಕುಟುಂಬ ಸಮಿತಿ ಅಧ್ಯಕ್ಷರಾದ ಮಾಧವ ಬಂಗೇರ ಗುಡ್ಡೆಮನೆ ಉಪಸ್ಥಿತರಿದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next