Advertisement

ವ್ಯಕ್ತಿ ಕೋಮಾದಲ್ಲಿ ಇದ್ದಾನೆ ಎಂದು 18 ತಿಂಗಳು ಮೃತದೇಹವನ್ನು ಮನೆಯಲ್ಲಿರಿಸಿದ್ದ ಕುಟುಂಬ

09:25 AM Sep 24, 2022 | Team Udayavani |

ಕಣ್ಣೂರು : ವ್ಯಕ್ತಿಯೊಬ್ಬ ಸತ್ತು ಹದಿನೆಂಟು ತಿಂಗಳು ಕಳೆದರೂ ಆತನ ಕುಟುಂಬ ಮಾತ್ರ ಆತ ಸಾವನ್ನಪ್ಪಲಿಲ್ಲ ಆತ ಕೋಮಾದಲ್ಲಿದ್ದಾನೆ ಎಂದು ಮೃತದೇಹವನ್ನು ಮನೆಯಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.

Advertisement

ಆದಾಯ ತೆರಿಗೆ ಇಲಾಖೆ ನೌಕರ ವಿಮಲೇಶ್ ದೀಕ್ಷಿತ್ ಅವರು 2021 ರ ಏಪ್ರಿಲ್ 22 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು ಅಲ್ಲದೆ ಆಸ್ಪತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಆದರೆ ಮೃತರ ಕುಟುಂಬ ಮಾತ್ರ ಇದನ್ನು ಒಪ್ಪಲು ತಯಾರಿರಲಿಲ್ಲ ಅಲ್ಲದೆ ಮೃತ ವ್ಯಕ್ತಿಯ ಪತ್ನಿ ತನ್ನ ಗಂಡ ಸಾವನ್ನಪ್ಪಲಿಲ್ಲ ಬದಲಾಗಿ ಕೋಮಾದಲ್ಲಿ ಇದ್ದಾರೆ ಎಂದು ಭಾವಿಸಿ ಮನೆಗೆ ಕರೆತಂದು ಕಳೆದ ಹದಿನೆಂಟು ತಿಂಗಳಿನಿಂದ ಉಪಚರಿಸುತ್ತಿದ್ದಾರೆ.

ದಿನಾ ಬೆಳಿಗ್ಗೆ ಪತಿಯ ಕೊಳೆತ ಶವದ ಮೇಲೆ ಗಂಗಾ ಜಲ ಸಿಂಪಡಿಸಿ ಬೇಗ ಗುಣಮುಖರಾಗಲಿ ಎಂದು ಆರೈಕೆ ಮಾಡುತ್ತಿದ್ದಾರೆ.

ವಿಮಲೇಶ್ ದೀಕ್ಷಿತ್ ಅವರು ಕಳೆದ ವರ್ಷ ಏಪ್ರಿಲ್‌ನಲ್ಲಿ ನಿಧನರಾದರು ಆದರೆ ಅವರ ಕುಟುಂಬ ಸದಸ್ಯರು ಮಾತ್ರ ಆತ ಇನ್ನೂ ಬದುಕಿದ್ದಾನೆ ಎಂದು ಹೇಳಿ ವ್ಯಕ್ತಿಯ ಅಂತ್ಯಕ್ರಿಯೆಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಅಲೋಕ್ ರಂಜನ್ ಹೇಳಿದ್ದಾರೆ.

ಅಧಿಕಾರಿಗಳ ತಂಡವೊಂದು ಮೃತ ವ್ಯಕ್ತಿಯ ಕೆಲವು ದಾಖಲೆಗಳ ಪರಿಶೀಲನೆಗಾಗಿ ವ್ಯಕ್ತಿಯ ಮನೆಗೆ ಬಂದಾಗ ಅಧಿಕಾರಿಗಳಿಗೆ ಶಾಕ್ ಆಗಿತ್ತು… ವ್ಯಕ್ತಿ ಸತ್ತು ೧೮ ತಿಂಗಳು ಕಳೆದರೂ ಮೃತದೇಹವನ್ನು ಇನ್ನು ಮನೆಯಲ್ಲಿ ಇರಿಸಿಕೊಂದ್ದಾರಲ್ಲ ಎಂದು ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

ಬಳಿಕ ಪೊಲೀಸರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆಗೆ ಆರೋಗ್ಯ ಅಧಿಕಾರಿಗಳ ತಂಡ ಮನೆಗೆ ಭೇಟಿ ನೀಡಿ ಸಾಕಷ್ಟು ಮನವೊಲಿಕೆಯ ನಂತರ, ಕುಟುಂಬ ಸದಸ್ಯರು ದೇಹವನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕೊಂಡೊಯ್ಯಲು ಆರೋಗ್ಯ ತಂಡಕ್ಕೆ ಅವಕಾಶ ಮಾಡಿಕೊಟ್ಟರು, ಬಳಿಕ ಮನೆ ಸದಸ್ಯರಿಗೆ ವ್ಯಕ್ತಿ ಸಾವನ್ನಪ್ಪಿರುವ ವಿಚಾರ ತಿಳಿಸಲಾಯಿತು.

ಇದನ್ನೂ ಓದಿ : ಯುವತಿಯ ಹತ್ಯೆ ಪ್ರಕರಣ : ಉತ್ತರಾಖಂಡ್ ಬಿಜೆಪಿ ನಾಯಕನ ಪುತ್ರ ಸೇರಿ ಮೂವರ ಬಂಧನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next