ಮುಂಬಯಿ: ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ (ಎಎಂಸಿ) ಇದರ 51ನೇ ವಾರ್ಷಿಕೋತ್ಸವ ಮತ್ತು ವೈದ್ಯರ ದಿನಾಚರಣೆ ಜು. 3ರಂದು ಸಂಜೆ ಬಾಂದ್ರಾದ ಬಾಲಗಂಧರ್ವ ರಂಗ ಮಂದಿರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಮಾರಂಭದಲ್ಲಿ 2022-23ನೇ ಸಾಲಿನ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಇದರ “ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿಯನ್ನು ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪದ್ಮಶ್ರೀ ಡಾ| ಹಿಮ್ಮತ್‌ರಾವ್ ಬಾವಸ್ಕರ್ ಅವರು ವೈದ್ಯಕೀಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ನಗರದ ಸಂಘಟಕ, ಸಮಾಜ ಸೇವಕ ಡಾ| ಸುರೇಶ್ ಎಸ್. ರಾವ್ ಕಟೀಲು ಅವರಿಗೆ ಪ್ರದಾನ ಮಾಡಿ ಶುಭ ಹಾರೈಸಿದರು.
ಗಲ್ಲಾಘರ್ ಸಂಸ್ಥೆ ಪ್ರಾಯೋಜಿಸಲ್ಪಟ್ಟ ಕಾರ್ಯ ಕ್ರಮದಲ್ಲಿ ಪದ್ಮಶ್ರೀ ಡಾ| ಹಿಮ್ಮತ್ ರಾವ್ ಬಾವಸ್ಕರ್ ಅವರನ್ನೂ ಸಾಧಕ ವೈದ್ಯಾಧಿಕಾರಿ ಎಂದು ಗೌರ ವಿಸಲಾಯಿತು. ವಿಜಯಲಕ್ಷ್ಮೀ ಸುರೇಶ್ ರಾವ್ ಹಾಗೂ ಪ್ರಮೋದಿನಿ ಹಿಮ್ಮತ್ ರಾವ್, ಎಎಂಸಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಸಂಸ್ಥೆಯ ಅಧ್ಯಕ್ಷೆ ಡಾ| ನಿಲೀಮ ವೈದ್ಯ ಭಾಮರೆ, ಕಾರ್ಯ ದರ್ಶಿ ಡಾ| ಹೇಮಂತ್ ದುಗಡ್, ಆಡಳಿತ ಟ್ರಸ್ಟಿ ಡಾ| ಗುರುದಾಸ್ ಕುಲಕರ್ಣಿ ಮತ್ತು ಎಎಂಸಿ ಇಂಡಿಯಾ ನಿರ್ದೇಶಕ ಡಾ| ಲಲಿತ್ ಕಫೂರ್ ಅವರು ಸಮ್ಮಾನಿಸಿ ಅಭಿನಂದಿಸಿದರು.
ಡಾ| ಸುಮನ್ ಬಿಜ್ಞಾನಿ ಮತ್ತು ಹರ್ಷಿತಾ ಪಂಚೋಲಿ ಗಣೇಶ ವಂದನೆಗೈದರು. ಡಾ| ಅಶೋಕ್ ಮೋದಿ ಸಂಪಾದಕತ್ವದ ಸಂಸ್ಥೆಯ ಗ್ರಾಸ್ ಪತ್ರಿಕೆಯನ್ನು ಡಾ| ಹಿಮ್ಮತ್ ರಾವ್ ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಕಾರ್ಯ ಕ್ರಮವಾಗಿ ಸಂಗೀತ ಲೋಕದ ಗಾನ ದಂತಕಥೆ ಗಾನಕೋಗಿಲೆ ಲತಾ ಮಂಗೇಶ್ಕರ್, ಬಪ್ಪಿ ಲಹರಿ ಹಾಗೂ ಕೃಷ್ಣಕುಮಾರ್ ಕುಂನಾತ್ ಸ್ಮರಣಾರ್ಥ ಖ್ಯಾತ ಗಾಯಕ ದಂಪತಿ ಸಮೀರ್ ದಾತೆ ಮತ್ತು ದೀಪಾಳಿ ದಾತೆ ಅವರಿಂದ ಸಂಗೀತ ಕಾರ್ಯಕ್ರಮ ನೇರವೇರಿತು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಡಾ| ರೀನಾ ವಾಣಿ ವಂದಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂಜೀವಿನಿ ಆಸ್ಪತ್ರೆ ಅಂಧೇರಿ ಪೂರ್ವ ಮುಂಬಯಿ ಇದರ ಸಂಸ್ಥಾಪಕ, ಮಂಗಳೂರು ಕಟೀಲು ಅಲ್ಲಿನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ, ಡಿಎಸ್‌ಕೆ ಮಣಿಪಾಲ್ ಹಾಸ್ಪಿಟಲ್ ನಿರ್ಮಾತೃ, ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಇವರ ಸಾಧನೆಗೆ ಪ್ರಾಪ್ತಿಯಾದ ಗೌರವ ಸ್ವೀಕಾರದ ಭವ್ಯ ಸಮಾರಂಭದಲ್ಲಿ ಕಾತ್ಯಾಯಿನಿ ಸಂಜೀವ ರಾವ್, ಶ್ರುತಿ ಎಸ್. ರಾವ್ ಹೆಬ್ಟಾರ್, ಸುಶಾಂತ್ ಕೆ. ಹೆಬ್ಟಾರ್, ಕೃಷ್ಣಮೂರ್ತಿ ಹೆಬ್ಟಾರ್, ನೀತಾ ಕೆ. ಹೆಬ್ಟಾರ್, ಜಗದೀಶ್ ಆಚಾರ್ಯ, ಅಶೋಕ್ ಮೇಲ್ಮಾನೆ, ಮೋಹನ್‌ರಾಜ್ ಭಟ್, ಬಿಎಸ್‌ಕೆಬಿ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ವಾಮನ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಕೋಶಾಧಿಕಾರಿ ಸಿಎ ಹರಿದಾಸ ಭಟ್, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್, ಇನ್ನಿತರ ಪದಾಧಿಕಾರಿಗಳು, ಸದಸ್ಯರು, ಬಿ. ನಾರಾಯಣ್, ಡಾ| ಅರುಣ್ ರಾವ್, ಆರ್. ಎಸ್. ವಿ. ಕಲ್ಲೂರಾಯ, ಸುಬ್ರಹ್ಮಣ್ಯ ರಾವ್ ಬಾಳ, ಗಿರೀಶ್ ರಾವ್ ಜಿಆರ್‌ಎಸ್ ಫುಡ್ ಮತ್ತಿತರ ಗಣ್ಯರು ಅಭಿನಂದಿಸಿದರು.
-ಚಿತ್ರ – ವರದಿ: ರೋನ್ಸ್ ಬಂಟ್ವಾಳ್