Advertisement

ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮ: ಆರೋಪ ಪಟ್ಟಿ ಸಲ್ಲಿಕೆ

09:23 PM Aug 08, 2022 | Team Udayavani |

ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರಅಪರಾಧ ವಿಭಾಗ(ಸಿಸಿಬಿ) ಪೊಲೀಸರು ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದ್ದಾರೆ.

Advertisement

ಸುಮಾರು ನೂರಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯಲ್ಲಿ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೊಳಗಾಗಿರುವ ಧಾರವಾಡ ವಿವಿ ಕುಲಸಚಿವ ಡಾ| ನಾಗರಾಜ್‌ ಮತ್ತು ಪಿಎಚ್‌ಡಿ ವಿದ್ಯಾರ್ಥಿನಿ ಸೌಮ್ಯಾ ವಿರುದ್ಧ ಮಾಹಿತಿ ಉಲ್ಲೇಖೀಸಲಾಗಿದೆ. ಆರೋಪಪಟ್ಟಿಯಲ್ಲಿ ಇವರಿಬ್ಬರ ಹೇಳಿಕೆಗಳನ್ನು ದಾಖಲಿಸಲಾಗಿದೆ.

ತಾನು ಉದ್ದೇಶಪೂರ್ವಕವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿಲ್ಲ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಯಾರಾಗಿದ್ದ ಪ್ರಶ್ನೆಪತ್ರಿಕೆಯ ಮಾದರಿಗಳು ಮನೆಯಲ್ಲಿದ್ದವು.  ಸೌಮ್ಯ ನನ್ನ ಗಮನಕ್ಕೆ ಬಾರದೆ ಅದರ ಫೋಟೋಗಳನ್ನು  ತೆಗೆದುಕೊಂಡಿದ್ದರು.  ಅಂತಿಮ ಪ್ರಶ್ನೆಪತ್ರಿಕೆಯ ಪೋಟೋ ಪ್ರತಿಯನ್ನು ತನ್ನ ಸಂಬಂಧಿ ಸೌಮ್ಯಾಗೆ ಕಳುಹಿಸಿದ್ದಳು.  ಇವುಗಳ ಫೋಟೋಗಳನ್ನು ಸೌಮ್ಯಾ ಸ್ನೇಹಿತೆಗೆ ಕಳುಹಿಸಿದ್ದಳು. ಆಕೆ ಅವಳ  ಗೆಳೆಯನಿಗೆ ಕಳುಹಿಸಿದ್ದಳು. ಆದರೆ ಆತ ಈ ಪ್ರಶ್ನೆ ಪತ್ರಿಕೆಯನ್ನು ನೋಡಿರಲಿಲ್ಲ. ಪರೀಕ್ಷೆ ಮುಗಿಸಿ ಬಂದಾಗ ವಾಟ್ಸ್‌ಆ್ಯಪ್‌ ಮೂಲಕ ಬಂದಿದ್ದ ಫೋಟೋಗಳನ್ನು ನೋಡಿ ಪರೀಕ್ಷೆ ಪ್ರಾಧಿಕಾರಕ್ಕೆ ದೂರು ನೀಡಿದ್ದ ಎಂದು ನಾಗರಾಜ್‌ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next