Advertisement

ಸಹಾಯಕ ಎಂಜಿನಿಯರ್‌ ಪರೀಕ್ಷೆ ಅಕ್ರಮ:  ಆರ್‌.ಡಿ.ಪಾಟೀಲ್‌ ಬೆಂಗಳೂರು ಪೊಲೀಸರ ವಶಕ್ಕೆ

10:30 PM May 11, 2022 | Team Udayavani |

ಬೆಂಗಳೂರು: ಕಳೆದ ವರ್ಷ ನಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಪರೀಕ್ಷೆಯಲ್ಲಿ ಅಕ್ರಮ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ, ಪ್ರಸ್ತುತ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧಿಸಲ್ಪಟ್ಟಿರುವ ಆರ್‌.ಡಿ.ಪಾಟೀಲ್‌ನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಹತ್ತು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

2021ರ ಡಿ. 14ರಂದು ನಡೆದ ಪರೀಕ್ಷೆಯಲ್ಲಿ ವೀರಣ್ಣ ಗೌಡ  ದೇವೇಂದ್ರಪ್ಪ ಚಿಕ್ಕಗೌಡ ಎಂಬಾತ ಬ್ಲೂಟೂತ್‌ ಮೂಲಕ ಉತ್ತರ ಬರೆಯುತ್ತಿದ್ದ ಬಗ್ಗೆ ಕೇಂದ್ರದ ಮುಖ್ಯಸ್ಥರು ದೂರು ದಾಖಲಿಸಿದ್ದರು. ಈ ಸಂಬಂಧ ವೀರಣ್ಣ ಗೌಡನನ್ನು ಬಂಧಿಸಲಾಗಿತ್ತು. ಈತ ನೀಡಿದ ಮಾಹಿತಿಯಂತೆ ಮತ್ತಿಬ್ಬರು ಪರೀûಾರ್ಥಿಗಳು ಹಾಗೂ   ಇವರಿಗೆ ಬ್ಲೂಟೂತ್‌ ಮೂಲಕ ಉತ್ತರ ನೀಡಿದ್ದ ಆರೋಪದಲ್ಲಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಮೇಳಕುಂದಿ ಸೇರಿ 16 ಮಂದಿಯನ್ನು ಬಂಧಿಸಲಾಗಿತ್ತು.

ಪ್ರಶ್ನೆಪತ್ರಿಕೆ ಸಿಕ್ಕಿದ ಕೂಡಲೇ ಆಪಾದಿತ ಪರೀûಾರ್ಥಿಗಳು ಶೌಚಾಲಯಕ್ಕೆ  ಕೊಂಡೊ ಯ್ದು ಫೋಟೋ ತೆಗೆದು ಪಾಟೀಲ್‌ ಹಾಗೂ ಇತರರಿಗೆ ಕಳಿಸಿದ್ದರು. ಅವರು ಬ್ಲೂಟೂತ್‌ ಮೂಲಕ ಉತ್ತರ ನೀಡಿದ್ದರು ಎಂದು ಆರೋಪಿಸಲಾಗಿತ್ತು.

ಒಪ್ಪಿಕೊಳ್ಳದ ಅಭ್ಯರ್ಥಿ
ಮಂಜುನಾಥ್‌ ಮೇಳಕುಂದಿ ವಿಚಾರಣೆ ವೇಳೆ ಆರ್‌.ಡಿ. ಪಾಟೀಲ್‌ ಎಂಬಾತ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಿದ್ದ. ಆದರೆ  ವೀರಣ್ಣಗೌಡನು ಪಾಟೀಲ್‌ ವಿರುದ್ಧದ ಆರೋಪವನ್ನು ನಿರಾಕರಿಸಿದ್ದ. ಜತೆಗೆ ಪಾಟೀಲ್‌ ವಿರುದ್ಧ ಸಾûಾ$Âಧಾರವೂ ಇರಲಿಲ್ಲ. ಈ ನಡುವೆ ಆತ ತಲೆಮರೆಸಿಕೊಂಡಿದ್ದ. ಬಳಿಕವೂ ಆತನ ವಿರುದ್ಧ  ಬಲವಾದ ಸಾûಾ$Âಧಾರ ಸಿಗದ ಕಾರಣ ಬಂಧಿಸಿರಲಿಲ್ಲ. ಈಗ ಆತನು ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಆರೋಪದ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು  ಮೂಲಗಳು ತಿಳಿಸಿವೆ.

ಪಿಎಸ್‌ಐ ಅಕ್ರಮ: ಮಾಜಿ ಸಚಿವರ ಆಪ್ತನ ಸೆರೆ
ನಾಗಮಂಗಲ:  ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ  ನಾಗಮಂಗಲ ಯುವ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಾಗಿದ್ದ ಶರತ್‌ ರಾಮಣ್ಣ  ಅವರನ್ನು ಬಂಧಿಸಲಾಗಿದೆ. ಶ್ರವಣಬೆಳಗೂಳ ಮೂಲದ ವ್ಯಕ್ತಿಗೆ ಕೆಲಸ ಕೊಡಿಸುವ ಭರವಸೆ ನೀಡಿದ ಆರೋಪ ಇವರ ಮೇಲಿದೆ. ಇವರು   ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಆಪ್ತನಾಗಿದ್ದ  ಎನ್ನಲಾಗಿದೆ.  ಈತನನ್ನು  9 ದಿನ ಸಿಐಡಿ ವಶಕ್ಕೆ ನೀಡಲಾಗಿದೆ.

Advertisement

ಮತ್ತೊಬ್ಬಆರ್‌ಎಸ್‌ಐ ಬಂಧನ
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ನೇಮಕಾತಿ ವಿಭಾಗದ ಮತ್ತೊಬ್ಬ ಅಧಿಕಾರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಸ್ಟ್ರಾಂಗ್‌ ಕೊಠಡಿಯಲ್ಲಿದ್ದ ಒಎಂಆರ್‌ ಪ್ರತಿ ತಿದ್ದುಪಡಿಗೆ ಈ ಅಧಿಕಾರಿಯೇ ಮೂಲ ಕಾರಣ ಎಂದು ಹೇಳಲಾಗಿದೆ.  ನೇಮಕಾತಿ ವಿಭಾಗದ ಸ್ಟ್ರಾಂಗ್‌ ಕೊಠಡಿಯ ಒಎಂಆರ್‌ ಪ್ರತಿ ತುಂಬಿದ್ದ ಬಾಕ್ಸ್‌ಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ,  ಉತ್ತರ ಕರ್ನಾಟಕ ಮೂಲದ ಲೋಕೇಶಪ್ಪ ಬಂಧಿತ ಆರೋಪಿಯಾಗಿದ್ದಾರೆ.

ಮೇಳಕುಂದಿ ಮೊಬೈಲ್‌ಗಾಗಿ ಹುಡುಕಾಟ
ಕಲಬುರಗಿ: ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿದ್ದ ಆರೋಪದಡಿ ಶರಣಾಗಿರುವ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿಯ ಮೊಬೈಲ್‌ಗಾಗಿ ಸಿಐಡಿ ಅಧಿಕಾರಿಗಳು ಮೂರು ದಿನಗಳಿಂದ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯು ಮೊಬೈಲ್‌ ಅನ್ನು ಅಮರ್ಜಾ ನದಿಯ ಡ್ಯಾಂನಲ್ಲಿ  ಬೀಸಾಡಿದ್ದಾನೆ ಎಂದು ಹೇಳಲಾಗಿದ್ದು, ಡಿವೈಎಸ್ಪಿ ಪ್ರಕಾಶ್‌ ಹಾಗೂ ಇತರ ಸಿಬಂದಿ  ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next