Advertisement

ಕಾಡು ಬಸವೇಶ್ವರಸ್ವಾಮಿ ಸನ್ನಿಧಿ ಅಭಿವೃದ್ಧಿಗೆ ನೆರವು

12:23 PM Aug 14, 2017 | Team Udayavani |

ತಿ.ನರಸೀಪುರ: ಭಕ್ತ ಸಮೂಹವನ್ನು ವೃದ್ಧಿಸಿಕೊಂಡು ಯಾತ್ರಾ ಸ್ಥಳವಾಗಿ ಪರಿವರ್ತನೆಗೊಳ್ಳುತ್ತಿರುವ ಶ್ರೀ ಕಾಡು ಬಸವೇಶ್ವರಸ್ವಾಮಿ ಸನ್ನಿಧಿಯನ್ನು ಪ್ರಮುಖ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ನೆರವನ್ನು ಸರ್ಕಾರದಿಂದ ನೀಡಲಾಗುವುದು ಎಂದು ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆಗಳ ಉಸ್ತುವಾರಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಹೇಳಿದರು.

Advertisement

ಪಟ್ಟಣದ ಹೊರ ವಲಯದಲ್ಲಿರುವ ಆಲಗೂಡು ದಾಖಲೆಯ ಶ್ರೀ ಕಾಡು ಬಸವೇಶ್ವರ ದೇವಾಲಯ ಆವರಣದಲ್ಲಿ ಕಬಿನಿ ನೀರಾವರಿ ನಿಗಮದ ಅನುದಾನ 50 ಲಕ್ಷ ರೂಗಳ ವೆಚ್ಚದಲ್ಲಿ ಸಿಮೆಂಟ್‌ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ಕಾನನ ವಾಸಿಯಾಗಿ ಹಸಿರಿನ ನಡುವಿನಲ್ಲಿ ನೆಲೆಸಿ ಜನರ ಕಷ್ಟವನ್ನು ಪರಿಹರಿಸುತ್ತಾ ತನ್ನತ್ತ ಭಕ್ತರನ್ನು ಸೆಳೆಯುತ್ತಿರುವ ಶ್ರೀ ಕಾಡು ಬಸವೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ದೇವಾಲಯ ಸುತ್ತಲೂ ಸಿಮೆಂಟ್‌ ನೆಲಹಾಸು ನಿರ್ಮಾಣಕ್ಕಾಗಿ ಸರ್ಕಾರದಿಂದ 50 ಲಕ್ಷ ರೂಗಳ ಅನುದಾನ ನೀಡಲಾಗಿದೆ. ಜೀರ್ಣೋದ್ಧಾರ ಸಮಿತಿ ವತಿಯಿಂದ 2.50 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ದಾಸೋಹ ಭವನಕ್ಕೂ ಆರಂಭಿಕವಾಗಿ 50 ಲಕ್ಷ ರೂಗಳ ಅನುದಾನವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಭಕ್ತರು ಕೂಡ ಪ್ರತಿ ಅಮವಾಸೆಯಂದು ನಡೆಯುವ ವಿಶೇಷ ಪೂಜೆಯ ಸಂದರ್ಭದಲ್ಲೂ ಕೈಲಾದಷ್ಟು ದೇಣಿಗೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಧಾರ್ಮಿಕ ಕ್ಷೇತ್ರವೊಂದರ ಅಭಿವೃದ್ಧಿಗೆ ನಾನೂ ಕೂಡ ನೆರವು ನೀಡಲು ಬದ್ಧನಾಗಿದ್ದೇನೆ ಎಂದರು.

ಪುರಸಭೆಯಿಂದ ಶೌಚಾಲಯ: ಶ್ರೀ ಕಾಡು ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿದ್ದು, ಬರುವ ಭಕ್ತರಿಗೆ ಶೌಚಾಲಯ ಕಲ್ಪಿಸಿಕೊಡಲು ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಪುರಸಭೆಯಿಂದಲೂ 4.50 ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲಿಯೇ ಪುರಸಭೆಯಿಂದ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಗಗೇìಶ್ವರಿ ಜಿಪಂ ಸದಸ್ಯೆ ಜಯಮ್ಮ ಶಿವಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್‌.ಸಿ.ಬಸವರಾಜು, ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ಜಿಪಂ ಮಾಜಿ ಸದಸ್ಯ ಕೆ.ಮಹದೇವ, ಶ್ರೀ ಕಾಡುಬಸವೇಶ್ವರ ಜೀಣೋದ್ಧಾರ ಸಮಿತಿ ಅಧ್ಯಕ್ಷ ಶಿವಲಿಂಗೇಗೌಡ, ಉಪಾಧ್ಯಕ್ಷ ಪುಟ್ಟಸುಬ್ಬಯ್ಯ, ಕಾರ್ಯದರ್ಶಿ ಘಟಕ ಮಹದೇವ, ಖಜಾಂಚಿ ವೃಷಬೇಂದ್ರಪ್ಪ, ಅರ್ಚಕ ಸಿದ್ದರಾಜು, ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ,

Advertisement

-ಮಾಜಿ ಅಧ್ಯಕ್ಷ ಮನ್ನೇಹುಂಡಿ ಮಹೇಶ, ವರುಣಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಮುದ್ದೇಗೌಡ, ತಾ. ಕುರುಬರ ಸಂಘದ ಅಧ್ಯಕ್ಷ ಟಿ.ಎಸ್‌.ಪ್ರಶಾಂತ್‌ ಬಾಬು, ಬಿಎಸ್‌ಎನ್‌ಎಲ್‌ ಸಲಹಾ ಸಮಿತಿ ಸದಸ್ಯ ಎನ್‌.ಸೋಮು, ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ಸಂಚಾಲಕ ಸಂತೃಪ್ತಿಕುಮಾರ್‌, ಮುಖಂಡರಾದ ಗುರುಪಾದಸ್ವಾಮಿ, ಲಾರಿ ಸ್ವಾಮಿ, ಈಶ್ವರಗೌಡ ನಹಳ್ಳಿ ರೇವಣ್ಣ, ಎಂ.ವೆಂಕಟೇಶ್‌, ಅರುಣ್‌ಗೌಡ, ರಜತ್‌ಗೌಡ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next