Advertisement

ಧ್ವಜಾರೋಹಣಕ್ಕೆ ಸಚಿವರ ನಿಯೋಜನೆ

11:09 PM Jan 18, 2020 | Lakshmi GovindaRaj |

ಬೆಂಗಳೂರು: ಗಣರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಹನ್ನೆರಡು ಜಿಲ್ಲೆಗಳಲ್ಲಿ ಜಿಲ್ಲಾಧಿ ಕಾರಿ ಗಳೇ ಧ್ವಜಾರೋಹಣ ಮಾಡಲಿದ್ದಾರೆ.

Advertisement

ಬಾಗಲಕೋಟೆ- ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಮನಗರ, ಡಿಸಿಎಂ ಡಾ.ಅಶ್ವತ್ಥನಾರಾಯಣ, ಬಳ್ಳಾರಿ- ಡಿಸಿಎಂ ಲಕ್ಷ್ಮಣ ಸವದಿ, ಶಿವಮೊಗ್ಗ- ಕೆ.ಎಸ್‌. ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ- ಆರ್‌.ಅಶೋಕ್‌, ಬೆಳಗಾವಿ- ಜಗದೀಶ ಶೆಟ್ಟರ್‌, ರಾಯ ಚೂರು- ಬಿ.ಶ್ರೀರಾಮುಲು, ಚಾಮರಾಜನಗರ- ಎಸ್‌.ಸುರೇಶ್‌ಕುಮಾರ್‌, ಮೈಸೂರು- ವಿ.ಸೋಮಣ್ಣ, ಚಿಕ್ಕಮಗಳೂರು- ಸಿ.ಟಿ.ರವಿ, ಉಡುಪಿ- ಬಸವರಾಜ ಬೊಮ್ಮಾಯಿ,

ಮಂಗಳೂರು- ಕೋಟ ಶ್ರೀನಿವಾಸ ಪೂಜಾರಿ, ತುಮಕೂರು-ಜೆ.ಸಿ.ಮಾಧುಸ್ವಾಮಿ, ಗದಗ- ಸಿ.ಸಿ.ಪಾಟೀಲ್‌, ಕೋಲಾರ- ಎಚ್‌.ನಾಗೇಶ್‌, ಉತ್ತರ ಕನ್ನಡ- ಶಶಿಕಲಾ ಜೊಲ್ಲೆ ಅವರನ್ನು ನಿಯೋಜಿಸಲಾಗಿದೆ. ಕಲಬುರಗಿ, ಚಿಕ್ಕಬಳ್ಳಾಪುರ, ಕೊಪ್ಪಳ. ದಾವಣಗೆರೆ, ಮಂಡ್ಯ , ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಕೊಡಗು, ಹಾವೇರಿ, ಹಾಸನ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next