ಮಹಾರಾಷ್ಟ್ರ: ಪನ್ವೇಲ್‌ನ ಕರ್ನಾಲಾ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ ಪಾಟೀಲ್ ಮತ್ತು ಅವರ ಸಂಬಂಧಿಕರಿಗೆ ಸೇರಿದ ಸುಮಾರು 152 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ವಿವೇಕಾನಂದ ಪಾಟೀಲ್ ‘ಶೆಟ್ಕರಿ ಕಾಮಗಾರಿ ಪಕ್ಷ’ ದ ನಾಯಕರಾಗಿದ್ದಾರೆ. ಈ ಹಿಂದೆ ಪನ್ವೇಲ್‌ನ ಕರ್ನಾಳ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಪಾಟೀಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿತ್ತು.
2019 ರಲ್ಲಿ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆಯನ್ನು ಕೈಗೆತ್ತಿಕೊಂದು ದಾಳಿ ನಡೆಸಿದೆ.
2019-20ರಲ್ಲಿ ರಿಸರ್ವ್ ಬ್ಯಾಂಕ್‌ನ ನಿದರ್ಶನದಲ್ಲಿ ಆಡಿಟ್ ಮಾಡಿದ ಬಳಿಕ ವಂಚನೆ ನಡೆದಿರುವುದು ಬೆಳಕಿಗೆ ಬಂದಿತು, ಪಾಟೀಲ್ ಅವರು 67 ಖಾತೆಗಳ ಮೂಲಕ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಈ 67 ಖಾತೆಗಳ ಮೂಲಕ ಬರೋಬ್ಬರಿ 560 ಕೋಟಿ ವಂಚನೆ ಮಾಡಿರೋದು ತಿಳಿದುಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಪಾಟೀಲ್, ಅವರ ಕುಟುಂಬ ಸದಸ್ಯರು ಮತ್ತು ಅವರ ಸಂಬಂಧಿತರಿಂದ 234 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಇದರೊಂದಿಗೆ ಇದುವರೆಗೆ ಒಟ್ಟು 386 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದಂತಾಗಿದೆ.
ಇದನ್ನೂ ಓದಿ: AAP: ಸಚಿವ ಶಿವರಾಜ್ ತಂಗಡಗಿ ವಿರುದ್ಧ ಗರಂ ಆದ ಆಪ್ ರಾಜ್ಯಾಧ್ಯಕ್ಷ