Advertisement

ಕೊಳವೆ ಬಾವಿ ಅಕ್ರಮ ತನಿಖೆಗೆ: ಸಿಎಂ ಬಸವರಾಜ ಬೊಮ್ಮಾಯಿ

08:17 PM Sep 14, 2022 | Team Udayavani |

ವಿಧಾನಸಭೆ: ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿರುವ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿದಾಗ ಪ್ರಿಯಾಂಕ್‌ ಖರ್ಗೆ, 431 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಲೂಟಿ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಬೋರ್‌ವೆಲ್‌ ಕೊರೆಸಿದರೆ 84 ಸಾವಿರ ರೂ., ನಿಗಮದಿಂದ ಬೋರ್‌ವೆಲ್‌ ಕೊರೆಸಿದರೆ 1.24 ಲಕ್ಷ ರೂ. ಪಾವತಿಸಲಾಗಿದೆ. ನಕಲಿ ಕಾಮಗಾರಿ ಪ್ರಮಾಣಪತ್ರ ಕೊಟ್ಟವರಿಗೆ ಟೆಂಡರ್‌ ನೀಡಲಾಗಿದೆ. ಇದು ಸರ್ಕಾರದ ಆಂತರಿಕ ಸಮಿತಿಯ ತನಿಖೆಯಿಂದಲೇ ಗೊತ್ತಾಗಿದೆ ಎಂದು ದೂರಿದರು.

ಇದಕ್ಕೆ ಹಲವು ಕಾಂಗ್ರೆಸ್‌ ಸದಸ್ಯರು ದನಿಗೂಡಿಸಿದರು. ಜೆಡಿಎಸ್‌ ಸದಸ್ಯರೂ ಇದರಲ್ಲಿ ಸಾಕಷ್ಟು ಲೋಪಗಳಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವರು ಸೂಕ್ತ ಉತ್ತರ ಕೊಡಲಿಲ್ಲ ಎಂದು ಸದನದ ಬಾವಿಗೆ ಇಳಿದು ಧರಣಿಗೆ ಮುಂದಾದರು.

ಆಗ ಮುಖ್ಯಮಂತ್ರಿಯವರು ಈ ಯೋಜನೆಯ ಲೋಪ ಸರಿಪಡಿಸಿ ಒಂದು ಹಂತಕ್ಕೆ ತರಬೇಕಾಗಿದೆ. ಸದ್ಯದಲ್ಲೇ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಇದಕ್ಕೂ ಸದಸ್ಯರು ಒಪ್ಪದಿದ್ದಾಗ, ಅಕ್ರಮ ಆಗಿದ್ದರೆ ತನಿಖೆ ನಡೆಸಲಾಗುವುದು. ನಕಲಿ ಕಾಮಗಾರಿ ಪ್ರಮಾಣ ಪತ್ರ ಕೊಟ್ಟಿರುವುದು ಸೇರಿ ತನಿಖೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಇದಕ್ಕೂ ಮುನ್ನ ಮಾತನಾಡಿದ ಯತೀಂದ್ರ, ರಾಜ್ಯಾದ್ಯಂತ ಒಬ್ಬರೇ ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾಗಿದೆ. ಬೋರ್‌ವೆಲ್‌ ಕೊರೆದು ವಿದ್ಯುತ್‌ ಸಂಪರ್ಕ ಕಲ್ಪಿಸಲು ವರ್ಷಗಳಾದರೂ ಆಗುತ್ತಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next