Advertisement
ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿದಾಗ ಪ್ರಿಯಾಂಕ್ ಖರ್ಗೆ, 431 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಲೂಟಿ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಬೋರ್‌ವೆಲ್ ಕೊರೆಸಿದರೆ 84 ಸಾವಿರ ರೂ., ನಿಗಮದಿಂದ ಬೋರ್‌ವೆಲ್ ಕೊರೆಸಿದರೆ 1.24 ಲಕ್ಷ ರೂ. ಪಾವತಿಸಲಾಗಿದೆ. ನಕಲಿ ಕಾಮಗಾರಿ ಪ್ರಮಾಣಪತ್ರ ಕೊಟ್ಟವರಿಗೆ ಟೆಂಡರ್ ನೀಡಲಾಗಿದೆ. ಇದು ಸರ್ಕಾರದ ಆಂತರಿಕ ಸಮಿತಿಯ ತನಿಖೆಯಿಂದಲೇ ಗೊತ್ತಾಗಿದೆ ಎಂದು ದೂರಿದರು.
Related Articles
Advertisement
ಇದಕ್ಕೂ ಮುನ್ನ ಮಾತನಾಡಿದ ಯತೀಂದ್ರ, ರಾಜ್ಯಾದ್ಯಂತ ಒಬ್ಬರೇ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಬೋರ್‌ವೆಲ್ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸಲು ವರ್ಷಗಳಾದರೂ ಆಗುತ್ತಿಲ್ಲ ಎಂದು ದೂರಿದರು.