Advertisement
ಈಗಾಗಲೇ ಉತ್ತರಪ್ರದೇಶ, ದಿಲ್ಲಿ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿ ನೆರೆಯ ರಾಜ್ಯಗಳಾದ ಮಹಾ ರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳದ ಸುಮಾರು 136 ಐಆರ್‌ಎಸ್ ಅಧಿಕಾರಿಗಳನ್ನು ಕರ್ನಾಟಕದ ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಪ್ರತಿ 2 ಕ್ಷೇತ್ರಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಇವರಿಗೆ ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅಬಕಾರಿ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಸಾಥ್ ನೀಡುತ್ತಿದೆ.
ಆದಾಯ ತೆರಿಗೆ ಅಧಿಕಾರಿಗಳನ್ನೂ ನಿಗಾ ಇಡಲು ನಿಯೋಜಿಸಲಾಗಿದೆ. ಹಣ, ಹೆಂಡದ ಚಲಾವಣೆ, ಆಮಿಷಗಳ ಮೇಲೆ ನಿಗಾಯಿಡಲು ಒಂದು ವಿಧಾನಸಭಾ ಕ್ಷೇತ್ರಕ್ಕೆ 6ರಂತೆ ಒಟ್ಟು 1,344 ಫ್ಲಯಿಂಗ್ ಸ್ಕ್ವಾಡ್, 1,255 ಸ್ಟಾಟಿಕ್ ಸರ್ವ ಲೆನ್ಸ್ ತಂಡಗಳು ಕಾರ್ಯಾ ಚರಣೆಯಲ್ಲಿವೆ. ಫ್ಲಯಿಂಗ್ ಸ್ಕ್ವಾಡ್ ವಾಹನಗಳ ಸಂಚಾರ ಮೇಲೆ ನಿಗಾ ಇಡಲು ಅವುಗ ಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಬ್ಯಾಂಕುಗಳ ಅನುಮಾನಾ ಸ್ಪದ ವಹಿವಾಟುಗಳ ಮೇಲೂ ಆಯೋಗ ಕಣ್ಣಿಟ್ಟಿದೆ. ಏರ್‌ಇಂಟಲಿಜೆನ್ಸ್ ಯುನಿಟ್
ಆದಾಯ ತೆರಿಗೆ ಇಲಾಖೆಯಿಂದ ಬೆಂಗಳೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ ವಿಮಾನ ನಿಲ್ದಾಣಗಳಲ್ಲಿ “ಏರ್ ಇಂಟಲಿಜೆನ್ಸ್ ಯುನಿಟ್’ಗಳನ್ನು ಸ್ಥಾಪಿಸಲಾಗಿದೆ. ಹಣ ವರ್ಗಾವಣೆ ಬಗ್ಗೆ ನಿಗಾ ಇಡಲು ಪ್ರಮುಖ ರೈಲು ನಿಲ್ದಾಣಗಳಲ್ಲಿ “ರೈಲ್ವೆ ಭದ್ರತಾ ಪಡೆ’ಯ ತಂಡಗಳು ಕಾರ್ಯಾಚರಿಸುತ್ತಿವೆ.
Related Articles
ಮಾ.27ರಿಂದ ಇಲ್ಲಿಯ ತನಕ ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಾರ್ಯಾಚರಣೆ ನಡೆಸಿ ಒಟ್ಟು 41 ಕೋಟಿ ರೂ. ನಗದು ವಶಪಡಿಸಿಕೊಂಡಿವೆ. 20 ಕೋಟಿ ರೂ. ಮೌಲ್ಯದ ಮದ್ಯ ಮತ್ತು 20 ಕೋಟಿ ರೂ. ಮೊತ್ತದ ಗೃಹಬಳಕೆ ವಸ್ತುಗಳು, 3.71 ಕೋಟಿ ರೂ. ಮೊತ್ತದ 14 ಕೆ.ಜಿ. ಚಿನ್ನ-ಬೆಳ್ಳಿ, 66 ಕೆ.ಜಿ. ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ರಾಜ್ಯದಲ್ಲಿ 2,400ಕ್ಕೂ ಹೆಚ್ಚು ಫ್ಲಾಯಿಂಗ್ ಸ್ಕ್ವಾಡ್ಸ್ ಮತ್ತು ಸ್ಟಾಟಿಕ್ ಸರ್ವಲೆನ್ಸ್ ಟೀಂಗಳು ನೀತಿ ಸಂಹಿತೆ ಜಾರಿಯ ಜತೆಗೆ ಚುನಾವಣಾ ವೆಚ್ಚದ ಮೇಲೂ ನಿಗಾ ಇಡುತ್ತಿವೆ. ಇದಲ್ಲದೆ, 1,095 ವಿಡಿಯೋ ಸರ್ವಲೆನ್ಸ್, ವಿಡಿಯೋ ವೀವಿಂಗ್, ಅಕೌಂಟಿಂಗ್ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲಿವೆ.– ಡಾ. ಕೆ.ಜಿ. ಜಗದೀಶ್, ಅಪರ ಮುಖ್ಯ ಚುನಾವಣಾಧಿಕಾರಿ (ಚುನಾವಣ ವೆಚ್ಚ) – ರಫೀಕ್ ಅಹ್ಮದ್