Advertisement

ಮೇಘಾಲಯ-ನಾಗಾಲ್ಯಾಂಡ್‌ಗೆ ಇಂದು ವಿಧಾನಸಭೆ ಚುನಾವಣೆ

12:47 AM Feb 27, 2023 | Team Udayavani |

ಕೊಹಿಮಾ/ಶಿಲ್ಲಾಂಗ್‌: ನಾಗಾಲ್ಯಾಂಡ್‌ ಹಾಗೂ ಮೇಘಾಲಯ ರಾಜ್ಯಗಳಲ್ಲಿ ಸೋಮವಾರ ವಿಧಾನಸಭೆ ಚುನಾವಣೆ ನಡೆಯಲಿದೆ.

Advertisement

ಎರಡೂ ರಾಜ್ಯಗಳಲ್ಲೂ ತಲಾ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನಾಗಾಲ್ಯಾಂಡ್‌ನ‌ಲ್ಲಿ ಅಭ್ಯರ್ಥಿಗೆ ಅವಿರೋಧ ಹಾಗೂ ಮೇಘಾಲಯದಲ್ಲಿ ಯುಡಿಪಿ ಅಭ್ಯರ್ಥಿ ನಿಧನದ ಹಿನ್ನೆಲೆ ಒಂದು ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿಲ್ಲ.

ಮೇಘಾಲಯದಲ್ಲಿ 21.64 ಲಕ್ಷ ಮತದಾರರಿದ್ದರೆ, ನಾಗಾಲ್ಯಾಂಡ್‌ನ‌ಲ್ಲಿ 13 ಲಕ್ಷ ನಾಗರಿಕರು ಮತ ಚಲಾಯಿಸಲಿದ್ದಾರೆ. ಮಾರ್ಚ್‌ 2 ರಂದು ಎರಡೂ ರಾಜ್ಯಗಳ ಚುನಾವಣೆ ಫ‌ಲಿತಾಂಶ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next