Advertisement
ರಾಜ್ಯದಲ್ಲಿ ಎಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ 2 ಹಂತಗಳಲ್ಲಿ ಮತದಾನ ನಡೆಯವ ಸಾಧ್ಯತೆಯಿದೆ.
ಸಾಕಷ್ಟು ಅನುಮಾನ, ಗೊಂದಲಕ್ಕೆ ಕಾರಣವಾಗಿರುವ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬದಲಿಗೆ ಹಿಂದಿನ ಪೇಪರ್ ಬ್ಯಾಲೆಟ್‌ಗಳನ್ನೇ ಬಳಸುವಂತೆ ಬಿಜೆಪಿ ಹೊರತುಪಡಿಸಿ ಬಹುತೇಕ ರಾಜಕೀಯ ಪಕ್ಷಗಳು ಆಯೋಗಕ್ಕೆ ಮನವಿ ಮಾಡಿವೆ. ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ಎಸ್ಪಿ ಮತ್ತು ಮತ್ತಿತರ ಪಕ್ಷಗಳು ಮಾಡಿದ ಮನವಿಯನ್ನು ಅಧಿಕಾರಿಗಳು ತಳ್ಳಿ ಹಾಕಿದರು ಎಂದು ಹೇಳಲಾಗಿದೆ. ಇವಿಎಂಗಳ ಬಗ್ಗೆ ಸಾಕಷ್ಟು ಸಂಶಯಗಳಿವೆ. ಇದನ್ನು ದುರ್ಬಳಕೆ ಮಾಡಿ ಮತ್ತು ದೋಷ ಕಂಡುಬಂದ ನಿದರ್ಶನಗಳು ಅನೇಕ ರಾಜ್ಯಗಳಲ್ಲಿ ಸಾಬೀತಾಗಿವೆ. ಜತೆಗೆ ಶೇ.100ರಷ್ಟು ಇವಿಎಂ ಬಳಸುತ್ತಿದ್ದ ನೆದರ್‌ಲ್ಯಾಂಡ್ ದೇಶದಲ್ಲಿ ಈಗ ಅದನ್ನು ನಿಷೇಧಿಸಿ ಪೇಪರ್ ಬ್ಯಾಲೆಟ್‌ಗಳನ್ನು ಬಳಸಲಾಗುತ್ತಿದೆ. ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಅಮೆರಿಕಾದ ವಿವಿಯೊಂದು ಪತ್ತೆ ಹಚ್ಚಿದೆ. ಇಷ್ಟೆಲ್ಲ ಇರುವಾಗ ಚುನಾವಣಾ ಆಯೋಗಕ್ಕೆ ಹಠ ಯಾಕೆ. ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ತಂತ್ರಜ್ಞರ ಸಮಕ್ಷಮದಲ್ಲಿ ಪರಿಶೀಲನೆ ಗೊಳಪಡಿಸಿ ಎಂದು ರಾಜಕೀಯ ಪಕ್ಷಗಳ ಮುಖಂಡರು ಮನವಿ ಮಾಡಿದರು.
Related Articles
Advertisement