Advertisement
ಜಮ್ಮುವಿನ ಬೀದಿಗಳಿಂದ ಕನ್ಯಾಕುಮಾರಿಯ ಕಡಲ ತಡಿಯವರೆಗೆ, ಕಚ್‌ನಿಂದ ಕೋಲ್ಕತ್ತಾದವರೆಗೆ ಬಿಜೆಪಿ ಕಾರ್ಯಕರ್ತರ ನೃತ್ಯಸಡಗರ ಗಮನ ಸೆಳೆದಿತ್ತು. ಅಯೋಧ್ಯೆಯಲ್ಲಿ ಸಾಧು- ಸಂತರ ಜೈಕಾರದ ಘೋಷಣೆ ಸರಯೂ ತೀರದ ಸಂಭ್ರಮವನ್ನು ರಂಗೇರಿಸಿತ್ತು. ಲಖನೌದ ಬೀದಿಗಳು ಕೇಸರಿ ಹೊದ್ದಂತೆ ರಾರಾಜಿಸುತ್ತಿದ್ದವು. ಜೆಸಿಬಿಗಳ ಮೇಲೆ ಕುಳಿತು ಸಂಭ್ರಮ ಹೊರಹಾಕುತ್ತಿದ್ದ ಕೇಸರಿಪಡೆ ಗಮನ ಸೆಳೆದಿತ್ತು.
Related Articles
ಇದು ಗೆದ್ದವರ ಕಥೆಯಾದರೆ, ಸೋತವರ ಪಾಡಂತೂ ಕೇಳುವುದೇ ಬೇಡ. ಒಂದು ಕಡೆಯಾದರೂ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಅಂತ ಕೈ ಪಕ್ಷದ ಬಾವುಟಗಳನ್ನು ಮಾರಾಟಕ್ಕೆ ತಂದಿದ್ದ ಕಾರ್ಯಕರ್ತ, ಫಲಿತಾಂಶ ಪ್ರಕಟಗೊಂಡ ಕೂಡಲೇ ಎಲ್ಲವನ್ನೂ ಬೀದಿಯಲ್ಲೇ ಬಿಟ್ಟು ಕಣ್ಮರೆಯಾಗಿದ್ದ. ಕೈ ಧುರೀಣರ ಭಾವಚಿತ್ರಗಳ ಮುಂದೆ ಆ ಬಾವುಟಗಳು ಅನಾಥವಿದ್ದಂತೆ ತೋರುತ್ತಿದ್ದವು. ಲಖನೌದಲ್ಲಿನ ಬಿಎಸ್ಪಿ, ಎಸ್ಪಿ, ಆರ್‌ಜೆಡಿ ಪಕ್ಷದ ಕಚೇರಿಗಳು ಕಾರ್ಯಕರ್ತರಿಲ್ಲದೆ ಭಣಗುಟ್ಟುತ್ತಿದ್ದ ದೃಶ್ಯ ಕಂಡುಬಂತು.
Advertisement
ಸೋತ ನಾಯಕರು ಬಂಗಲೆಗಳಾಚೆ ಕಾಲಿಡಲಿಲ್ಲ. ಗೆದ್ದವರು ಪಕ್ಷದ ಕಾರ್ಯಕರ್ತರ ನಡುವೆ ಸಿಹಿ ಹಂಚಿ, ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.