Advertisement

ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲಿಸಲು ಆಗ್ರಹ

01:17 PM Jun 23, 2022 | Team Udayavani |

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಕೋಲಿ ಕಬ್ಬಲಿಗ ಸಮಾಜದ ಬಡ ಕೂಲಿ ಕಾರ್ಮಿಕರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆ ಪ್ರಕರಣವನ್ನು 307ರ ಅಡಿ ದಾಖಲಿಸುವಂತೆ ಒತ್ತಾಯಿಸಿ ಗುರುವಾರ ಅಖೀಲ ಕರ್ನಾಟಕ ಕೋಲಿ, ಕಬ್ಬಲಿಗ, ಬುಡಕಟ್ಟು ಪಂಗಡಗಳ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು ಎಸ್ಪಿ ಇಶಾಪಂತ್‌ಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಇದೊಂದು ವ್ಯವಸ್ಥಿತವಾದ ಹಲ್ಲೆಯಾಗಿದೆ. ಏಳು ಜನ ಸೇರಿಕೊಂಡು ಬಸವರಾಜ ಉಡಗಿ, ದಯಾನಂದ ಜಮಾದಾರ ಮೇಲೆ ಹಲ್ಲೆ ಮಾಡಿದ್ದಾರೆ. ಕೈಗಳು ಮುರಿದಿವೆ. ತಲೆಗೆ ಗಂಭೀರ ಸ್ವರೂಪದ ಗಾಳಗಳಾಗಿವೆ. 9ಕ್ಕೂ ಹೆಚ್ಚು ಹೊಲಿಗೆ ಬಿದ್ದಿವೆ. ಈಗ ಇಬ್ಬರೂ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂ.17ರಂದು ಘಟನೆ ನಡೆದಿದ್ದರೂ ಮಂಗಳವಾರದ ವರೆಗೂ ಎಫ್‌ ಐಆರ್‌ ಆಗಿರಲಿಲ್ಲ. ಎಸ್ಪಿ ನಿರ್ದೇಶನದ ಮೇರೆಗೆ ಸಾದಾ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆದರೆ, 307ರ ಅಡಿಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲು ಮಾಡಿ ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಅಚ್ಚರಿ ಎಂದರೆ ಹಲ್ಲೆ ಮಾಡಿದ ಏಳು ಜನ ರಾಜಾರೋಷವಾಗಿ ಹೊರಗೆ ತಿರುಗಾಡುತ್ತಿದ್ದಾರೆ. ಪೊಲೀಸರು ಹಲ್ಲೆಗೊಳಗಾದವರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ 307 ಅಡಿ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಆಳಂದ ತಾಲೂಕು ಅಧ್ಯಕ್ಷ ಶರಣಪ್ಪ ನಾಟೀಕಾರ, ನಾಮದೇವ ಶಕಾಪುರೆ, ಮಹಾಂತೇಶ ಕೌಲಗಿ, ಲಕ್ಷ್ಮಿಬಾಯಿ ಉಡಗಿ, ಪಾರ್ವತಿ ಶಂಕರ ಜಮಾದಾರ, ಭೀಮಬಾಯಿ ಸೋಮಣ್ಣ ಕೋಳಿ, ಕಸ್ತೂರಿಬಾಯಿ ಹಲ್ಲೆಗೊಳಗಾದ ವ್ಯಕ್ತಿಗಳ ಕುಟುಂಬದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next