Advertisement

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

08:32 PM Apr 25, 2024 | Team Udayavani |

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಪರ ಪ್ರಚಾರಕ್ಕೆ ಜನರ ಸಂಯೋಜನೆ ವೇಳೆ ಮಹಿಳೆ ಮೇಲೆ ಹಲ್ಲೆಯಾಗಿರುವ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮಾರಿಕಾಂಬಾ ಟ್ರಸ್ಟ್‌ ಸಂಯೋಜಕಿ ಪೂರ್ಣಿಮಾ ಎಂಬುವವರ ಮೇಲೆ ಹಲ್ಲೆಯಾಗಿದೆ. ಏ.20ರಂದು ಸವರ್‌ಲೈನ್‌ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪೂರ್ಣಿಮಾ ಜನರನ್ನು ಸಂಯೋಜಿಸುತ್ತಿದ್ದರು. ಈ ಸಂದರ್ಭ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪೂರ್ಣಿಮಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈಶ್ವರಪ್ಪ ಪರ ಪ್ರಚಾರ ನಡೆಸದಂತೆ ಆಗ್ರಹಿಸಿ ಅಶ್ಲೀಲವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next