Advertisement

Bangalore: ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾದ ವ್ಯಕಿಯನ್ನು ಮನೆಗೆ ಕರೆಸಿ ಹಣಕ್ಕಾಗಿ ಹಲ್ಲೆ

01:16 PM Jan 20, 2024 | Team Udayavani |

ಬೆಂಗಳೂರು: ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯ ಮನೆಗೆ ಹೋದ ಯುವಕನೊಬ್ಬನಿಗೆ ದುಡ್ಡಿಗೆ ಬೇಡಿಕೆಯಿಟ್ಟು ಹಲ್ಲೆ ನಡೆಸಿದ ಆರೋಪದಡಿ ನಾಲ್ವರು ಆರೋಪಿಗಳ ವಿರುದ್ಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರಾಮಮೂರ್ತಿನಗರದ ನಿವಾಸಿ 34 ವರ್ಷದ ಹಲ್ಲೆಗೊಳಗಾದ ಯುವಕ. ಈತ ಕೊಟ್ಟ ದೂರಿನ ಆಧಾರದಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿರುವ 34 ವರ್ಷದ ಯುವಕ ಸಲಿಂಗಕಾಮಿಯಾಗಿದ್ದು, ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಸಕ್ರಿಯನಾಗಿದ್ದ. ಇದೇ ಆ್ಯಪ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬನ ಜತೆಗೆ ನಿರಂತರವಾಗಿ ಸಂಭಾಷಣೆ ನಡೆಸುತ್ತಿದ್ದ. ಇದಾದ ಕೆಲ ದಿನಗಳ ಬಳಿಕ ಅಪರಿಚಿತ ವ್ಯಕ್ತಿಯು ದೂರುರಾರನಿಗೆ ಮನೆಗೆ ಆಹ್ವಾನಿಸಿದ್ದ. ಜ.10ರಂದು ತಡರಾತ್ರಿ ತಾವರೆಕೆರೆಯಲ್ಲಿರುವ ಅಪರಿಚಿತ ವ್ಯಕ್ತಿಯ ಮನೆಗೆ ದೂರುದಾರ ಯುವಕ ಹೋಗಿದ್ದ. ಅಪರಿಚಿತನ ಮನೆಯೊಳಗೆ ಕಾಲಿಡುತ್ತಿದ್ದಂತೆ ಅಲ್ಲಿ ಇನ್ನೂ ಮೂವರು ಇರುವುದು ಕಂಡು ಬಂದಿತ್ತು.

ಇತ್ತ ದೂರುದಾರ ಬಂದ ಕೂಡಲೇ ಮನೆ ಬಾಗಿಲು ಹಾಕಿದ ಯುವಕರು ದುಡ್ಡು ನೀಡುವಂತೆ ಧಮ್ಕಿ ಹಾಕಿದ್ದರು. ಇತ್ತ ತನ್ನ ಬಳಿ ದುಡ್ಡಿಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬೆಲ್ಟ್ನಿಂದ ಹೊಡೆದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ನಂತರ ಅವರಿಂದ ತಪ್ಪಿಸಿಕೊಂಡು ಬಂದ ದೂರುದಾರ ಹೊಸೂರು ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜ.12ರಂದು ಮಡಿವಾಳ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next