Advertisement

ಹಲ್ಲೆ, ಮಾನಭಂಗ ಯತ್ನ : ಸೆರೆ

10:28 AM Feb 01, 2018 | |

ವಿಟ್ಲ: ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವ್ಯಕ್ತಿಗೆ ಹಲ್ಲೆ ನಡೆಸಿ, ಆತನ ಪತ್ನಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ವಿಟ್ಲ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Advertisement

ವಿಟ್ಲದ ಉಕ್ಕುಡ ಕಾಂತಡ್ಕ ನಿವಾಸಿ ಬಶೀರ್‌ ಬಂಧಿಸಲ್ಪಟ್ಟ ಆರೋಪಿ. ಕಾಂತಡ್ಕ ನಿವಾಸಿ ಮಹಮ್ಮದ್‌ ಶರೀಫ್‌ ಅವರು ಉಕ್ಕುಡದಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ  ಪತ್ನಿ ಜತೆ ಆಗಮಿಸಿದ್ದರು. ಇಲ್ಲಿಗೆ ಕಾಂತಡ್ಕ ನಿವಾಸಿಗಳಾದ ಇರ್ಷಾದ್‌, ಸಮದ್‌, ಹಕೀಂ ಹಾಗೂ ಬಶೀರ್‌ ಆಗಮಿಸಿದ್ದರು. ಈ ಪೈಕಿ ಇರ್ಷಾದ್‌ ಸಂಪ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಳುಮೆಣಸು ಕಳ್ಳತನ ಪ್ರಕರಣದ ಆರೋಪಿಯಾಗಿ ದ್ದನೆನ್ನಲಾಗಿದೆ. ಈ ಪ್ರಕರಣದ ಬಗ್ಗೆ ಮಹಮ್ಮದ್‌ ಶರೀಫ್‌ ಜತೆ ಜಗಳ ಆರಂಭಿಸಿದ ಇರ್ಷಾದ್‌, ನೀನು ನನ್ನ ವಿರುದ್ಧ  ಪೊಲೀಸರಿಗೆ ಮಾಹಿತಿ ನೀಡುತ್ತೀಯಾ ಎಂದು ಬೆದರಿಸಿ ಹಲ್ಲೆ ನಡೆಸಿದ್ದು, ತಡೆಯಲು ಬಂದ ಶರೀಫ್‌ ಅವರ ಪತ್ನಿಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next