ಬುಲಂದ್‌ಶಹರ್/ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪೊಲೀಸ್ ಇನ್ಸೆಫೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರ ಹೆಸರನ್ನು ಎಫ್ಐಆರ್‌ನಲ್ಲಿ ದಾಖಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಪೊಲೀಸರ ಕ್ರಮವನ್ನು ಘಟನೆ ನಡೆದ ನಯಾ ಬನ್ಸ್ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಒಬ್ಟಾತ ಗ್ರಾಮದಲ್ಲಿ ವಾಸ ಮಾಡು ತ್ತಿಲ್ಲ. ಮತ್ತೂಬ್ಬ ಹಿಂಸಾಚಾರ ನಡೆದ ದಿನ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಎಂದು ಹೇಳಿದ್ದಾರೆ. ಹೀಗಾಗಿ ಅವರ ಹೆಸರನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ಸೆಫೆಕ್ಟರ್ ಸುಬೋಧ್‌ರ ಕುಟುಂಬ ಸದಸ್ಯರನ್ನು ಲಕ್ನೋಗೆ ಕರೆಯಿಸಿಕೊಂಡು ಗುರುವಾರ ಸಾಂತ್ವನ ಹೇಳಲಿದ್ದಾರೆ. ಇದೇ ಘಟನೆಯ ರೂವಾರಿ ಎಂಬ ಆರೋಪಕ್ಕೆ ಗುರಿಯಾಗಿರುವ ಭಜರಂಗ ದಳ ನಾಯಕ ಯೋಗೇಶ್ ರಾಜ್ ತನ್ನದೇನೂ ತಪ್ಪಿಲ್ಲ ಎಂದು ಹೇಳಿಕೊಂಡಿರುವ ವಿಡಿಯೋ ಬಿಡುಗಡೆಯಾಗಿದೆ. ಈ ನಡುವೆ ಬುಲಂದ್‌ಶಹರ್ ಘಟನೆ ಬಾಬರಿ ಮಸೀದಿ ಧ್ವಂಸ ಘಟನೆ ವಾರ್ಷಿಕ ದಿನ ಸಮೀಪಿಸುತ್ತಿರು ವಂತೆಯೇ ನಡೆದ ಸಂಚು ಆಗಿರಬಹುದೆಂದು ಡಿಜಿಪಿ ಓ.ಪಿ.ಸಿಂಗ್ ಹೇಳಿದ್ದಾರೆ.