Advertisement

ಆಂತರಿಕ ಜಗಳ…ಅಸ್ಸಾಂ ವೀರಪ್ಪನ್, ಯುಪಿಆರ್ ಎಫ್ ಕಮಾಂಡರ್ ಗೆ ಗುಂಡಿಕ್ಕಿ ಹತ್ಯೆ

10:22 AM Jul 12, 2021 | Team Udayavani |

ಗುವಾಹಟಿ: ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್ ಎಫ್)ನ ಸ್ವಯಂ ಘೋಷಿತ ಕಮಾಂಡರ್ ನನ್ನು ಗುಂಪಿನ ಸದಸ್ಯರೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಶನಿವಾರ, ಭಾನುವಾರದ ಮಧ್ಯರಾತ್ರಿ ಅಸ್ಸಾಂನ ಕಾರ್ಬಿ ಅಂಗ್ಲಾಂಗ್ ಜಿಲ್ಲೆಯ ದಕ್ಷಿಣದ ಬೆಟ್ಟ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದ್ದು, ಯುಪಿಆರ್ ಎಫ್ ನ ಒಳಜಗಳದ ಪರಿಣಾಮ ಗುಂಪಿಗೆ ನಾಯಕ ಇಲ್ಲದಂತಾಗಿದೆ.

Advertisement

ಇದನ್ನೂ ಓದಿ:ಉಡುಪಿ: ಮಗು ಅಪಹರಿಸಿದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು

ಈತ ಅಸ್ಸಾಂನ ವೀರಪ್ಪನ್!
ಪೊಲೀಸರ ಮಾಹಿತಿ ಪ್ರಕಾರ, ಬೆಲೆ ಬಾಳುವ ಮರದ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಅಸ್ಸಾಂ ವೀರಪ್ಪನ್ ಎಂದೇ ಕುಖ್ಯಾತಿ ಹೊಂದಿರುವ ಮಂಗಿನ್ ಖಲ್ ಹೌ ಈ ಸಂಘಟನೆಯ ಏಕೈಕ ಹಿರಿಯ ಸದಸ್ಯನಾಗಿದ್ದ. ಕಳೆದ ಒಂದು ವರ್ಷದಲ್ಲಿ ಪೊಲೀಸರ ಎನ್ ಕೌಂಟರ್ ಗೆ ಯುಪಿಆರ್ ಎಫ್ ನ ಹಲವು ಮಂದಿ ಸಾವನ್ನಪ್ಪಿದ್ದರು, ಕೆಲವರು ಶರಣಾಗಿದ್ದರು ಎಂದು ವರದಿ ವಿವರಿಸಿದೆ.

ನಾಗಲ್ಯಾಂಡ್ ನ ವಾಣಿಜ್ಯ ಕೇಂದ್ರ ದಿಮಾಪುರ್ ನಿಂದ ಸುಮಾರು 15 ಕಿಲೋ ಮೀಟರ್ ದೂರದ ಹಾಗೂ ಅಂಗ್ಲಾಂಗ್ ಜಿಲ್ಲಾ ಕೇಂದ್ರ ದಿಫುವಿನಿಂದ 56 ಕಿಲೋ ಮೀಟರ್ ದೂರದಲ್ಲಿರುವ ಬೊಕಾಜನ್ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟ ಪ್ರದೇಶವಾದ ಖೆಂಗ್ ಪಿಬುಂಗ್ ನಲ್ಲಿ ಭಾನುವಾರ ಮಧ್ಯರಾತ್ರಿ ತಂಡದೊಳಗೆ ಒಳಜಗಳ ನಡೆದು, ವಿಕೋಪಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಮಾಂಡರ್ ಮಂಗಿನ್ ಖಲ್ ಹೌ ಜತೆಗಿನ ಜಗಳ ತಾರಕಕ್ಕೇರಿದ ಪರಿಣಾಮ ಜತೆಗಿದ್ದ ಇತರ ಸದಸ್ಯರೇ ಹಲವಾರು ಸುತ್ತು ಗುಂಡು ಹಾರಿಸಿ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಿನ್ ಶವವನ್ನು ಬೊಕಾಜನ್ ಆಸ್ಪತ್ರೆಗೆ ಮರಣೋತ್ತರ ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next