Advertisement
ಇಡೀ ಪ್ರಕ್ರಿಯೆಯನ್ನು ಯುಪಿಎ ಸರಕಾರದ ಅವಧಿಯಲ್ಲೇ ಶುರು ಮಾಡಿರುವುದರಿಂದ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರಕಾರದ ವಿರುದ್ಧ ತಿರುಗಿಬಿದ್ದಿ ದ್ದಾರೆ. 40 ಲಕ್ಷ ವಲಸಿಗರನ್ನು ಗುರುತಿಸಿರುವ ಈ ವರದಿಯಿಂದಾಗಿ ಆಂತರಿಕ ಯುದ್ಧ ಮತ್ತು ರಕ್ತಪಾತವೇ ಜರುಗೀತು ಎಂದು ಎಚ್ಚರಿಕೆ ನೀಡಿದ್ದಾರೆ. ಮಮತಾಗೆ ಎದಿರೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಈ ವಿಚಾರದಲ್ಲಿ ವಿಪಕ್ಷಗಳ ನಿಲುವು ಏನು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
Related Articles
ಅಸ್ಸಾಂನ ನಾಗರೀಕರ ರಾಷ್ಟ್ರೀಯ ನೋಂದಣಿಯ ಕರಡು ಪಟ್ಟಿಯ ಅಂಶಗಳ ಅನುಸಾರ ಯಾವುದೇ ನಿರ್ಣಯ ಜಾರಿ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಮತ್ತು ಅಸ್ಸಾಂ ಸರಕಾರಗಳಿಗೆ ಸೂಚನೆ ನೀಡಿದೆ. ಇದರ ಅಂತಿಮ ವರದಿ ಬರಲಿ, ಅಲ್ಲಿವರೆಗೆ ಈಗ ಗುರುತಿಸಲಾಗಿರುವ 40 ಲಕ್ಷ ಅಕ್ರಮ ವಲಸಿಗರಲ್ಲಿ ಯಾರನ್ನೂ ದೇಶದಿಂದ ಹೊರಗೆ ಹಾಕುವುದು ಅಥವಾ ಅವರ ವಿರುದ್ಧ ವಿಚಾರಣೆ ನಡೆಸುವುದನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ವರದಿ ಅನುಸಾರ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ಆ.16 ರಂದು ವರದಿ ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮಧ್ಯೆ, ಇಡೀ ಕರಡು ಪಟ್ಟಿಯನ್ನು ಎನ್‌ಆರ್‌ಸಿ ಸಂಚಾಲಕ ಪ್ರತೀಕ್ ಹಜೇಲಾ ಕೋರ್ಟ್ ಮುಂದೆ ಇಟ್ಟರು. ಜತೆಗೆ ಆ.7 ರಂದು ಇದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ ಎಂದರು.
Advertisement
ರಾಜ್ಯಸಭೆಯಲ್ಲೂ ಗದ್ದಲಸದನ ಆರಂಭವಾಗುತ್ತಿದ್ದಂತೆ ಟಿಎಂಸಿ ಸದಸ್ಯರು ಎನ್‌ಆರ್‌ಸಿ ಪಟ್ಟಿ ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದರು. ಈ ವೇಳೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಸರಕಾರವು ಈ ವರದಿ ಯನ್ನು ಸೂಕ್ಷ್ಮ ವಾಗಿ ಮತ್ತು ಮಾನವೀಯ ನೆಲೆಗಟ್ಟಿ ನಲ್ಲಿ ಒಪ್ಪಿಕೊಳ್ಳ ಬೇಕು ಎಂದು ಆಗ್ರಹಿಸಿದರು. ನಿಜವಾದ ಭಾರ ತೀಯ ಈ ಪಟ್ಟಿಯಿಂದ ಹೊರಗುಳಿಯುವಂತೆ ಮಾಡ ಬಾರದು ಎಂದೂ ಹೇಳಿದರು. ಭಾರತ, ಬಾಂಗ್ಲಾ ದೇಶದ ಜತೆ ಉತ್ತಮ ಸಂಬಂಧ ಇರಿಸಿ ಕೊಂಡಿ ರುವುದರಿಂದ ಇದು ಅಂತಾರಾಷ್ಟ್ರೀಯ ಸಮಸ್ಯೆಗೂ ಕಾರಣವಾಗಬಹುದು ಎಂಬ ಎಚ್ಚರಿಕೆ ಯನ್ನೂ ನೀಡಿದರು. ಇದೇ ವೇಳೆ, ಗದ್ದಲವೆಬ್ಬಿಸಿದ ಟಿಎಂಸಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಮಿತ್ ಶಾ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ವರದಿ ತಯಾರಿಸಲಾಗಿದೆ ಎಂದರು. ಅಲ್ಲದೆ ಈ ವರದಿ ಒಪ್ಪಿಕೊಳ್ಳಲು ಕಾಂಗ್ರೆಸ್‌ನವರಿಗೆ ಧೈರ್ಯವಿಲ್ಲ ಎಂದು ವ್ಯಂಗ್ಯವಾ ಡಿದರು. ಅಸ್ಸಾಂ ಸಂಸದ ಬಿಸ್ವಜಿತ್ ಡೈಮರಿ (ಬಿಪಿ ಎಫ್) ಮಾತನಾಡಿ, ಕೆಲ ತಾಂತ್ರಿಕ ತೊಂದರೆಯಿಂ ದಾಗಿ ಹೆಸರುಗಳು ಬಿಟ್ಟು ಹೋಗಿವೆ. ಮುಂದೆಯೂ ಹೆಸರು ಸೇರಿಸಲು ಅವಕಾಶವಿದೆ. ಸರಿಯಾದ ದಾಖಲೆ ನೀಡಿದರೆ ಸೇರಿಕೊಳ್ಳಬಹುದು ಎಂದರು. ಕಾಂಗ್ರೆಸ್‌ನಲ್ಲಿ ಗೊಂದಲ
ಈ ಪಟ್ಟಿ ವಿರೋಧಿಸಬೇಕೇ, ಒಪ್ಪಿಕೊಳ್ಳಬೇಕೇ ಎಂಬ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲವಿದೆ. ಏಕೆಂದರೆ, ಅಸ್ಸಾಂನ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ತರುಣ್ ಗೊಗೋಯ್ ಬಹಿರಂಗವಾಗಿಯೇ ಎನ್‌ಆರ್‌ಸಿ ತಮ್ಮದೇ ಐಡಿಯಾ ಎಂದು ಸಾರಿಬಿಟ್ಟಿದ್ದಾರೆ. ಅಸ್ಸಾಂ ಒಪ್ಪಂದದಲ್ಲಿ ಇದು ಇರಲೇ ಇಲ್ಲ, ನಾನೇ ಇದನ್ನು ಶುರು ಮಾಡಿದ್ದು. ಬಳಿಕ ಇದಕ್ಕೆ ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆ ಸಿಕ್ಕಿತು ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಉಳಿದ ನಾಯಕರು ಈ ವರದಿ ವಿಚಾರದಲ್ಲಿ ಅಳೆದು ತೂಗಿ ಹೇಳಿಕೆ ನೀಡುತ್ತಿದ್ದಾರೆ.