Advertisement

ಅಸ್ಸಾಂ ಇನ್ನೂ ಅಸ್ಥಿರ:ಈವರೆಗೆ 108 ಸಾವು: ಬ್ರಹ್ಮಪುತ್ರಾ ಇನ್ನಿತರ ನದಿಗಳಲ್ಲಿ ಇಳಿಯದ ಉಬ್ಬರ

10:29 PM Jun 24, 2022 | Team Udayavani |

ಗುವಾಹಟಿ: ಅಸ್ಸಾಂನಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಸಂಬಂಧಿತ ಅವಘಡಗಳು ಮುಂದುವರಿದಿವೆ. ಶುಕ್ರವಾರದ ಹೊತ್ತಿಗೆ, ಆ ರಾಜ್ಯದಲ್ಲಿ ಮಳೆಯಿಂದಾಗಿ ಸಂಭವಿಸಿರುವ ಸಾವಿನ ಸಂಖ್ಯೆ 108ಕ್ಕೇರಿದೆ.

Advertisement

ಪ್ರವಾಹ ಪೀಡಿತ ಕೆಲ ಪ್ರದೇಶಗಳಲ್ಲಿ ನೀರು ಕೊಂಚ ಇಳಿಕೆಯಾಗುತ್ತಿದೆಯಾದರೂ, ಬ್ರಹ್ಮಪುತ್ರ ಹಾಗೂ ಬರಾಕ್‌ ನದಿಗಳಲ್ಲಿನ ಉಬ್ಬರ ಇಳಿಕೆಯಾಗಿಲ್ಲ. ಸುಮಾರು 45.34 ಲಕ್ಷ ಜನರು ಇನ್ನೂ ಸೂಕ್ತ ನೆಲೆಯಿಲ್ಲದೆ ಪರದಾಡುವಂಥ ಪರಿಸ್ಥಿತಿ ಏರ್ಪಟ್ಟಿದೆ. ಬರಾಕ್‌ ಕಣಿವೆಯ ರಹದಾರಿ ಎಂದೇ ಕರೆಯಲ್ಪಡುವ ಸಿಲ್ಚಾರ್‌ನ ಬಹುತೇಕ ಪ್ರಾಂತ್ಯಗಳು ಮುಳುಗಡೆಯಾಗಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 207 ಸಿಬ್ಬಂದಿಯನ್ನು ಇಟಾನಗರ ಹಾಗೂ ಭುವನೇಶ್ವರದಿಂದ ಕರೆಯಿಸಿಕೊಳ್ಳಲಾಗಿದೆ. ಜೊತೆಗೆ, ದಿಂಪುರದಿಂದ ಸೇನೆಯ 120 ಯೋಧರ ತಂಡವನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ಸಿಲ್ಚಾರ್‌ನ ಜಲಾವೃತ ಪ್ರದೇಶಗಳಲ್ಲಿನ ಕಾರ್ಯಾಚರಣೆಗೆ 9 ದೋಣಿಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next