ಗುವಾಹಟಿ/ಶಿಲ್ಲಾಂಗ್: ಅಸ್ಸಾಂ ಮತ್ತು ಮೇಘಾಲಯ ನಡುವೆ ಕೆಲವು ಸಮಯದಿಂದ ತಣ್ಣಗಿದ್ದ ಗಡಿ ಬಿಕ್ಕಟ್ಟು ಮಂಗಳವಾರ ಏಕಾಏಕಿ ಸ್ಫೋಟಗೊಂಡಿದೆ.
ಅದಕ್ಕೆ ಸಂಬಂಧಿಸಿದ ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ ಆರು ಮಂದಿ ಅಸುನೀಗಿದ್ದಾರೆ. ಅಸ್ಸಾಂನಿಂದ ಮೇಘಾಲಯಕ್ಕೆ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪಶ್ಚಿಮ ಕಬ್ರಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಇರುವ ಗಡಿ ಪ್ರದೇಶದಲ್ಲಿ ತಡೆದು ನಿಲ್ಲಿಸಲಾಗಿತ್ತು. ಅದರಿಂದಾಗಿ ಹಿಂಸಾಚಾರ ಉಂಟಾಗಿದೆ.
ಗಡಿ ಬಿಕ್ಕಟ್ಟಿನ ಬಗ್ಗೆ ಕೂಡಲೇ ಪರಿಹಾರ ಕಂಡುಕೊಳ್ಳಲು ನೆರವಾಗಬೇಕು. ಅಸ್ಸಾಂನ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಅಕ್ರಮವಾಗಿ ಪ್ರವೇಶಿಸಿ ಗುಂಡು ಹಾರಿಸಿದ್ದಾರೆ ಎಂದು ಮೇಘಾಲಯ ಸಿಎಂ ಕೊನಾರ್ಡ್ ಸಂಗ್ಮಾ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಗೆ ದೂರು ನೀಡಿದ್ದಾರೆ.