Advertisement

ಬಹುಪತ್ನಿತ್ವ ನಿಷೇಧಿಸಲು ಮುಂದಾದ ಅಸ್ಸಾಂ ಸರ್ಕಾರ: ತಜ್ಞರ ಸಮಿತಿ ರಚನೆ

05:45 PM May 09, 2023 | Team Udayavani |

ದಿಸ್ಪುರ: ಬಹುಪತ್ನಿತ್ವದ ಮೇಲೆ ರಾಜ್ಯವು ನಿಷೇಧ ಹೇರಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ನಿರ್ಧಾರದ ಕಾನೂನು ಬದ್ಧತೆಯ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.

Advertisement

“ನಾವು ಏಕರೂಪ ನಾಗರಿಕ ಸಂಹಿತೆಯನ್ನು ಬಳಸುತ್ತಿಲ್ಲ, ಬದಲಿಗೆ ಬಹುಪತ್ನಿತ್ವವನ್ನು ನಿಷೇಧಿಸಲು ರಾಜ್ಯ ಕಾಯಿದೆಯನ್ನು ತರುತ್ತೇವೆ. ಬಹುಪತ್ನಿತ್ವವನ್ನು ನಿಷೇಧಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆಯೇ ಎಂದು ತನಿಖೆ ಮಾಡಲು ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಅಸ್ಸಾಂ ಸರ್ಕಾರವು ರಾಜ್ಯದಲ್ಲಿ ಬಹುಪತ್ನಿತ್ವವನ್ನು ಕಾನೂನು ಬಾಹಿರಗೊಳಿಸಲು ಬಯಸುತ್ತದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಶರ್ಮಾ ಹೇಳಿದರು.

ಇದನ್ನೂ ಓದಿ:ಕನ್ನಡ ಚಿತ್ರರಂಗದ PRO ಸುಧೀಂದ್ರ ವೆಂಕಟೇಶ್ ಪುತ್ರಿ ವಿವಾಹದಲ್ಲಿ Sandalwood ತಾರೆಯರು

ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೇ ಎಂದು ತಜ್ಞರ ಸಮಿತಿಯು ತನಿಖೆ ನಡೆಸಲಿದೆ.

ಸಮಿತಿಯು ಸಂವಿಧಾನದ 25 ನೇ ವಿಧಿಯೊಂದಿಗೆ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ, 1937 ರ ನಿಬಂಧನೆಗಳನ್ನು ಪರಿಶೀಲಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next