Advertisement

ಅಸ್ಸಾಂ,ಈಶಾನ್ಯ ರಾಜ್ಯಗಳಲ್ಲಿ  ಭೀಕರ ಪ್ರವಾಹ:ಸಾವಿನ ಸಂಖ್ಯೆ 85

10:39 AM Jul 14, 2017 | Team Udayavani |

ಗುವಾಹಟಿ : ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಭೀಕರ ಪ್ರವಾಹ ಕಾಣಿಸಿಕೊಂಡಿದ್ದು 85ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 20 ಲಕ್ಷಕ್ಕೂ ಹೆಚ್ಚು ಜನ ಸಂತತ್ರಸ್ತರಾಗಿದ್ದಾರೆ. 

Advertisement

ಅಸ್ಸಾಂನ ನ 26 ಜಿಲ್ಲೆಗಳಲ್ಲಿ 17 ಲಕ್ಷ ಜನ ಸಂತ್ರಸ್ತರಾಗಿದ್ದು ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೇರಿದೆ. ಬ್ರಹ್ಮಪುತ್ರ ಸೇರಿದಂತೆ ಇತರ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹಲವು ಪಟ್ಟಣಗಳು ಜಲಾವೃತಗೊಂಡಿದ್ದು, ಕಟ್ಟಡಗಳು, ಮನೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. 

ಕಾಝಿರಂಗ ರಾಷ್ಟ್ರೀಯ ಉದ್ಯಾನವನದ 70 ಶೇಕಡಾ ಭಾಗ ಜಲಾವೃತ್ತವಾಗಿದೆ. ಹಲವು ಪ್ರಾಣಿಗಳು ಸಾವನ್ನಪ್ಪಿದ್ದು ಕೆಲವು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ. ಗೋಲಘಾಟ್‌, ಲಕ್ಕೀಂಪುರ್‌, ನಾಗೌನ್‌ನಲ್ಲಿ ಅತೀಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 86,000 ಹೆಕ್ಟೇರ್‌ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. 

ಪ್ರವಾಹ ಪೀಡಿತ ಪ್ರದೇಶಗಳಲ್ಲಿ  ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ  ಸರ್ಕಾರವೂ ನೆರವಿಗೆ ಧಾವಿಸಿದ್ದು, ಈವಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿತೇಂದ್ರ ಸಿಂಗ್‌ ವೈಮಾನಿಕ ಸಮೀಕ್ಷೆ ನಡೆಸಿದ್ದು ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ತರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next