Advertisement

ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 101ಕ್ಕೇರಿಕೆ

11:36 PM Jun 23, 2022 | Team Udayavani |

ಗುವಾಹಾಟಿ/ಜಮ್ಮು: ಅಸ್ಸಾಂನಲ್ಲಿ ವಿಪರೀತ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಗುರುವಾರ ಮತ್ತೆ 12 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 101ಕ್ಕೇರಿದ್ದು, 54.5 ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಪ್ರವಾಹ ಹಿನ್ನೆಲೆಯಲ್ಲಿ ಅಸ್ಸಾಂ ಶಾಲೆಗಳಿಗೆ ಒಂದು ವಾರ ಮೊದಲೇ ಬೇಸಗೆ ರಜೆ ಘೋಷಿಸಲಾಗಿದೆ. ಜುಲೈ 1ರಿಂದ ಜು.31ರ ಬದಲಾಗಿ ಜೂ. 25ರಿಂದ ರಜೆ ಆರಂಭವಾಗಿ ಜು. 25ರ ವರೆಗೆ ಬೇಸಗೆ ರಜೆ ಇರಲಿದೆ ಎಂದು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮಳೆ, ಭೂಕುಸಿತದಿಂದ ಮುಚ್ಚಿಹೋಗಿದ್ದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಪೇರಿ ಕೆಲಸ ಭರದಿಂದ ಸಾಗಿದೆ. ರಸ್ತೆ ಮೇಲೆ ಬಿದ್ದಿದ್ದ ಬಂಡೆ ಕಲ್ಲುಗಳನ್ನು ಸ್ಫೋಟಕಗಳ ಮೂಲಕ ಒಡೆದು ಹಾಕಿ, ರಸ್ತೆ ತೆರವು ಮಾಡಲಾಗಿದೆ. ಸಾಲುಗಟ್ಟಿ ನಿಂತಿದ್ದ ಸುಮಾರು 700 ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next