Advertisement

ಜೂನ್ 16ರವರೆಗೆ ಕೋವಿಡ್ ಲಾಕ್ ಡೌನ್ ವಿಸ್ತರಣೆ: ಅಸ್ಸಾಂ ಸರ್ಕಾರ ಘೋಷಣೆ

11:01 AM Jun 05, 2021 | Team Udayavani |

ನವದೆಹಲಿ: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಜೂನ್ 16ರವರೆಗೆ ಲಾಕ್ ಡೌನ್ ನಿರ್ಬಂಧವನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ. ನಿಗದಿಯಂತೆ ಜೂನ್ 5ರಂದು ಕೋವಿಡ್ ಲಾಕ್ ಡೌನ್ ಅವಧಿ ಮುಕ್ತಾಯಗೊಂಡಿದ್ದು, ಸೋಂಕು ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಇನ್ನೂ 10 ದಿನಗಳ ಕಾಲ ಮುಂದುವರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

Advertisement

ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರ ರಾಜ್ಯದಲ್ಲಿ ಕರ್ಫ್ಯೂ ಸಮಯವನ್ನು ಮಧ್ಯಾಹ್ನ 1ರಿಂದ ಮುಂಜಾನೆ 5ಗಂಟೆಗೆ ಇಳಿಸಿರುವುದಾಗಿ ಘೋಷಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆ, 2005ರ ಪ್ರಕಾರ ರಾಜ್ಯದಲ್ಲಿ ಜೂನ್ 6ರ ಬೆಳಗ್ಗೆ 5ಗಂಟೆಯಿಂದ ಜೂನ್ 16ರ ಬೆಳಗ್ಗೆ 5ಗಂಟೆವರೆಗೆ ಲಾಕ್ ಡೌನ್ ವಿಸ್ತರಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.

ಜೂನ್ 15ರವರೆಗೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು ಬಂದ್ ಆಗಿರಲಿದೆ. ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಚಟುವಟಿಕೆಗಳು ಮಧ್ಯಾಹ್ನ 12ಗಂಟೆಗೆ ಬಂದ್ ಮಾಡುವಂತೆ ಆದೇಶದಲ್ಲಿ ವಿವರಿಸಿದೆ.ರಾಜ್ಯದಲ್ಲಿ ಮಧ್ಯಾಹ್ನ 1ಗಂಟೆಯಿಂದ ಮುಂಜಾನೆ 5ಗಂಟೆವರೆಗೆ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ.

ಮಧ್ಯಾಹ್ನ 1ಗಂಟೆವರೆಗೆ ಜನರು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ನಂತರ ಹೋಮ್ ಡೆಲಿವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ರೆಸ್ಟೋರೆಂಟ್, ಹೋಟೆಲ್ ಗಳು ಮಧ್ಯಾಹ್ನ 12ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next